ನಾನು ಸಿಎಂ ಆಗೋದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ : ಎಚ್‍ಡಿಕೆ

ಚನ್ನಪಟ್ಟಣ,ಫೆ.28- ನಾಡಿನ ಜನರ ಆಶೀರ್ವಾದವಿದ್ದು ನಾನು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ,ವಿಶ್ವಾಸ ವ್ಯಕ್ತಪಡಿಸಿದರು. ಬಮೂಲ್ ನಿರ್ದೇಶಕ ಹೆಚ್.ಸಿ.ಜಯಮುತ್ತು ಅವರ ನೇತೃತ್ವದಲ್ಲಿ ನಗರದ ಹೊರಬಲಯದ ದೊಡ್ಡಮಳೂರು ಬಳಿ ಬೃಹತ್ ವೇದಿಕೆಯಲ್ಲಿ ಆಯೋಜಿಸಿದ್ದ ಬೊಂಬೆನಾಡಿನ ಬಮೂಲ್ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಬಡವರು, ರೈತ ಪರವಾದ ಜೆಡಿಎಸ್ ಸ್ವತಂತ್ರ ಸರ್ಕಾರವನ್ನು ತರಲು ಹೊರಟಿರುವ ನಮಗೆ ದೇವರ ಅನುಗ್ರಹ ಹಾಗೂ ನಾಡಿನ ಜನತೆಯ ಆಶೀರ್ವಾದವಿದ್ದು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ 120 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬರಲಿದೆ. ನಾನು […]

ಕುಡಿದು ಕೋರ್ಟ್‍ಗೆ ಬಂದ ಕಕ್ಷಿದಾರನಿಗೆ ದಂಡ

ಚನ್ನಪಟ್ಟಣ, ನ.25-ನ್ಯಾಯಾಲಯದ ಕಲಾಪದ ಸಂದರ್ಭದಲ್ಲಿ ಕುಡಿದು ಬಂದಿದ್ದ ಕಕ್ಷಿದಾರನಿಗೆ ನ್ಯಾಯಾೀಧಿಶರು ದಂಡ ವಿಧಿಸಿ ಎಚ್ಚರಿಕೆ ನೀಡಿರುವ ಘಟನೆ ನಗರದ ನ್ಯಾಯಾಲಯದಲ್ಲಿ ನಡೆದಿದೆ. ತಾಲ್ಲೂಕಿನ ಗ್ರಾಮದವರಾದ ಸುಮಾರು 45 ವರ್ಷದ ವ್ಯಕ್ತಿಯೊರ್ವರು ನ್ಯಾಯಾಲಯದಲ್ಲಿ ತಮ್ಮ ಜಮೀನಿನ ಪ್ರಕರಣವೊಂದರಲ್ಲಿ ಕಕ್ಷಿದಾರನಾಗಿದ್ದ ಆತ ನ್ಯಾಯಾಲಯಕ್ಕೆ ಕುಡಿದು ಬಂದಿದ್ದನೆಂದು ಹೇಳಲಾಗಿದ್ದು, ಕಟಕಟ್ಟೆಯಲ್ಲಿಯೂ ಆತನ ತೊದಲು ನುಡಿಗಳನ್ನು ಆಲಿಸಿದ ಮಾನ್ಯ ನ್ಯಾಯಾೀಧಿಶರು ಕೂಡಲೇ ಆತನಿಗೆ ದಂಡವಿಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ನ್ಯಾಯದೇವತೆಯ ಸ್ಥಾನವಾಗಿರುವ ಪವಿತ್ರವಾದ ನ್ಯಾಯಾಲಯದಲ್ಲಿ ಪಾನಮತ್ತನಾಗಿ ಪ್ರವೇಶ ಮಾಡಿದ್ದು ಅಲ್ಲದೆ ತನ್ನ ಸರದಿಯ ಸಂದರ್ಭದಲ್ಲಿ […]

ಮಹಿಳೆಯನ್ನು ತುಳಿದು ಕೊಂದ ಒಂಟಿ ಸಲಗ

ಚನ್ನಪಟ್ಟಣ, ಆ.9- ಬೆಳ್ಳಂಬೆಳಗ್ಗೆ ಒಂಟಿ ಸಲಗವೊಂದು ಮಹಿಳೆ ಮೇಲೆ ದಾಳಿ ಮಾಡಿ ತುಳಿದು ಸಾಯಿಸಿರುವ ಘಟನೆ ಚೆನ್ನಮ್ಮನ ಹೊಸ ಹಳ್ಳಿ ಬಳಿ ನಡೆದಿದೆ. ಸಿದ್ದಪ್ಪಾಜಿ ದೇವಾಲಯ ಅರ್ಚಕ ಚೆನ್ನಪ್ಪ ಅವರ ಪತ್ನಿ ಚೆನ್ನಮ್ಮ(65) ಆನೆ ದಾಳಿಗೆ ಒಳಗಾಗಿ ಮೃತಪಟ್ಟಿರುವ ಮಹಿಳೆ. ಎಂದಿನಂತೆ ಇಂದು ಬೆಳಗಿನ ಜಾವ 5.30ರ ಸುಮಾರಿನಲ್ಲಿ ಚೆನ್ನಮ್ಮ ಅವರು ತೋಟಕ್ಕೆ ಹೋಗಿ ಹಸುವಿನ ಹಾಲು ಕರೆಯುತ್ತಿದ್ದಾಗ ಏಕಾಏಕಿ ಅವರ ಮೇಲೆ ಒಂಟಿ ಸಲಗವೊಂದು ದಾಳಿ ಮಾಡಿ ತುಳಿದಿದೆ. ಮಹಿಳೆಯ ಕೂಗಾಟ, ಚೀರಾಟ ಕೇಳಿ ಅಕ್ಕ-ಪಕ್ಕದವರು […]