Friday, January 31, 2025
Homeಬೆಂಗಳೂರುಬೆಂಗಳೂರು ನಗರ ಸಂಚಾರ ಪೊಲೀಸ್ ವಸ್ತು ಸಂಗ್ರಹಾಲಯ ಕೇಂದ್ರ ಪ್ರಾರಂಭ

ಬೆಂಗಳೂರು ನಗರ ಸಂಚಾರ ಪೊಲೀಸ್ ವಸ್ತು ಸಂಗ್ರಹಾಲಯ ಕೇಂದ್ರ ಪ್ರಾರಂಭ

Bengaluru City Traffic Police Museum Centre inaugurated

ಬೆಂಗಳೂರು,ಜ.30- ನಗರದ ಇನ್ ಫೆಂಟ್ರಿ ರಸ್ತೆಯಲ್ಲಿರುವ ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ನಲ್ಲಿ ಸಂಚಾರ ಪೊಲೀಸ್ ವಸ್ತು ಸಂಗ್ರಹಾಲಯ ಮತ್ತು ಅನುಭವ ಕೇಂದ್ರವನ್ನು ಗೃಹ ಸಚಿವ ಡಾ: ಜಿ. ಪರಮೇಶ್ವರ ನಿನ್ನೆ ಉದ್ಘಾಟಿಸಿ ವೀಕ್ಷಿಸಿದರು.

ಬೆಂಗಳೂರು ಸಂಚಾರ ಪೊಲೀಸರ ಇತಿಹಾಸ ಹಾಗೂ ಬೆಳೆದು ಬಂದ ದಾರಿಯ ಕುರಿತು ಸಿದ್ಧಪಡಿಸಲಾದ ಕಾಫಿ ಟೆಬಲ್ ಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಇದರ ಡಿಜಿಟಲ್ ಪ್ರತಿಯು BTP website btp.karnataka.gov.in ರಲ್ಲಿ ಲಭ್ಯರುತ್ತದೆ.

ಈ ಸಂಚಾರ ಪೊಲೀಸ್ ವಸ್ತು ಸಂಗ್ರಹಾಲಯವು ಬೆಂಗಳೂರು ನಗರದ ಸಂಚಾರ ನಿರ್ವಹಣೆಯ ಇತಿಹಾಸ ಮತ್ತು ವಿಕಾಸವನ್ನು ಪ್ರದರ್ಶಿಸುವ ಕೇಂದ್ರವಾಗಿರುತ್ತದೆ. ವಸ್ತು ಸಂಗ್ರಹಾಲಯದಲ್ಲಿ ವಿಂಟೇಜ್ ಟ್ರಾಫಿಕ್ ಉಪಕರಣಗಳು ಮತ್ತು ವಸ್ತುಗಳು, ಐತಿಹಾಸಿಕ ಛಾಯ ಚಿತ್ರಗಳು ಮತ್ತು ದಾಖಲೆಗಳನ್ನು ಹೊಂದಿರುತ್ತದೆ. ಸಂಚಾರ ಸುರಕ್ಷತಾ ಮತ್ತು ನಿಯಮಗಳನ್ನು ಕುರಿತು ಸಂವಾದಾತಕ ಪ್ರದರ್ಶನವನ್ನು ಒಳಗೊಂಡಿರುತ್ತದೆ.

ಈ ವಸ್ತು ಸಂಗ್ರಹಾಲಯದಿಂದ ವಿದ್ಯಾರ್ಥಿಗಳು ಮತ್ತು ಸಂಶೋಧಕರು, ಸಂಚಾರ ಕುರಿತ ಉತ್ಸಾಹಿಗಳು ಮತ್ತು ವೃತ್ತಿಪರರು ಹಾಗೂ ಟ್ರಾಫಿಕ್ ನಿರ್ವಹಣೆಯ ಬಗ್ಗೆ ತಿಳಿದುಕೊಳ್ಳಲು ಅಸಕ್ತಿ ಹೊಂದಿರುವ ಜನ ಸಾಮಾನ್ಯರಿಗೆ ಅಮೂಲ್ಯವಾದ ಸಂಪನೂಲ ಕೇಂದ್ರವಾಗಿರುತ್ತದೆ.

ಅನುಭವ ಕೇಂದ್ರದಲ್ಲಿ ಬೆಂಗಳೂರು ಸಂಚಾರ ಪೊಲೀಸರ ಇತಿಹಾಸ, ಮೈಲುಗಲ್ಲುಗಳು ಮತ್ತು ವಿಕಾಸದ ಒಂದು ನೋಟವನ್ನು ಒದಗಿಸುತ್ತದೆ. ವೀಕ್ಷಕರಿಗೆ ಅತ್ಯಾಧುನಿಕ ಸೌಲಭ್ಯ ಹಾಗೂ ತಂತ್ರಜ್ಞಾನದಿಂದ ಕೂಡಿದ ಮತ್ತು ಆಕರ್ಷಕ ಸಂವಾದಾತಕ ಅನುಭವನ್ನು ಈ ಕೇಂದ್ರವು ನೀಡುತ್ತದೆ. ನಗರದಲ್ಲಿ ಟ್ರಾಫಿಕ್ ಪೊಲೀಸಿಂಗ್ ಮತ್ತು ರಸ್ತೆ ಸುರಕ್ಷತೆಯ ತಾಂತ್ರಿಕ ವಿಕಾಸವನ್ನು ಪ್ರದರ್ಶಿಸುತ್ತದೆ.

ಪ್ರಥಮವಾಗಿ ಪ್ರಾರಂಭವಾದ ಕೃತಕ ಬುದ್ಧಿಮತ್ತೆ ಆಧಾರಿತ ಸಿಗ್ನಲ್ಲಿಂಗ್ ಮತ್ತು ಸಂಚಾರ ನಿಯಮ ಜಾರಿಗಾಗಿ ಡಿಜಿಟಲ್ ನಿಯಮ ಜಾರಿ ವ್ಯವಸ್ಥೆಯನ್ನು ಹೊಂದಿದೆ.ಅನುಭವ ಕೇಂದ್ರದಲ್ಲಿ ರಸ್ತೆ ಸುರಕ್ಷತೆಯ ಕುರಿತು ಸಂವಾದಾತಕ ರಸಪ್ರಶ್ನೆಗಳು ಮತ್ತು ಆಟಗಳು, ಹ್ಯಾಂಡ್‌್ಸ-ಆನ್ ಕಲಿಕೆಗಾಗಿ ಸಿಮ್ಯುಲೇಟೆಡ್ ಟ್ರಾಫಿಕ್ ಸನ್ನಿವೇಶಗಳ ಕುರಿತು ಮತ್ತು ಬೆಂಗಳೂರು ಸಂಚಾರದ ನೈಜ್ಯ-ಸಮಯದ ಡಿಜಿಟಲ್ ಮಾದರಿ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ಮತ್ತು ಸಂಚಾರ ನಿರ್ವಹಣೆ ಕುರಿತು ಕಾರ್ಯಾಗಾರಗಳನ್ನು ಮಾಡಬಹುದಾಗಿರುತ್ತದೆ. ನಂತರ ಗೃಹ ಸಚಿವರು ಸಂಪಾದಕರುಗಳೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಹಲವು ಸಂಪಾದಕರು ಬೆಂಗಳೂರು ನಗರ ಸಂಚಾರಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಚರ್ಚಿಸಿ ತಮ ಅಮೂಲ್ಯ ಸಮಸ್ಯೆಗಳನ್ನು ನೀಡಿದರು.ತದ ನಂತರ ಸಚಿವರು ಮಾತನಾಡಿ, ಸರ್ಕಾರದ ಸಂಚಾರ ನಿರ್ವಹಣಾ ಸುಧಾರಣೆ, ರಸ್ತೆ ಸುರಕ್ಷತೆ ಹೆಚ್ಚಿಸುವ ಉದ್ದೇಶಗಳ ಬಗ್ಗೆ ಹಾಗೂ ಭವಿಷ್ಯದ ಯೋಜನೆಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು.

RELATED ARTICLES

Latest News