Thursday, December 5, 2024
Homeಜಿಲ್ಲಾ ಸುದ್ದಿಗಳು | District Newsಊರೊಳಗೆ ಬಂದ ನರಿ ಮರಿ, ಆರೈಕೆ ಮಾಡಿ ಅರಣ್ಯ ಇಲಾಖೆಗೊಪ್ಪಿಸಿದ ಗ್ರಾಮಸ್ಥರು

ಊರೊಳಗೆ ಬಂದ ನರಿ ಮರಿ, ಆರೈಕೆ ಮಾಡಿ ಅರಣ್ಯ ಇಲಾಖೆಗೊಪ್ಪಿಸಿದ ಗ್ರಾಮಸ್ಥರು

fox in town

ದೊಡ್ಡಬಳ್ಳಾಪುರ,ನ.21- ತಾಲೂಕಿನ ತೂಬಗೆರೆ ಬಸ್‌‍ ನಿಲ್ದಾಣದಲ್ಲಿ ನರಿ ಮರಿಯೊಂದು ಪತ್ತೆಯಾಗಿದೆ. ಗ್ರಾಮದ ನಿವಾಸಿ ಸಾಲಿ ಮುನಿರಾಜು ಮತ್ತು ಸ್ನೇಹಿತರು ಮುಂಜಾನೆ ವಾಕಿಂಗ್‌ ಹೋಗುವಾಗ ನಾಯಿಗಳ ಹಿಂಡು ಈ ಪುಟ್ಟ ನರಿ ಮರಿ ಮೇಲೆ ದಾಳಿ ಮಾಡುತ್ತಿರುವುದನ್ನು ಕಂಡ ದಾರಿಹೋಕರು ಅದನ್ನು ರಕ್ಷಿಸಿ ಆರೈಕೆ ಮಾಡಿ, ಅರಣ್ಯ ಇಲಾಖೆಯವರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಉಪ ವಲಯ ಅರಣ್ಯಾಧಿಕಾರಿ ಚಂದ್ರಶೇಖರ್‌ ನರಿಯನ್ನು ವಶಕ್ಕೆ ಪಡೆದು, ಕಾಡುಪ್ರಾಣಿಯನ್ನು ರಕ್ಷಿಸಿದ ಮುನಿರಾಜು, ಶ್ರೀಧರ, ನಾಗರಾಜು ಅವರಿಗೆ ಕೃತಜ್ಞತೆ ತಿಳಿಸಿದ್ದಾರೆ. ನರಿಮರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಮರಳಿ ಕಾಡಿಗೆ ಬಿಡಲಾಗಿದೆ ಎಂದು ಆರ್‌ ಎಫ್‌ ಒ ಕೃಷ್ಣೇಗೌಡ ತಿಳಿಸಿದ್ದಾರೆ.

RELATED ARTICLES

Latest News