ಬೆಂಗಳೂರು,ಡಿ.25- ಈ ಸಂಜೆ ದಿನಪತ್ರಿಕೆಯ ಮುಖ್ಯ ವರದಿಗಾರರಾದ ಬಿ.ಎಸ್.ರಾಮಚಂದ್ರ ಸೇರಿದಂತೆ 55 ಪತ್ರಕರ್ತರನ್ನು 2025ನೇ ಸಾಲಿನ ಬೆಂಗಳೂರು ಪ್ರೆಸ್ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರೆಸ್ಕ್ಲಬ್ನ ಕಾರ್ಯಕಾರಿ ಸಮಿತಿಯು 55 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಿದ್ದು, ಡಿ.31 ರಂದು ಪ್ರೆಸ್ಕ್ಲಬ್ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರೆಸ್ಕ್ಲಬ್ನ ಅಧ್ಯಕ್ಷ ಆರ್.ಶ್ರೀಧರ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಕರ್ತರಾದ ಮೃತ್ಯುಂಜಯ ಎನ್.ಎಚ್., ನಂಜುಂಡೇಗೌಡ ಎಚ್.ಜೆ., ಲೋಚನೇಶ್ ಹೂಗಾರ್, ಗುರುಮೂರ್ತಿ ಎಂ.ಎನ್., ನಂಜುಂಡಪ್ಪ ವಿ.ಮ ವಿಶ್ವನಾಥ್ ಬಿ.ಆರ್., ನಾಗರಾಜ ಎಂ, ನವೀನ್ಕುಮಾರ್ ಅಮೆಂಬಳ, ಅರವಿಂದ್ ಎಸ್., ರಾಮಚಂದ್ರ ಬಿ.ಎಸ್., ಬಸವರಾಜ್ ಬಿ, ಶಿವರುದ್ರಪ್ಪ ಡಿ.ಎಸ್, ಶ್ರೀನಾಥ ಬಿ.ವಿ., ಮಲ್ಲಿಕಾ ಚರಣ್ವಾಡಿ ಕೆ, ಮುನಿರಾಮೇಗೌಡ (ರವಿ) ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮುರಳಿಕುಮಾರ್ ಕೆ, ಸುಭಾಷ್ಚಂದ್ರ ಎನ್.ಎಸ್, ಶ್ರೀನಿವಾಸಮೂರ್ತಿ ಟಿ.ಸಿ ರಮೇಶ್ಕುಮಾರ್ ನಾಯ್್ಕ, ವಾಸು ಮೂರ್ತಿ ಸಿ, ಸಂತೋಷ್ಕುಮಾರ್ ಆರ್.ಬಿ, ವೆಂಕಟೇಶ್ ಎಂ.ರಾವ್, ಆನಂದ್ ಪಿ.ಬೈದನಮನೆ, ಕೀರ್ತಿ ಪ್ರಸಾದ್ ಎಂ, ಮಂಜುನಾಥ ಆರ್, ಜಿಕ್ರಿಯಾ ಕೆ.ಎಂ., ಅನಿಲ್ ಕುಮಾರ್ ರಾಜೇ ಅರಸ್ ಎ.ಸಿ, ಅಂತೋನಿ ಎ.ಮೇರಿ, ಮಾರುತಿ ಹೆಚ್., ಅತ್ತಿಗುಪ್ಪೆ ರವಿಕುಮಾರ್, ಮಧುಕೇಶ್ವರ್ ಜವಳಿ ಅವರನ್ನು ಪ್ರೆಸ್ಕ್ಲಬ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಶಿಲ್ಪಾ ಪಡ್ನಿಸ್, ಸೋಮಶೇಖರ್ ಪಡುಕರೆ, ಅಕ್ಷಯ.ಎ, ಸಿದ್ದೇಶ್ ಟಿ.ಎನ್, ಅನಿತಾ.ಇ, ಪ್ರವೀಣ್ ಪಿ, ಸನತ್ಕುಮಾರ್ ರೈ.ಬಿ, ಸುನಿಲ್ಕುಮಾರ್.ಆರ್, ಮಧು ಡಿ.ಎಲ್, ರಾಕೇಶ್ ಎಂ.ಆರ್, ರಂಗನಾಥ್ ಮರಕಣಿ, ಮಂಜುಶ್ರೀ ಎಂ.ಕಡಕೊಳ, ಅನುಷಾ ರವಿ, ಬನ್ಸಿ ಕಾಳಪ್ಪ, ಹರೀಶ್.ಜಿ(ಕಾಕೋಳು), ಜೈಪಾಲ್ ಶರ್ಮ, ಕಿರಣ್ ಕುಮಾರ್ ಸ್ವಾಮಿ ಬಿ.ಎಸ್., ಮರಿಯಪ್ಪ ಕೆ.ಜೆ, ಮೋಹನ್ಕುಮಾರ್ ಕೆ.ಪಿ., ನಾಗಾರ್ಜುನ (ದ್ವಾರಕಾನಾಥ್), ಪದ ನಾಗರಾಜು ಜಿ.ವೈ, ಪ್ರಭುದೇವ್ ಶಾಸ್ತ್ರಿಮಠ್, ತಿರುಮಲೇಶ್ ದೇಸಾಯಿ, ಅಮ್ಜದ್ ಖಾನ್.ಎಂ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
