Thursday, December 5, 2024
Homeಕ್ರೀಡಾ ಸುದ್ದಿ | Sportsಚನ್ನಪಟ್ಟಣ : ಲಾರಿಗೆ ಫಾರ್ಚುನರ್‌ ಕಾರು ಡಿಕ್ಕಿಯಾಗಿ ಇಬ್ಬರ ಸಾವು

ಚನ್ನಪಟ್ಟಣ : ಲಾರಿಗೆ ಫಾರ್ಚುನರ್‌ ಕಾರು ಡಿಕ್ಕಿಯಾಗಿ ಇಬ್ಬರ ಸಾವು

Channapatna: Two killed as Fortuner car collides with lorry

ಚನ್ನಪಟ್ಟಣ,ನ.22- ಯಾವುದೇ ಮುನ್ಸೂಚನೆ ನೀಡದೆ ತಿರುವು ಪಡೆಯುತ್ತಿದ್ದ ಲಾರಿಗೆ ಅತಿವೇಗವಾಗಿ ಬಂದ ಫಾರ್ಚುನರ್‌ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಧಾರುಣವಾಗಿ ಸಾವನಪ್ಪಿರುವ ಘಟನೆ ಕೋಲೂರುಗೇಟ್‌ ಬ್ರಿಡ್ಜ್ ಬಳಿಯ ಹೈವೆಯಲ್ಲಿ ನಡೆದಿದೆ.

ಮೃತರನ್ನು ಡಾರೇಲ್‌ ನೋವ ಆಲೇನ್‌ ವೇಜ್‌ (55)) ರೋಸ್‌‍ ಪ್ರಾನ್ಸಿಸ್‌‍ (40) ಎಂದು ಗುರುತಿಸಲಾಗಿದೆ. ಗೋವಾ ಮೂಲದವರಾದ ಇವರು ಗೇವಾದಿಂದ ಊಟಿಗೆ ಪ್ರವಾಸಕ್ಕೆ ಹೋಗಲು ಬೆಂಗಳೂರು ಮಾರ್ಗವಾಗಿ ಮೈಸೂರಿಗೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ.

ಜಿ.ಎ.03-ಎ,ಏಫ್‌ 8828 ಸಂಖ್ಯೆಯ ಪಾರ್ಚುನರ್‌ಕಾರ್‌ನಲ್ಲಿ ಸಂಚರಿಸುವ ಸಂದರ್ಭದಲ್ಲಿಕೋಲೂರುಗೇಟ್‌ ಬಳಿಯ ಬ್ರಿಡ್‌್ಜ ಮೇಲಿನ ಬೆಂಗಳೂರು ಮೈಸೂರು ಹೈವೆಯರಸ್ತೆ ಬದಿಯಲ್ಲಿ ನಿಂತಿದ್ದ ಲಾರಿ,ಯಾವುದೇ ಮುನ್ಸೂಚನೆ ಇಲ್ಲದೆ ಏಕಾಎಕಿ ತಿರುವು ಪಡೆದ ಸಂದರ್ಭದಲ್ಲಿ ಇದರ ಅರಿವಿಲ್ಲದೆ ಬಂದ ಕಾರು ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ.

ಮೃತರ ದೇಹಗಳು ಛಿದ್ರವಾಗಿದ್ದು, ಅಫಘಾತದ ತೀವ್ರತೆಯನ್ನು ಬಿಂಬಿಸಿತ್ತು ಎಂದು ಹೇಳಲಾಗಿದ್ದು, ಕಾರಿನಲ್ಲಿದ್ದ ನೀಲ್‌ ಫರಿಯೋ, ರೋಸ್‌‍ ಪ್ರಾನ್ಸಿಸ್‌‍ರವರ ಪುತ್ರ ನತನ್‌ರೆಟ್ಟಿ ಮಜೋವಾಜೆ ಹಾಗೂ ಚಾಲಕ ನತನ್‌ ಹೇಟ್‌ ಮಿಮಜೋಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಪ್ರಕರರಣದ ಬಗ್ಗೆ ಸಂಚಾರಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.

RELATED ARTICLES

Latest News