Sunday, July 7, 2024
Homeಬೆಂಗಳೂರುಸೂಸೈಡ್‌ ಹಾಟ್‌ ಸ್ಪಾಟ್‌ ಆಗುತ್ತಿವೆ ನಮ್ಮ ಮೆಟ್ರೋ ನಿಲ್ದಾಣಗಳು

ಸೂಸೈಡ್‌ ಹಾಟ್‌ ಸ್ಪಾಟ್‌ ಆಗುತ್ತಿವೆ ನಮ್ಮ ಮೆಟ್ರೋ ನಿಲ್ದಾಣಗಳು

ಬೆಂಗಳೂರು,ಜೂ.11- ನಮ ಮೆಟ್ರೋ ರೈಲು ನಿಲ್ದಾಣಗಳು ಸೂಸೈಡ್‌ ಹಾಟ್‌ ಸ್ಪಾಟ್‌ ಆಗಿ ಪರಿವರ್ತನೆಗೊಳ್ಳುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿದೆ.ಕಳೆದ ಆರು ತಿಂಗಳಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಆರು ಆತಹತ್ಯೆ ಪ್ರಕರಣಗಳು ಸಂಭವಿಸಿರುವುದು ಇಂತಹ ಆರೋಪಗಳಿಗೆ ಪುಷ್ಠಿ ನೀಡುತ್ತಿವೆ.

ಪದೇ ಪದೇ ಮೆಟ್ರೋ ಟ್ರ್ಯಾಕ್‌ ಗೆ ಜಿಗಿಯುತ್ತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಮೆಟ್ರೋ ಅಧಿಕಾರಿಗಳು ಮಾತ್ರ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸುವಲ್ಲಿ ಮೀನಾಮೇಷ ಎಣಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಮೆಜೆಸ್ಟಿಕ್‌ ಮೆಟ್ರೋ ಸ್ಟೇಷನ್‌ ನಲ್ಲಿ ಮಾತ್ರ ಬಿಎಂಆರ್‌ಸಿಎಲ್‌ ಸೆಕ್ಯುರಿಟಿ ಗಳು ಆಲರ್ಟ್‌ ಆಗಿರುತ್ತಾರೆ ಉಳಿದ ಕಡೆ ಭದ್ರತಾ ಸಿಬ್ಬಂದಿಗಳು ನಿರ್ಲಕ್ಷ್ಯ ತೋರುತ್ತಿರುವುದರಿಂದ ಆತಹತ್ಯೆ ಮಾಡಿಕೊಳ್ಳಲು ಪ್ರಯಾಣಿಕರು ಟ್ರಾಕ್‌ಗೆ ಜಿಗಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಲಾಗಿದೆ.

ದೆಹಲಿ, ಚೆನ್ನೈ ಮೆಟ್ರೋದಲ್ಲಿ ಪಿಎಸ್ಡಿ ಡೋರ್‌ ಅಳವಡಿಸಿರುವುದರಿಂದ ಅಲ್ಲಿ ಇಂತಹ ಘಟನೆಗಳು ಸಂಭವಿಸುತ್ತಿಲ್ಲ ಆದರೆ, ನಮ ಮೆಟ್ರೋ ಅಂತಹ ಕ್ರಮ ಇದುವರೆಗೂ ಕೈಗೊಳ್ಳದಿರುವುದೇ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣ ಎನ್ನುವಂತಾಗಿದೆ.
ನಗರದಲ್ಲಿ ಮೆಟ್ರೋ ಸೇವೆ ಆರಂಭವಾಗಿ ಹದಿಮೂರು ವರ್ಷಗಳು ಕಳೆದಿದ್ದರೂ ಇದುವರೆಗೂ ಟ್ರಾಕ್‌ ಗೆ ಯಾವುದೇ ಭದ್ರತೆ ಇಲ್ಲದಿರುವುದರಿಂದ 2011 ರಿಂದ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಜೀವಕ್ಕಿಲ್ವಾ ರಕ್ಷಣೆ ಎನ್ನುವಂತಾಗಿದೆ.

ಅನಾಹುಗಳ ಪಟ್ಟಿ:
ದಿನಾಂಕ: 1 ಜನವರಿ 2024
ಸ್ಥಳ: ಇಂದಿರಾ ನಗರ ಮೆಟ್ರೋ ನಿಲ್ದಾಣ
ಮೊಬೈಲ್‌ ತೆಗೆಯಲು ಟ್ರ್ಯಾಕ್‌ ಗೆ ಇಳಿದ ಮಹಿಳೆ..ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಉಳಿದ ಜೀವ

ದಿನಾಂಕ: 5 ಜನವರಿ 2024
ಸ್ಥಳ: ಜಾಲಹಳ್ಳಿ ಮೆಟ್ರೋ ನಿಲ್ದಾಣ
ಮೆಟ್ರೋ ಹಳಿಗೆ ಹಾರಿ ಯುವಕನಿಂದ ಆತಹತ್ಯೆಗೆ ಯತ್ನ ಐಸಿಯುನಲ್ಲಿ ಚಿಕಿತ್ಸೆ

ದಿನಾಂಕ: 6 ಜನವರಿ 2024
ಸ್ಥಳ: ಜೆ.ಪಿ.ನಗರ ಮೆಟ್ರೋ ನಿಲ್ದಾಣ
ಮೆಟ್ರೋ ಟ್ರ್ಯಾಕ್‌ ಮೇಲೆ ಬೆಕ್ಕು ಪ್ರತ್ಯಕ್ಷ..ಆತಂಕಗೊಂಡ ಪ್ರಯಾಣಿಕರು

ದಿನಾಂಕ ಮಾರ್ಚ- 12 ರಂದು 2024
ಸ್ಥಳ :- ಜ್ಞಾನ ಭಾರತಿ ಮೆಟ್ರೋ ನಿಲ್ದಾಣ
ಜ್ಞಾನಭಾರತಿ ಮೆಟ್ರೋ ಸ್ಟೇಷನ್‌ ನಿಂದ ಪಟ್ಟಣಗೆರೆ ಮೆಟ್ರೋ ಸ್ಟೇಷನ್‌ ನಡುವಿನ ವಯಾಡಕ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಅಪರಿಚಿತ ವ್ಯಕ್ತಿ.

ದಿನಾಂಕ:- 21/03/2024
ಸ್ಥಳ :- ಅತ್ತಿಗುಪ್ಪೆ
ಸಮಯ :- 2.10
ಮೆಟ್ರೋ ಹಳಿ ಮೇಲೆ ನ್ಯಾಶನಲ್‌ ಲಾ ಕಾಲೇಜಿನಲ್ಲಿ ಮೊದಲನೇ ವರ್ಷ ವ್ಯಾಸಂಗ ಮಾಡ್ತಿದ್ದ 20 ವರ್ಷದ ಧ್ರುವ ಎನ್ನುವ ಯುವಕ ಟ್ರಾಕ್‌ಗೆ ಜಿಗಿದು ಆತಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ.

ದಿನಾಂಕ:- 10/06/2024
ಸ್ಥಳ:- ಹೊಸಕೆರೆಹಳ್ಳಿ
ಸಮಯ :- 8.46ರ ಸಮಯದಲ್ಲಿ ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಯುವಕನೋರ್ವ ಟ್ರ್ಯಾಕ್‌ ಗೆ ಜಿಗಿಯಲು ಮುಂದಾದಾಗ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಯುವಕ ಬಚಾವ್‌ ಆಗ್ತಾನೆ ಈ ಘಟನೆ ಮೆಟ್ರೋ ಪ್ರಯಾಣಿಕರ ಪ್ಯಾನಿಕ್‌ಗೂ ಕಾರಣವಾಗಿತ್ತು.

RELATED ARTICLES

Latest News