Thursday, April 3, 2025
Homeಬೆಂಗಳೂರುಬೆಂಗಳೂರು : ರಾಡ್‌ನಿಂದ ಹೊಡೆದು ವೃದ್ಧನ ಕೊಲೆ

ಬೆಂಗಳೂರು : ರಾಡ್‌ನಿಂದ ಹೊಡೆದು ವೃದ್ಧನ ಕೊಲೆ

ಬೆಂಗಳೂರು,ಆ.9– ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಒಂಟಿಯಾಗಿದ್ದ ವೃದ್ಧರೊಬ್ಬರನ್ನು ಭೀಕರವಾಗಿ ಕೊಲೆಗೈದಿರುವ ದುರ್ಘಟನೆ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.

ಮಾದನಾಯಕನಹಳ್ಳಿಯ ಒಂದನೇ ವಾರ್ಡಿನ ವಾಸಿ ಸಿದ್ದಪ್ಪ(70) ಕೊಲೆಯಾದವರು.ದುಷ್ಕರ್ಮಿಗಳು ನಿನ್ನೆ ರಾತ್ರಿ ಸಿದ್ದಪ್ಪ ಅವರನ್ನು ಕೊಲೆಗೈದು ಪರಾರಿಯಾಗಿದ್ದಾರೆ.

ರಕ್ತದ ಮಡುವಿನಲ್ಲಿ ಸಿದ್ದಪ್ಪ ಅವರು ಬಿದ್ದಿರುವುದನ್ನು ಬೆಳಿಗ್ಗೆ 9.30ರ ವೇಳೆ ಕಂಡ ಸ್ಥಳೀಯರು ಮಾಹಿತಿಯನ್ನು ನೀಡಿದ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಮಾದನಾಯ್ಕಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News