ಬೆಂಗಳೂರು,ಅ.27– ಎರಡನೇ ಮಹಡಿಯಿಂದ ಬಿದ್ದು ಮೂರು ವರ್ಷದ ಮಗು ಮೃತಪಟ್ಟಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗೊಟ್ಟಿಗೆರೆ ವೀವರ್ರಸ ಕಾಲೋನಿಯಲ್ಲಿ ನಡೆದಿದೆ.
ವೇಹಾಂತ್ ಮೃತಪಟ್ಟಿರುವ ಗಂಡು ಮಗು. ವೀವರ್ರಸ ಕಾಲೋನಿಯ 10ನೇ ಕ್ರಾಸ್ನಲ್ಲಿರುವ ಅಪಾರ್ಟ್ಮೆಂಟ್ವೊಂದರ 2ನೇ ಮಹಡಿಯಲ್ಲಿ ವಾಸವಾಗಿರುವ ವಿನೋದ್ ಮತ್ತು ಕಾವ್ಯ ದಂಪತಿಯ ಪುತ್ರ ವೇಹಾಂತ್ ಕಳೆದ ಶನಿವಾರ ಸಂಜೆ 6 ಗಂಟೆ ಸಂದರ್ಭದಲ್ಲಿ ಆಟವಾಡುವಾಗ ಆಯತಪ್ಪಿ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ.
ತಲೆಗೆ ತೀವ್ರ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಮಗುವನ್ನು ಬನ್ನೇರುಘಟ್ಟ ರಸ್ತೆಯಲ್ಲಿರುವ ಮೆಡಾಕ್್ಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದರು. ಆದರೆ ನಿನ್ನೆ ಬೆಳಗ್ಗೆ ಚಿಕಿತ್ಸೆ ಫಲಿಸದೆ ವೇಹಾಂತ್ ಮೃತಪಟ್ಟಿದ್ದಾನೆ. ಕೋಣನಕುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
