Monday, November 25, 2024
Homeರಾಜ್ಯಬೆಂಗಳೂರು ಕಂಬಳ ಉತ್ಸವದಿಂದ ಬ್ರಿಜ್ ಭೂಷಣ್‍ಗೆ ಕೋಕ್

ಬೆಂಗಳೂರು ಕಂಬಳ ಉತ್ಸವದಿಂದ ಬ್ರಿಜ್ ಭೂಷಣ್‍ಗೆ ಕೋಕ್

ಬೆಂಗಳೂರು,ನ.21-ಇದೇ ತಿಂಗಳ 25ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಕರಾವಳಿಯ ಹೆಮ್ಮೆ ಕಂಬಳ ಉತ್ಸವಕ್ಕೆ ವಿವಾದಿತ ವ್ಯಕ್ತಿ ಬ್ರಿಜ್ ಭೂಷಣ್ ಅವರನ್ನು ಕಾರ್ಯಕ್ರಮದಿಂದ ಆಯೋಜಕರು ಕೈಬಿಟ್ಟಿದ್ದಾರೆ.

ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಸಿಲುಕಿರುವ ಬಿಜೆಪಿ ಸಂಸದರಾಗಿರುವ ಬ್ರಿಜ್ ಭೂಷಣ್ ಅವರನ್ನು ಕಂಬಳ ಉತ್ಸವಕ್ಕೆ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣ ಮತ್ತಿತರ ಕಡೆ ಬ್ರಿಡ್ಜ್ ಭೂಷಣ್ ಅವರನ್ನು ಯಾವುದೇ ಕಾರಣಕ್ಕೂ ಕಂಬಳ ಉತ್ಸವಕ್ಕೆ ಆಹ್ವಾನಿಸಬಾರದೆಂದು ಅನೇಕರು ಮನವಿ ಮಾಡಿದ್ದರು.

ಇದಕ್ಕೆ ಅಂತಿಮ ತೆರೆ ಎಳೆದ ಕಂಬಳ ಸಮಿತಿ ಅಧ್ಯಕ್ಷರೂ ಆಗಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ರೈ, ಕಂಬಳ ಒಂದು ಜನಪ್ರಿಯ ಕ್ರೀಡೆ. ಇದೊಂದು ದೊಡ್ಡ ಕಾರ್ಯಕ್ರಮ. ಹೀಗಾಗಿ ಬೇರೆಯವರು ಬಂದು ಮನವಿ ಮಾಡಿದ್ದರಿಂದ ಬ್ರಿಜ್ ಭೂಷಣ್ ಅವರನ್ನು ಆಹ್ವಾನಿಸಲಾಗಿತ್ತು ಎಂದು ಸಮರ್ಥಿಸಿಕೊಂಡರು.

ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಬಂದು ವೇದಿಕೆಗೆ ಅವರ ಹೆಸರನ್ನು ಇಡಬೇಕೆಂದು ಮನವಿ ಮಾಡಿದರೆ ಸಿದ್ದಿ ಜನಾಂಗದವರು ಬಂದು ಮತ್ತೊಂದು ಮನವಿ ಮಾಡುತ್ತಾರೆ. ಹೀಗೆ ಎಲ್ಲರ ಮನವಿಯನ್ನು ಸಮಿತಿಯು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದೆ. ಬ್ರಿಜ್ ಭೂಷಣ್ ಅವರನ್ನು ಸಮಿತಿಯಿಂದ ಕೈಬಿಡಲು ತೀರ್ಮಾನಿಸಲಾಗಿದೆ. ಈಗಾಗಲೇ ಮುದ್ರಣಗೊಂಡಿರುವ ಆಹ್ವಾನ ಪತ್ರಿಕೆಗಳನ್ನು ಹೊಸದಾಗಿ ಮುದ್ರಣ ಮಾಡುತ್ತೇವೆ. ಕಂಬಳ ಉತ್ಸವಕ್ಕೆ ಅವರನ್ನು ಆಹ್ವಾನಿಸುವುದಿಲ್ಲ ಎಂದು ಅಶೋಕ್ ರೈ ಸ್ಪಷ್ಟಪಡಿಸಿದರು.

ನಿಗಮ – ಮಂಡಳಿಗಳ ನೇಮಕ: ಸುರ್ಜೆವಾಲ ಜೊತೆ ಸಮಾಲೋಚನೆ

ಇದು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೇ ಆಗಿರುವ ಅಚಾತುರ್ಯ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ. ಗೋವಾದಲ್ಲಿ ಕುಡುವಿ ಮತ್ತು ಸಿದ್ದಿ ಜನಾಂಗದವರಿಗೆ ಅವರು ಕುಸ್ತಿ ತರಬೇತಿಯನ್ನು ನೀಡಿದ್ದರು. ಹೀಗಾಗಿ ಅವರ ಸೇವೆಯನ್ನು ಪರಿಗಣಿಸಿ ಇದೇ 25ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳ ಉತ್ಸವಕ್ಕೆ ಆಹ್ವಾನಿಸಲಾಗಿತ್ತು.

ಅಂದು ಅವರು ಕುಸ್ತಿಪಟುಗಳನ್ನು ಸನ್ಮಾನಿಸುವ ಕಾರ್ಯಕ್ರಮವಿತ್ತು. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಬ್ರಿಜ್ ಭೂಷಣ್ ಹೆಸರನ್ನು ಕೈಬಿಡಲಾಗಿದೆ. ಎಂದಿನಂತೆ ಕಂಬಳ ಉತ್ಸವಕ್ಕೆ ಎಲ್ಲರೂ ಪಕ್ಷಾತೀತವಾಗಿ ಸಹಕಾರ ನೀಡಬೇಕೆಂದು ಅಶೋಕ್ ರೈ ಮನವಿ ಮಾಡಿದರು.

RELATED ARTICLES

Latest News