ಬೆಂಗಳೂರು, ಡಿ.15-ನಗರದ ಅಂಗಡಿ ಮುಂಗಟ್ಟುಗಳಲ್ಲಿ ಮಾರಾಟ ಮಾಡುತ್ತಿರುವ ಮೊಟ್ಟೆಗಳನ್ನು ಸಂಗ್ರಹಿಸಿ ಲ್ಯಾಬ್ ಟೆಸ್ಟ್‌ಗೆ ಕಳುಹಿಸಿಕೊಡಲಾಗುತ್ತಿದೆ.ಮೊಟ್ಟೆಗಳಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾಗಿದೆ ಎಂಬ ಚರ್ಚೆ ಬೆನ್ನಲ್ಲೇ ಆರೋಗ್ಯ ಸಚಿವರ ನಿರ್ದೇಶನದಂತೆ ನಗರದಾದ್ಯಂತ ಇರುವ ಸೂಪರ್ ಮಾರುಕಟ್ಟೆಗಳು, ಮಾರ್ಟ್‌ಗಳಲ್ಲಿ ಮಾರಾಟ ಮಾಡುತ್ತಿರುವ ಮೊಟ್ಟೆಗಳ ಸ್ಯಾಂಪಲ್ ಸಂಗ್ರಹಿಸಲಾಗುತ್ತಿದೆ.
ನಗರದಲ್ಲಿ 50ಕ್ಕೂ ಹೆಚ್ಚು ಕಡೆ ಮೊಟ್ಟೆ ಸ್ಯಾಂಪಲ್ಸ್ ಸಂಗ್ರಹ ಮಾಡಲಾಗಿದೆ. ಸಂಗ್ರಹವಾದ ಮೊಟ್ಟೆ ಸ್ಯಾಂಪಲ್ಸ್ ಗಳನ್ನು ಲ್ಯಾಬ್ ಟೆಸ್ಟ್ ಗೆ ಒಳಪಡಿಸಲುಆಹಾರ ಹಾಗೂ ಗುಣಮಟ್ಟ ಇಲಾಖೆ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಮೊಟ್ಟೆಗಳಲ್ಲಿ ನೈಟ್ರೋಫ್ಯೂರಾನ್ ಎಂಬ ಔಷಧದ ಕಣಗಳು ಕಂಡ ಬಂದೀದೆ. ನೈಟ್ರೋಫ್ಯೂರಾನ್ ನಿಷೇಧಿತ ಔಷಧದ ಅಂಶ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳಿಗೆ ಕಾರಣ ಎನ್ನಲಾಗಿದೆ. ಹೀಗಾಗಿ ಆಹಾರ ಇಲಾಖೆ ರಾಜ್ಯದ್ಯಂತ ಎಲ್ಲಡೆ ಮಟ್ಟೆಗಳ ಸ್ಯಾಂಪಲ್ ಕಲೆಕ್ಟ್ ಮಾಡುತ್ತಿದೆ.
ಆರ್ ಆರ್ ನಗರ, ಕೆಂಗೇರಿ, ಬಿಟಿಎಮ್ ಲೇಔಟ್, ಕೊರಮಂಗಲ, ಯಶವಂತಪುರ,ವಸಂತನಗರ, ಸಂಜಯನಗರ, ಚಾಮರಾಜಪೇಟೆ, ಹೆಬ್ಬಾಳ, ಕೆಆರ್ ಪುರಂ,ಮೈಸೂರು ರಸ್ತೆ ಸೇರಿದಂತೆ 50ಕ್ಕೂ ಹೆಚ್ಚು ಕಡೆ ಸ್ಯಾಂಪಲ್‌್ಸ ಸಂಗ್ರಹ ಮಾಡಲಾಗಿದೆ.
ಕಳೆದ ಕೆಲ ತಿಂಗಳ ಹಿಂದೆ ಟೆಸ್ಟ್ ಮಾಡಿದಾಗ ಹಾನಿಕಾರಕ ಅಂಶ ಪತ್ತೆಯಾಗಿಲ್ಲ ಮೊಟ್ಟೆ ಹಾನಿಕಾರಕಗಳ ಮಾನದಂಡದ ಕುರಿತು ಕೇಂದ್ರದಿಂದಲೂ ಸಲಹೆ ಮಾರ್ಗಸೂಚಿ ಬಂದಿಲ್ಲ. ಆರೋಗ್ಯ ಇಲಾಖೆಯಿಂದ ಮೊಟ್ಟೆಗಳನ್ನು ಟೆಸ್ಟ್ ಗೆ ಒಳಪಡಿಸಲು ಸೂಚನೆ ನೀಡಲಾಗಿದೆ.
