Monday, September 1, 2025
Homeಬೆಂಗಳೂರುಬೆಂಗಳೂರು : ಗಂಡನ ಕಿರುಕುಳದಿಂದ ನೊಂದು ಗೃಹಿಣಿ ಆತ್ಮಹತ್ಯೆ

ಬೆಂಗಳೂರು : ಗಂಡನ ಕಿರುಕುಳದಿಂದ ನೊಂದು ಗೃಹಿಣಿ ಆತ್ಮಹತ್ಯೆ

Bengaluru: Housewife commits suicide due to harassment by husband

ಬೆಂಗಳೂರು,ಸೆ.1- ಗಂಡನ ಕಿರುಕುಳದಿಂದ ನೊಂದು ಗೃಹಿಣಿಯೊಬ್ಬರು ಆತ್ಮಹತ್ಯೆ ಮಡಿಕೊಂಡಿರುವ ಘಟನೆ ಬಾಗಲಗುಂಟೆ ಪೊಲೀಸ್‌‍ ಠಾಣಾ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ನಡೆದಿದೆ. ಪೂಜಶ್ರೀ(28) ಆತಹತ್ಯೆಗೆ ಶರಣಾದ ಗೃಹಿಣಿ.

ಮೂರು ವರ್ಷದ ಹಿಂದೆ ಮನೆಯವರ ನಿಶ್ಚಯದಂತೆ ಪೂಜಾಶ್ರೀ ಅವರು ನಂದೀಶ್‌ ಎಂಬುವವರನ್ನು ಮದುವೆಯಾಗಿದ್ದು ಇವರಿಗೆ ಈಗ ಒಂದು ಹೆಣ್ಣು ಮಗುವಿದೆ.ದಂಪತಿ ಇಬ್ಬರೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.ಈ ನಡುವೆ ಪತಿ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರುವ ವಿಚಾರ ಗೊತ್ತಾಗಿ ಇದೇ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು.

ಇತೀಚೆಗೆ ನಂದೀಶ್‌ ತವರು ಮನೆಯಿಂದ ವರದಕ್ಷಿಣೆ ಹಣ ತರುವಂತೆ ಜಗಳ ಶುರು ಮಾಡಿದ್ದ ಎಂಬ ಆರೋಪಿಸಲಾಗಿದೆ.ಇದರಿಂದ ಎರಡು ಮೂರು ಬಾರಿ ಹಿರಿಯರ ಸಮುಖದಲ್ಲಿ ಇಬ್ಬರ ಮಧ್ಯೆ ರಾಜಿ ಪಂಚಾಯಿತಿ ನಡೆದಿತ್ತು. ಈ ವೇಳೆ ನಾನು ಪತ್ನಿಗೆ ಕಿರುಕುಳ ನೀಡುವುದಿಲ್ಲ ಎಂದು ನಂದೀಶ್‌ ಭರವಸೆ ನೀಡಿದ್ದ.

ಮೂರು ದಿನಗಳ ಹಿಂದೆ ಮತ್ತೆ ಜಗಳ ಮಾಡಿ ನಂದೀಶ್‌ ಹಲ್ಲೆ ಮಾಡಿದ್ದ. ಪತಿಯ ಕಿರುಕುಳ ತಾಳಲಾರದೇ ಪೂಜಾಶ್ರೀ ತವರು ಮನೆಗೆ ಬಂದಿದ್ದರು. ಈ ವಿಚಾರ ತಿಳಿದು ನಂದೀಶ್‌ ಅತ್ತೆ ಮನೆಗೆ ಬಂದು ಕಥೆ ಕಟ್ಟಿ ಮತ್ತೆ ಪತ್ನಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಆದರೆ ಭಾನುವಾರ ಬೆಳಗ್ಗೆ ಪೂಜಶ್ರೀ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಹಲವರ ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

Latest News