Saturday, August 2, 2025
Homeಬೆಂಗಳೂರುಬೆಂಗಳೂರು : ಗಂಡನ ಮೇಲಿನ ಕೋಪಕ್ಕೆ ವಿಷವುಣಿಸಿ ಮಗುವನ್ನು ಕೊಂದ ತಾಯಿ

ಬೆಂಗಳೂರು : ಗಂಡನ ಮೇಲಿನ ಕೋಪಕ್ಕೆ ವಿಷವುಣಿಸಿ ಮಗುವನ್ನು ಕೊಂದ ತಾಯಿ

Bengaluru: Mother kills child by poisoning

ಬೆಂಗಳೂರು,ಜು.31-ಕೌಟುಂಬಿಕ ಕಲಹದಿಂದ ಮನನೊಂದ ಪತ್ನಿ ತನ್ನ ಕರಳ ಕುಡಿಗೆ ವಿಷ ಕುಡಿಸಿ ನಂತರ ತಾನೂ ಕುಡಿದು ಆತಹತ್ಯೆಗೆ ಯತ್ನಿಸಿದ್ದು, ದುರದೃಷ್ಟವಶಾತ್‌ ಮಗು ಮೃತಪಟ್ಟಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯಲ್ಲಿ ಒಂದು ವರ್ಷ ಎಂಟು ತಿಂಗಳ ಹೆಣ್ಣು ಮಗು ಮೃತಪಟ್ಟಿದ್ದು, ತಾಯಿ ಚಂದ್ರಿಕಾ (26) ಸ್ಥಿತಿ ಗಂಭೀರವಾಗಿದೆ.ತಿಗಳರಪಾಳ್ಯದಲ್ಲಿ ಲೋಕೇಶ್‌ – ಚಂದ್ರಿಕಾ ದಂಪತಿ ವಾಸವಾಗಿದ್ದು,
ಇವರಿಗೆ ಒಂದು ಮಗುವಿದೆ. ದಂಪತಿ ಮಧ್ಯೆ ಕೌಟುಂಬಿಕ ವಿಚಾರಕ್ಕೆ ಜಗಳವಾಗಿದೆ. ನಿನ್ನೆ ಲೋಕೇಶ್‌ ಅವರು ಕೆಲಸಕ್ಕೆ ಹೋಗಿದ್ದಾಗ, ಗಂಡನ ಮೇಲಿನ ಕೋಪಕ್ಕೆ ಚಂದ್ರಿಕಾ ಕ್ರಿಮಿನಾಶಕವನ್ನು ಟೀ ಯಲ್ಲಿ ಬೆರೆಸಿ ಅದನ್ನು ಮೊದಲು ಮಗುವಿಗೆ ಕುಡಿಸಿ ನಂತರ ತಾನೂ ಸೇವಿಸಿದ್ದಾರೆ.

ಹೊಟ್ಟೆ ನೋವಿನಿಂದ ಚಂದ್ರಿಕಾ ಕೂಗಾಡುತ್ತಿದ್ದಾಗ ಅಕ್ಕಪಕ್ಕದವರು ಬಂದು ನೋಡಿ ತಕ್ಷಣ ತಾಯಿ ಮಗುವನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.ವೈದ್ಯರು ಮಗುವನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಚಂದ್ರಿಕಾ ಸ್ಥಿತಿ ಗಂಭೀರವಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.ಈ ಬಗ್ಗೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News