ಬೆಂಗಳೂರು,ಮೇ 6-ನಗರ ಪೊಲೀಸರು ರೌಡಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂ ಸಿ 90 ಲಕ್ಷ ರೂ. ಬೆಲೆಯ ಗಾಂಜಾ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆ ಪೊಲೀಸರು ಆರೋಪಿಯೊಬ್ಬನನ್ನು ಬಂ ಸಿ 60 ಲಕ್ಷ ರೂ.ವೌಲ್ಯದ ಗಾಂಜಾ,ಗೂಡ್‌್ಸ ವಾಹನ ವಶಪಡಿಸಿಕೊಂಡರೆ, ಗೋವಿಂದರಾಜನಗರ ಠಾಣೆ ಪೊಲೀಸರು ರೌಡಿಯನ್ನು ಬಂ ಸಿ 25 ಲಕ್ಷ ವೌಲ್ಯದ ಗಾಂಜಾ ಜಪ್ತಿಪಡಿಸಿಕೊಂಡಿದ್ದು,ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂ ಸಿ 4.20 ಲಕ್ಷ ರೂ. ವೌಲ್ಯದ ಗಾಂಜಾ,ಮೊಬೈಲ್ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಹೆಚ್.ಎಸ್.ಆರ್ ಲೇಔಟ್ : ಇಲ್ಲಿನ 4ನೇ ಸೆಕ್ಟರ್, ಪ್ರೆಢಂ ಇಂಟರ್ ನ್ಯಾಷನಲ್ ಶಾಲೆ ಹತ್ತಿರದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಗಾಂಜಾವನ್ನು ಐಷರ್ ಗೂಡ್‌್ಸ ಕ್ಯಾರಿಯರ್ ವಾಹನದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ದಾವಿಸಿ ಆರೋಪಿಯನ್ನು ಗಾಂಜಾ ಸಮೇತ ಬಂ ಸಿದ್ದಾರೆ.
ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ, ಓಡಿಸ್ಸಾ ರಾಜ್ಯದಿಂದ ಕಡಿಮೆ ಬೆಲೆಗೆ ಗಾಂಜಾವನ್ನು ಖರೀದಿಸಿ, ನಂತರ ನಗರಕ್ಕೆ ತಂದು ಸಾಪ್‌್ಟವೇರ್ ಉದ್ಯೋಗಿಗಳಿಗೆ ಹಾಗೂ ಕಾಲೇಜ್ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ, ಹೆಚ್ಚಿನ ಲಾಭ ಗಳಿಸುತ್ತಿದದ್ದು ಗೊತ್ತಾಗಿದೆ.
ಆರೋಪಿಯಿಂದ 60 ಲಕ್ಷ ರೂ. ವೌಲ್ಯದ ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ ಐಷರ್ ಗೂಡ್‌್ಸ ಕ್ಯಾರಿಯರ್ ವಾಹನ ಮತ್ತು 62 ಕೆ.ಜಿ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್ ಹರೀಶ್ ಕುಮಾರ್ ಹಾಗೂ ಸಿಬ್ಬಂದಿಗಳ ತಂಡ ಯಶಸ್ವಿಯಾಗಿದೆ.
ರೌಡಿ ಬಂಧನ: ನಿಷೇದಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ರೌಡಿಯೊಬ್ಬನನ್ನು ಗೋಂದರಾಜ ನಗರ ಠಾಣೆ ಪೊಲೀಸರು ಬಂ ಸಿ 25 ಲಕ್ಷ ರೂ. ಬೆಲೆಯ 43 ಕೆ.ಜಿ 80 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಪಟ್ಟೇಗಾರ್ ಪಾಳ್ಯದ ದೊಡ್ಡ ಮೋರಿಯ ಬಳಿ ವ್ಯಕ್ತಿಯೊಬ್ಬ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಗಾಂಜಾ ವಶಪಡಿಸಿಕೊಂಡಿದ್ದು, ಈತ ಬನಶಂಕರಿ ಪೊಲೀಸ್ ಠಾಣೆಯ ರೌಡಿ ಎಂಬುವುದು ಗೊತ್ತಾಗಿದೆ.
ಇನ್‌್ಸಪೆಕ್ಟರ್ ಸುಬ್ರಮಣಿ ಹಾಗೂ ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.
ಸಿಸಿಬಿ ಕಾರ್ಯಾಚರಣೆ: ಡ್ರಗ್‌್ಸ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಇಬ್ಬರುಆರೋಪಿಗಳನ್ನು ಸಿಸಿಬಿ ಪೊಲೀಸರು ಬಂ ಸಿ 4.20 ಲಕ್ಷ ರೂ. ಬೆಲೆಯ 4 ಕೆ.ಜಿ 185 ಗ್ರಾಂ ಗಾಂಜಾ, 2 ಮೊಬೈಲ್ ಫೊನ್‌ಗಳು,ಕೃತ್ಯಕ್ಕೆ ಬಳಸಿದ 1 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜಿ.ಎಂ.ಪಾಳ್ಯದ ವೀರಾಂಜನೇಯಸ್ವಾಮಿ ದೇವಸ್ಥಾನದ ಬಳಿ ಇಬ್ಬರು ದ್ವಿಚಕ್ರ ವಾಹನದಲ್ಲಿ ಗಾಂಜಾವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಇಬ್ಬರನ್ನು ಬಂ ಸಿ ವಿಚಾರಣೆ ನಡೆಸಿದಾಗ ಆಂದ್ರಪ್ರದೇಶದ ಅರಕ್ಕೂ ವ್ಯಾಲಿಯ ಪರಿಚಯಸ್ಥರಿಂದ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿ ಮಾಡಿಕೊಂಡು ನಗರಕ್ಕೆ ತಂದು ಪರಿಚಯಸ್ಥರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ-ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ, ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದಾಗಿ ತಿಳಿಸಿದ್ದಾರೆ.
ಈ ಇಬ್ಬರು ಆರೋಪಿಗಳ ವಿರುದ್ದ ಈ ಹಿಂದೆ ಬೈಯ್ಯಪ್ಪನಹಳ್ಳಿ ಮತ್ತು ಹೆಚ್.ಎ.ಎಲ್ ಪೊಲೀಸ್ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದ್ದು, ತನಿಖೆ ಮುಂದುವರಿಸಿದ್ದಾರೆ.