ಬೆಂಗಳೂರು,ಜ.7- ಕ್ಯಾಟರಿಂಗ್ ನಡೆಸುತ್ತಿದ್ದ ಗುಜರಾತ್ ಮೂಲದ ಉದ್ಯಮಿಯೊಬ್ಬರು ಲಾಡ್ಜ್ ವೊಂದರಲ್ಲಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗುಜರಾತ್ ಮೂಲದ ಕುಲಾಲ್ದತ್ತು (50) ಆತಹತ್ಯೆಗೆ ಶರಣಾದ ಉದ್ಯಮಿ. ಇವರು ಪಾಲುದಾರಿಕೆಯಲ್ಲಿ ಹುಳಿಮಾವಿನಲ್ಲಿ ಕ್ಯಾಟರಿಂಗ್ ನಡೆಸುತ್ತಿದ್ದರು.
ನಿನ್ನೆ ಹುಳಿಮಾವಿನ ಲಾಡ್‌್ಜವೊಂದಕ್ಕೆ ಹೋಗಿ ರೂಮ್ ಪಡೆದುಕೊಂಡಿದ್ದಾರೆ. ರಾತ್ರಿಯಾಗುವಷ್ಟರಲ್ಲಿ ಇವರು ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ.
ರಾತ್ರಿಯಾದರೂ ಊಟ ಆರ್ಡರ್ ಮಾಡಿಲ್ಲ. ಅಲ್ಲದೆ ರೂಮ್ನಿಂದ ಹೊರಗೆ ಬಾರದಿರುವುದನ್ನು ಗಮನಿಸಿ ಅಲ್ಲಿನ ಸಿಬ್ಬಂದಿ ಅನುಮಾನಗೊಂಡು ಕಾಲಿಂಗ್ ಬೆಲ್ ಒತ್ತಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಪೊಲೀಸರಿಗೆ ಲಾಡ್ಜ್ ನವರು ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ಒಡೆದು ನೋಡಿದಾಗ ಈ ವ್ಯಕ್ತಿ ಆತಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ನನಗೆ ಸಾಲ ಜಾಸ್ತಿಯಾಗಿದೆ. ನನ್ನ ಸಾವಿಗೆ ನಾನೇ ಕಾರಣ ಎಂಬಿತ್ಯಾದಿ ಮಾಹಿತಿಗಳನ್ನು ಡೆತ್ನೋಟ್ನಲ್ಲಿ ನಮೂದಿಸಿದ್ದಾರೆ. ಪೊಲೀಸರು ಡೆತ್ನೋಟ್ನ್ನು ವಶಕ್ಕೆ ಪಡೆದು ಅವರ ಪತ್ನಿಗೆ ವಿಷಯ ತಿಳಿಸಿದ್ದಾರೆ.
ನನ್ನ ಪತಿಗೆ ಪಾಲುದಾರರು ಕಿರುಕುಳ ನೀಡಿದ್ದರಿಂದ ಆತಹತ್ಯೆ ಮಾಡಿಕೊಂಡಿದ್ದಾರೆಂದು ಹುಳಿಮಾವು ಠಾಣೆ ಪೊಲೀಸರಿಗೆ ಪತ್ನಿ ದೂರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.