ಬೆಂಗಳೂರು,ಅ.16– ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ನಕಲಿ ಸಿಗರೇಟ್‌ಗಳನ್ನು ತರಿಸಿಕೊಂಡು ಪ್ರತಿಷ್ಠಿತ ಕಂಪನಿಯ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ವಂಚಕರನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿ ರೂ. 14 ಲಕ್ಷ ಮೌಲ್ಯದ 5,950 ನಕಲಿ ಸಿಗರೇಟ್ ಪ್ಯಾಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಐಟಿಸಿ ಕಂಪನಿಯ ಹೆಸರಿನಲ್ಲಿ ನಕಲಿ ಸಿಗರೇಟ್‌ಗಳ ತಯಾರಿಕೆ, ವಿತರಣೆ ಮತ್ತು ಮಾರಾಟದಲ್ಲಿ ಕೆಲವರು ಹಾಗೂ ಕೆಲವು ಸಂಸ್ಥೆಗಳು ತೊಡಗಿರುವ ಬಗ್ಗೆ ಐಪಿಆರ್ ಸರ್ವೀಸಸ್ ಕಂಪನಿಯ ಡೆಪ್ಯೂಟಿ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಬಳಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಪ್ರತಿಷ್ಠಿತ ಐಟಿಸಿ ಕಂಪನಿಯ ಹೆಸರಿನಲ್ಲಿ ಅಸಲಿ ಸಿಗರೇಟ್‌ಗಳೆಂದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ಗೊತ್ತಾಗಿದೆ.
ಈ ಇಬ್ಬರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಅವರ ಬಳಿ ನಕಲಿ ಗೋಲ್‌್ಡ ಪ್ಯಾಕ್ ಕಿಂಗ್‌್ಸ 205 ಬಂಡಲ್‌ಗಳಲ್ಲಿ ಒಟ್ಟು 4100 ಸಿಗರೇಟ್ ಪ್ಯಾಕ್‌ಗಳು ಹಾಗೂ ನಕಲಿ ಮಾರ್ಲ್‌ಬೋರೋ ಗೋಲ್‌್ಡ ಅಡ್ವಾನ್‌್ಸನ ಒಟ್ಟು 185 ಬಂಡಲ್‌ಗಳು.ಪ್ರತಿ ಬಂಡಲ್‌ನಲ್ಲಿ 10 ಸಣ್ಣ ಸಣ್ಣ ಪ್ಯಾಕ್‌ಗಳಿರುವುದು ಕಂಡು ಬಂದಿದೆ.
ಒಟ್ಟು 1850 ನಕಲಿ ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಮೌಲ್ಯ 14 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್ ಜಗದೀಶ್ ಹಾಗೂ ಸಿಬ್ಬಂದಿ ತಂಡ ಕೈಗೊಂಡು ವಂಚಕರನ್ನು ಪತ್ತೆ ಹಚ್ಚಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.