Friday, November 22, 2024
Homeರಾಜ್ಯಮನೆ ಬಳಿಯೇ ಕಾಟನ್‍ಪೇಟೆ ರೌಡಿಯ ಭೀಕರ ಹತ್ಯೆ

ಮನೆ ಬಳಿಯೇ ಕಾಟನ್‍ಪೇಟೆ ರೌಡಿಯ ಭೀಕರ ಹತ್ಯೆ

ಬೆಂಗಳೂರು, ಮಾ.9- ಮನೆ ಸಮೀಪವೇ ನಡು ರಸ್ತೆಯಲ್ಲಿ ರೌಡಿ ಮೇಲೆ ದಾಳಿ ಮಾಡಿದ ಮೂರ್ನಾಲ್ಕು ಮಂದಿಯ ಗುಂಪು ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಾಟನ್‍ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಫ್ಲವರ್ ಗಾರ್ಡನ್ ನಿವಾಸಿ ಶಿವ ಅಲಿಯಾಸ್ ಶರತ್ (35) ಕೊಲೆಯಾದ ರೌಡಿ. ಕಾಟನ್‍ಪೇಟೆ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿ ಈತನ ಹೆಸರಿದೆ.

ರಾತ್ರಿ ಹೊರಗೆ ಹೋಗಿದ್ದ ರೌಡಿ ಶಿವ 9.30ರ ಸುಮಾರಿನಲ್ಲಿ ಮನೆಗೆ ನಡೆದು ಹೋಗುತ್ತಿದ್ದಾಗ ಮೂರ್ನಾಲ್ಕು ಮಂದಿ ದುಷ್ಕರ್ಮಿಗಳು ಈತ ಬರುವುದನ್ನೇ ಕಾದು ಹೊಂಚು ಹಾಕಿ ಇನ್ನೇನು ಮನೆ ಸ್ವಲ್ಪ ದೂರ ಇರುವಂತೆಯೇ ಏಕಾಏಕಿ ದಾಳಿ ಮಾಡಿ ಮಚ್ಚು, ಲಾಂಗ್, ಡ್ರ್ಯಾಗರ್‍ನಿಂದ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಹಲ್ಲೆಯಿಂದ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ರೌಡಿ ಶಿವನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ಸುದ್ದಿ ತಿಳಿದು ಕಾಟನ್‍ಪೇಟೆ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಶೋಧಕಾರ್ಯ ಕೈಗೊಂಡಿದ್ದಾರೆ. ಹಳೆ ದ್ವೇಷದಿಂದ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News