Thursday, December 5, 2024
Homeಜಿಲ್ಲಾ ಸುದ್ದಿಗಳು | District Newsತುಮಕೂರು | Tumakuruಕುಣಿಗಲ್‌ : ಉಳುಮೆ ಮಾಡುತ್ತಿದ್ದಾಗ ಟ್ರಾಕ್ಟರ್‌ ಹಳ್ಳಕ್ಕೆ ಉರುಳಿಬಿದ್ದು ರೈತ ಸಾವು

ಕುಣಿಗಲ್‌ : ಉಳುಮೆ ಮಾಡುತ್ತಿದ್ದಾಗ ಟ್ರಾಕ್ಟರ್‌ ಹಳ್ಳಕ್ಕೆ ಉರುಳಿಬಿದ್ದು ರೈತ ಸಾವು

Kunigal: Farmer dies after tractor falls into ravine

ಕುಣಿಗಲ್‌,ನ.22- ತೆಂಗಿನ ತೋಟದಲ್ಲಿ ಉಳುಮೆ ಮಾಡುತ್ತಿದ್ದಾಗ ಟ್ರಾಕ್ಟರ್‌ ಹಳ್ಳಕ್ಕೆ ಉರುಳಿಬಿದ್ದು ರೈತನೊಬ್ಬ ಸಾವನಪ್ಪಿರುವ ಘಟನೆ ಅಮೃತೂರು ಪೋಲಿಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಂದನ್‌(29) ಮೃಪಟ್ಟ ರೈತ. ತಾಲ್ಲೂಕಿನ ಬಸವಮತ್ತಿಕೆರೆ ಗ್ರಾಮದವರಾದ ಇವರು ತೋಟದಲ್ಲಿ ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ ತೋಟದ ಪಕ್ಕದಲ್ಲೇ ಹಳ್ಳವಿದ್ದರಿಂದ ಆಯತಪ್ಪಿ ಟ್ರಾಕ್ಟರ್‌ ಉರುಳಿಬಿದ್ದಿದ್ದರಿಂದ ಚಕ್ರದಡಿ ಸಿಲುಕಿ ಮೃತಪಟ್ಟಿದ್ದಾರೆ. ರಾತ್ರಿಯಾದರೂ ಮನೆಗೆ ಗಂಡ ಬಾರದೆ ಇದ್ದುದ್ದನ್ನು ಕಂಡು ಪತ್ನಿ ತೋಟಕ್ಕೆ ಹೋಗಿ ನೋಡಿದಾಗ ನಂದನ್‌ ಸಾವನ್ನಪ್ಪಿರುವುದು ಗೊತ್ತಾಗಿದೆ.

ತಕ್ಷಣವೇ ಗ್ರಾಮಸ್ಥರ ಸಹಾಯದಿಂದ ಜೆ.ಸಿ.ಬಿ ಮುಖಾಂತರ ಟ್ರಾಕ್ಟರ್‌ ಮೇಲೆತ್ತಿ ಶವ ಹೊರತೆಗೆಯಲಾಗಿದೆ. ಘಟನೆ ಸಂಬಂಧ ಅಮೃತೂರು ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಫೋಟೋಗ್ರಾಫರ್‌ ತೀರ್ಥ (38) ಸ್ಥಳದಲ್ಲೆ ಸಾವನಪ್ಪಿದ್ದಾರೆ. ಈತ ಕುಣಿಗಲ್‌ ಕಡೆಯಿಂದ ಸಂತೆ ಮಾವತ್ತೂರುಗೆ ತೆರಳುವ ವೇಳೆ ಗವಿಮಠದ ಬಳಿ ಎದುರುಗಡೆ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ.
ಘಟಮೆ ಸಂಬಂಧ ಕುಣಿಗಲ್‌ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

Latest News