ಅದೃಷ್ಟಕ್ಕಾಗಿ ನರಿ ಸಾಕಿದ್ದ ವ್ಯಕ್ತಿ ಅರೆಸ್ಟ್

ತುಮಕೂರು, ಫೆ.28- ಬೆಳಗ್ಗೆ ಎದ್ದು ನರಿ ಮುಖ ನೋಡಿದರೆ ಅದೃಷ್ಟ ಒಲಿಯುತ್ತದೆ ಎಂದು ಕೆಲವರು ಜೋಡಿ ನರಿಗಳಫೋಟೋಗಳನ್ನು ಮನೆಯಲ್ಲಿಟ್ಟುಕೊಳ್ಳುತ್ತಿದ್ದನ್ನು ನೋಡಿದ್ದೇವೆ. ಆದರೆ, ಇನ್ನೊಬ್ಬ ಮೂಢನಂಬಿಕೆಗೆ ಜೋತುಬಿದ್ದು ಜೀವಂತ ನರಿಯನ್ನು ಕೋಳಿಫಾರಂನಲ್ಲಿ ಸಾಕಿ ಬಂಧನಕ್ಕೊಳಗಾಗಿದ್ದಾನೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಹೋಬಳಿಯ ನಾಗವಲ್ಲಿ ಗ್ರಾಮದ ನಿವಾಸಿ ಲಕ್ಷ್ಮಿಕಾಂತ್ ಎಂಬುವವರು ತನ್ನ ಕೋಳಿಫಾರಂನಲ್ಲಿ ನರಿ ಸಾಕಿರುವುದರ ಬಗ್ಗೆ ಬಂದ ಮಾಹಿತಿ ಮೇರೆಗೆ ಸಿಐಡಿ ಸಂಚಾರ ಅರಣ್ಯ ಘಟಕದ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ನಾಳೆಯಿಂದ ಸರ್ಕಾರಿ ಕಚೇರಿಗಳು ಬಂದ್..? […]