Sunday, September 14, 2025
Homeಬೆಂಗಳೂರುಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಕಿರಿಕ್, ಸುತ್ತಿಗೆಯಿಂದ ಹೊಡೆದು ಸ್ನೇಹಿತನ ಕೊಲೆ

ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಕಿರಿಕ್, ಸುತ್ತಿಗೆಯಿಂದ ಹೊಡೆದು ಸ್ನೇಹಿತನ ಕೊಲೆ

Bengaluru: Friend murdered by being hit with a hammer

ಬೆಂಗಳೂರು,ಜು.30- ಕ್ಷುಲ್ಲಕ ಕಾರಣಕ್ಕೆ ಸುತ್ತಿಗೆಯಿಂದ ತಲೆಗೆ ಹೊಡೆದು ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ವರ್ತೂರು ಪೊಲೀಸ್‌‍ ಠಾಣಾ ವ್ಯಾಪ್ತಿಯ ತರಬನಹಳ್ಳಿಯಲ್ಲಿ ನಡೆದಿದೆ.
ಬಿಹಾರ ಮೂಲದ ರಾಜ್ಯದ ಹಿತೇಂದ್ರ (33) ಕೊಲೆಯಾದ ಯುವಕ. ಈತ ವೃತ್ತಿಯಲ್ಲಿ ಟೈಲ್‌್ಸ ಕೆಲಸಗಾರ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 20 ದಿನಗಳ ಹಿಂದೆ ಬಿಜಾಪುರದಿಂದ ಹಿತೇಂದ್ರ ಹಾಗೂ ಮತ್ತೊಬ್ಬನನ್ನು ಕೆಲಸ ಕೊಡಿಸುವುದಾಗಿ ಸೀತಾರಾಮ್‌ ಪಾಂಡೆ ಕರೆತಂದು ತನ್ನ ರೂಂನಲ್ಲಿ ಆಶ್ರಯ ನೀಡಿದ್ದನು.
ಬಿಹಾರ ಮೂಲದವನೇ ಆದ ಸೀತಾರಾಮ್‌ ಪಾಂಡೆ ಮೊನ್ನೆ ತನ್ನ ರೂಂನಲ್ಲಿ ಸಹಚರರೊಂದಿಗೆ ಸೇರಿಕೊಂಡು ಪಾರ್ಟಿ ಮಾಡಿದ್ದಾರೆ. ಆ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಹಿತೇಂದ್ರನ ಜೊತೆ ಜಗಳವಾಡಿದ್ದಾನೆ.

ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸಿಕೊಂಡಿದ್ದು ತಾಳೆ ಕಳೆದುಕೊಂಡ ಸೀತಾರಾಮ್‌ ಪಾಂಡೆ ಕೈಗೆ ಸಿಕ್ಕಿದ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಸಹಚರರೊಂದಿಗೆ ಪರಾರಿಯಾಗಿದ್ದಾನೆ.ಸುದ್ದಿ ತಿಳಿದು ವರ್ತೂರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

RELATED ARTICLES

Latest News