Monday, November 25, 2024
Homeಬೆಂಗಳೂರುಸಂಚಾರದ ವೇಳೆ ಸಂಯಮದಿಂದ ವರ್ತಿಸಿ, ಆವೇಶಕ್ಕೆ ಒಳಗಾಗದಿರಿ : ಕಮಿಷನರ್ ಕಿವಿಮಾತು

ಸಂಚಾರದ ವೇಳೆ ಸಂಯಮದಿಂದ ವರ್ತಿಸಿ, ಆವೇಶಕ್ಕೆ ಒಳಗಾಗದಿರಿ : ಕಮಿಷನರ್ ಕಿವಿಮಾತು

Bengaluru City Police Commissioner Advice

ಬೆಂಗಳೂರು, ಸೆ.17- ನಗರದಲ್ಲಿ ರೋಡ್‌ರೇಂಜ್‌ ಘಟನೆಗಳು ಮರುಕಳಿಸುತ್ತಿದ್ದು, ಸಣ್ಣಪುಟ್ಟ ವಿಷಯಗಳಿಗೆ ವಾಗ್ವಾದ ಮಾಡಿಕೊಳ್ಳದೆ ಸಂಯಮದಿಂದ ವರ್ತಿಸಿ, ಆವೇಶಕ್ಕೆ ಒಳಗಾಗಬೇಡಿ ಎಂದು ನಗರ ಪೊಲೀಸ್‌‍ ಆಯುಕ್ತ ಬಿ. ದಯಾನಂದ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಚಾರದ ವೇಳೆ ಸಣ್ಣಪುಟ್ಟ ವಿಷಯಕ್ಕೂ ವಾಗ್ವಾದಗಳು ಆಗುತ್ತಿವೆ. ಏನೇ ವಿಷಯವಿದ್ದರೂ ಸಂಯಮದಿಂದ ಬಗೆಹರಿಸಿಕೊಳ್ಳಿ. ನಿಮಗೆ ತೊಂದರೆಯಾದಲ್ಲಿ 112ಗೆ ಕರೆ ಮಾಡಿದರೆ ತಕ್ಷಣ ಪೊಲೀಸರು ಏಳೆಂಟು ನಿಮಿಷದೊಳಗೆ ಸ್ಥಳಕ್ಕೆ ಬಂದು ಪರಿಶೀಲಿಸುತ್ತಾರೆ ಎಂದು ತಿಳಿಸಿದರು.

ಅನೇಕ ಸಂದರ್ಭದಲ್ಲಿ ಗಾಡಿಗೆ ಟೆಚ್‌ಆಗಿದೆ, ಓವರ್‌ಟೇಕ್‌ ಮಾಡಲಾಗಿದೆ ಎಂಬ ಕಾರಣಕ್ಕೆ ವಾಗ್ವಾದಗಳಾಗಿವೆ. ರಸ್ತೆ ಬಳಸಲು ಎಲ್ಲರಿಗೂ ಹಕ್ಕಿದೆ, ಒಬ್ಬರ ಹಕ್ಕನ್ನು ಇನ್ನೊಬ್ಬರು ಕೇಳಲೂ ಆಗುವುದಿಲ್ಲ, ಎಲ್ಲರು ರಸ್ತೆ ನಿಯಮಗಳನ್ನು ಪಾಲಿಸಬೇಕು ಎಂದರು.
ಒಂದು ವೇಳೆ ಏನಾದರೂ ತೊಂದರೆಯಾದರೆ ತಕ್ಷಣ ಪೊಲೀಸರನ್ನು ಸಂಪರ್ಕಿಸಿ. ತೊಂದರೆ ಕೊಡುವ ವ್ಯಕ್ತಿಯ ಚಹರೆ, ಅವರ ವಾಹನದ ಸಂಖ್ಯೆಯನ್ನು ಫೋಟೊ ತೆಗೆದು ಪೊಲೀಸ್‌‍ ಆಪ್‌ನಲ್ಲಿ ಹಾಕಿದರೆ ಅವರನ್ನು ಪತ್ತೆಹಚ್ಚಲು ನೆರವಾಗುತ್ತದೆ.

112ಗೆ ಕರೆ ಮಾಡಿದ ಸಂದರ್ಭದಲ್ಲಿ ಪೊಲೀಸರು ಸ್ಥಳಕ್ಕೆ ಬಂದಾಗ ಅವರಿಗೆ ವಿವರವಾಗಿ ತಿಳಿಸಿ. ಒಂದು ವೇಳೆ ಆ ವ್ಯಕ್ತಿ ಸ್ಥಳದಲ್ಲಿ ಇದ್ದರೆ ಅವರು ಸಹ ತಮಗಾದ ತೊಂದರೆಯನ್ನು ಹೇಳಲು ಅವಕಾಶ ಕೊಡಿ ಎಂದು ತಿಳಿಸಿದರು.

ತಮಗೆ ಏನೇ ತೊಂದರೆಯಾದರೂ ಮೊದಲು ಪೊಲೀಸ್‌‍ ಆಪ್‌ಗೆ ಟ್ಯಾಗ್‌ ಮಾಡಬೇಕು. ನಂತರ ಸೋಶಿಯಲ್‌ ಮೀಡಿಯಾದಲ್ಲಿ ಹಾಕಿ, ಇಲ್ಲದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದವರ ಬಗ್ಗೆ ಮೊದಲು ತನಿಖೆ ನಡೆಸಬೇಕಾಗುತ್ತದೆ ಎಂದರು.

ನಾಗರಿಕರಿಗೆ ಧನ್ಯವಾದ:
ನಗರದಲ್ಲಿ ಗೌರಿ-ಗಣೇಶಹಬ್ಬ ಹಾಗೂ ಈದ್‌ಮಿಲಾದ್‌ ಹಬ್ಬ ಬಹಳ ಶಾಂತಿಯುತ ಹಾಗೂ ಸೌಹಾರ್ಧಯುತ ವಾತಾವರಣದಲ್ಲಿ ಜರುಗಿರುವುದಕ್ಕೆ ನಗರದ ಪ್ರಜ್ಞಾವಂತ ನಾಗರಿಕರಿಗೆ ಆಯುಕ್ತರು ಧನ್ಯವಾದ ತಿಳಿಸಿದ್ದಾರೆ.

ತಂತ್ರಜ್ಞಾನ ಅಳವಡಿಸಿಕೊಳ್ಳಿ:
ಮನೆಮುಂದೆ ವಾಹನ ನಿಲುಗಡೆ, ಮಾಲ್‌ಗಳಿಗೆ, ಇಲ್ಲವೆ ಬೇರೆಡೆ ಅಥವಾ ಕೆಲಸಕ್ಕೆ ಹೋಗುವ ಸಂದರ್ಭಗಳಲ್ಲಿ ತಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವಾಗ ಅವುಗಳ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು. ತಾವು ವಾಹನ ನಿಲ್ಲಿಸಿರುವ ಸ್ಥಳ ಸುರಕ್ಷಿತವೇ ಎಂಬುದು ತಿಳಿದುಕೊಳ್ಳಬೇಕು ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಉತ್ತಮ ಲಾಕಿಂಗ್‌, ಜಿಪಿಎಸ್‌‍ ಅಳವಡಿಸಿಕೊಂಡರೆ ಕಳವು ನಿಯಂತ್ರಿಸಬಹುದು ಎಂದರು.

RELATED ARTICLES

Latest News