Sunday, August 17, 2025
Homeಬೆಂಗಳೂರುಎಂಜಿನಿಯರ್‌ ಡಿಜಿಟಲ್‌ ಅರೆಸ್ಟ್‌: ಆರೋಪಿ ತೆಲಂಗಾಣದ ಕ್ಯಾಬಿನೆಟ್‌ ಸಚಿವರೊಬ್ಬರ ಸಂಬಂಧಿ

ಎಂಜಿನಿಯರ್‌ ಡಿಜಿಟಲ್‌ ಅರೆಸ್ಟ್‌: ಆರೋಪಿ ತೆಲಂಗಾಣದ ಕ್ಯಾಬಿನೆಟ್‌ ಸಚಿವರೊಬ್ಬರ ಸಂಬಂಧಿ

ಬೆಂಗಳೂರು,ಜೂ.11-ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ ಎಂಜಿನಿಯರ್‌ನಿಂದ 4.8ಕೋಟಿ ರೂ.ಹಣ ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಈಶ್ವರ್‌ ಸಿಂಗ್‌ ತೆಲಂಗಾಣ ರಾಜ್ಯದ ಕ್ಯಾಬಿನೆಟ್‌ ಸಚಿವರೊಬ್ಬರ ಸಂಬಂಧಿ ಎಂಬುವುದು ಆಗ್ನೇಯ ವಿಭಾಗದ ಸೆನ್‌ ಠಾಣೆ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಆರೋಪಿ ಈಶ್ವರ್‌ಸಿಂಗ್‌ ಹೈದರಾಬಾದ್‌ ಕಾರ್ಪೋರೇಷನ್‌ ಚುನಾವಣೆಗೆ ಸ್ಪರ್ಧಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದನು.ಈತ ಕ್ಯಾಸಿನೋ ಚಟಕ್ಕೆ ದಾಸನಾಗಿ 25 ಲಕ್ಷ ರೂ. ಕಳೆದುಕೊಂಡಿದ್ದಾನೆ.

ಈ ವಿಷಯ ತಿಳಿದು ಕ್ಯಾಬಿನೆಟ್‌ ಸಚಿವರು ಹಲವಾರು ಭಾರಿ ಈತನನ್ನು ಕರೆದು ಬುದ್ದಿವಾದ ಹೇಳಿದರೂ ಸಹ ತನ್ನ ಚಾಳಿ ಬಿಡದೆ ಮೂರು ವರ್ಷದಲ್ಲಿ ಬರೋಬ್ಬರಿ ಶ್ರೀಲಂಕಾಗೆ 33 ಭಾರಿ ಕ್ಯಾಸಿನೋಗೆ ಹೋಗಿ ಲಕ್ಷಾಂತರ ಹಣ ಕಳೆದುಕೊಂಡಿರುವುದು ಗೊತ್ತಾಗಿದೆ. ಬ್ಯಾಂಕ್‌ ಪ್ರತಿನಿಧಿ ಎಂದು ಎಂಜಿನಿಯರ್‌ ಮಂಜುನಾಥ್‌ಅವರನ್ನು ಪರಿಚಯಿಸಿಕೊಂಡಿದ್ದ ಆರೋಪಿಗಳ ಪೈಕಿ ಈಶ್ವರ್‌ಸಿಂಗ್‌ ಎಂಜಿನಿಯರ್‌ನಿಂದ ಪಡೆದ ಹಣವನ್ನು ತನ್ನ ಡ್ರೈವರ್‌ ಅಕೌಂಟ್‌ಗೆ ಹಾಕಿಸಿಕೊಂಡು ಜಾಣತನ ಮೆರೆದಿದ್ದನು.

ಆರೋಪಿಗಳು ಎಷ್ಟೇ ಚಾಲಾಕಿ ಗಳಾದರೂ ಸಹ ಪೊಲೀಸರು ಅವರ ಜಾಡು ಹಿಡಿದು ಆಂಧ್ರಪ್ರದೇಶದ ವಿಮಾನ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ದೆಹಲಿ,ವಿಶಾಖಪಟ್ಟಣ,ಚೆನೈ ಸೇರಿದಂತೆ ವಿವಿದೆಡೆ ತನಿಖೆ ಮುಂದುವರೆಸಿದ್ದಾರೆ. ನಿವೃತ್ತ ಎಂಜಿನಿಯರ್‌ ಮಂಜುನಾಥ್‌ ದಂಪತಿಯನ್ನು ಹೆದರಿಸಿ ನಿಮ ಕ್ರೇಡಿಟ್‌ ಕಾರ್ಡ್‌ ಲಿಮಿಟ್‌್ಸ ಕ್ರಾಸ್‌‍ ಆಗಿದ್ದು, ಓವರ್‌ ಡ್ಯೂ ಕೂಡ ಆಗಿರುವುದರಿಂದ ನಿಮ ವೈಯಕ್ತಿಕ ವಿವರಗಳನ್ನು ಕೊಡಬೇಕೆಂದು ಹೇಳಿ ಅವುಗಳನ್ನು ಪಡೆದುಕೊಂಡು ನಂತರ ದಿನಗಳಲ್ಲಿ ಡಿಜಿಟಲ್‌ ಅರೆಸ್ಟ್‌ ಮಾಡಿ ಹಂತ ಹಂತವಾಗಿ 4.79 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದರ ಜೊತೆಗೆ ಆಸ್ತಿ-ಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ಆರೋಪಿಗಳು ಪಡೆದುಕೊಂಡು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

RELATED ARTICLES

Latest News