ಬೆಂಗಳೂರು, ಅ. 19- ಬೈಕ್‌ನಲ್ಲಿ ಹೋಗುತ್ತಿದ್ದ ಖಾಸಗಿ ಕಂಪೆನಿ ಉದ್ಯೋಗಿಯೊಬ್ಬರು ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ ಜೆಸಿಬಿ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಲಾಜೆಸ್ಟಿಕ್ ಕಂಪನಿ ಉದ್ಯೋಗಿ ಅಜಯ್ ಮುರಳಿ (30) ಮೃತ ಪಟ್ಟ ಎನ್ಫೀಲ್ಡ್ ಬೈಕ್ ಸವಾರ. ಮೂಲತಃ ತಮಿಳುನಾಡಿನ ಹೊಸೂರಿನವರಾದ ಅಜಯ್ ಅವರು ನಗರದ ಭದ್ರಪ್ಪ ಲೇಔಟ್ನಲ್ಲಿ ವಾಸವಿದ್ದರು. ರಾತ್ರಿ 11.30ರ ಸುಮಾರಿನಲ್ಲಿ ಅಜಯ್ ಅವರು ಎಸ್ಟೀಮ್ ಮಾಲ್ ಕಡೆಯಿಂದ ಕೆ. ಆರ್.ಪುರಂ ಕಡೆಗೆ ಹೋಗುತ್ತಿದ್ದಾಗ ಹೆಬ್ಬಾಳ ಅಪ್ರ್ಯಾಂಪ್ ಸಮೀಪ ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ ಜೆಸಿಬಿ ವಾಹನಕ್ಕೆ ಹಿಂದಿನಿಂದ ಡಿಕ್ಕೆ ಹೊಡೆದು ಕೆಳಗೆ ಬಿದ್ದಿದ್ದಾರೆ.
ತಕ್ಷಣ ಸಾರ್ವಜವನಿಕರ ಸಹಾಯದಿಂದ ಅವರನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ, ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.ಹೆಬ್ಬಾಳ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಟಿಪ್ಪರ್ ಡಿಕ್ಕಿ: ಪಾದಚಾರಿ ಸಾವು
ರಸ್ತೆ ದಾಟುತ್ತಿದ್ದ ಪಾದಚಾರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಅವರ ಮೇಲೆಯೇ ಚಕ್ರ ಹರಿದ ಪರಿಣಾಮ ಮೃತಪಟ್ಟಿರುವ ಘಟನೆ ವೈಟ್‌ಫೀಲ್ಡ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಮುನೆಕೊಳಲು ನಿವಾಸಿ ಬಾಬು (48) ಮೃತಪಟ್ಟ ಪಾದಚಾರಿ.ರಾತ್ರಿ 10 ಗಂಟೆ ಸುಮಾರಿನಲ್ಲಿ ಓಫ್ ಫಾರಂ ಜಂಕ್ಷನ್ ಬಳಿ ಜೀಬ್ರಾ ಕ್ರಾಸಿಂಗ್ ರಸ್ತೆಯಲ್ಲಿ ವಾಕರ್ ಸಹಾಯದಿಂದ ಬಾಬು ಅವರು ರಸ್ತೆ ದಾಟುತ್ತಿದ್ದಾಗ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಟಿಪ್ಪರ್ ಲಾರಿ ಇವರಿಗೆ ಡಿಕ್ಕಿ ಹೊಡೆದಿದೆ.
ಬಾಬು ಅವರು ಕೆಳಗೆ ಬಿದ್ದಾಗ ಟಿಪ್ಪರ್ ಲಾರಿಯ ಎಡ ಮುಂಭಾಗದ ಚಕ್ರ ಅವರ ಮೇಲೆ ಹರಿದು ಗಂಭೀರ ಗಾಯಗೊಂಡರು.ತಕ್ಷಣ ಸಾರ್ವಜನಿಕರು ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರಿಶೀಲಿಸಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆಂದು ತಿಳಿಸಿ
ದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಟಿಪ್ಪರ್ ಅನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ವೈಟ್‌ಫೀಲ್‌್ಡ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.