ಬೆಂಗಳೂರು, ಜ.5- ಇಂದೋರ್ ಮಾದರಿ ಘಟನೆ ನಡೆದಿದ್ದ ನಗರದ ಕೆಎಸ್‌ಎಫ್‌ಸಿ ಬಡಾವಣೆಯಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಲಿಂಗರಾಜಪುರ ವ್ಯಾಪ್ತಿಯ ಕೆಎಸ್‌ಎಫ್‌ಸಿ ಬಡಾವಣೆಯಲ್ಲಿ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾಗಿ ಅಲ್ಲಿನ ಜನರಿಗೆ ವಾಂತಿ ಭೇದಿಯಂತಹ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದವು.
ಕುಡಿಯುವ ನೀರಿಗೆ ಚರಂಡಿ ನೀರಿನ ಮಿಶ್ರಣ ಮಿಶ್ರಣದ ಮೂಲ ಹುಡುಕಾಟದಲ್ಲಿ ಜಲಮಂಡಳಿ ತೊಡಗಿಸಿಕೊಂಡಿದ್ದು, ಲಿಂಗರಾಜಪುರಂದ ಕೆಎಸ್‌ಎಫ್‌ಸಿ ಲೇಔಟ್‌ನಲ್ಲಿ ಸದ್ಯ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ.
ಜಲಮಂಡಳಿ ಅತ್ಯಾಧುನಿಕ ರೊಬೋಟಿಕ್ ತಂತ್ರಜ್ಞಾನ ಮೂಲಕ ಜಲ ಮಂಡಳಿ ಚರಂಡಿ ನೀರು ಮಿಶ್ರಣವಾಗಿರುವ ಸಮಸ್ಯೆ ಪತ್ತೆಗೆ ಕ್ರಮ ಕೈಗೊಂಡಿದೆ.ಕಳೆದ 10ದಿನಗಳಿಂದ ಈ ಬಡಾವಣೆಯ ಕೆಲವರಿಗೆ ಕಲುಷಿತ ನೀರು ಸೇವನೆಯಿಂದ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿತ್ತು.
ವಾತಾವರಣ ಬದಲಾವಣೆಯಿಂದ ಆರೋಗ್ಯದ ಸಮಸ್ಯೆ ಅಂತ ಇಲ್ಲಿನ ಜನ ಸುಮನಾಗಿದ್ದರು. ಅದರ ನಂತರ ಇಂದೋರ್ ಘಟನೆ ಮಾದರಿಯಲ್ಲೇ ಇಲ್ಲಿನ ಬಡಾವಣೆಯ ನಲ್ಲಿಗಳಲ್ಲಿ ಕಲುಷಿತ ನೀರು ಸರಬರಾಜುಗುತ್ತಿರುವುದನ್ನು ಕಂಡು ಜನ ಎಚ್ಚೆತ್ತುಕೊಂಡಿದ್ದರು.
ಸದ್ಯ ಪ್ರತಿ ಮನೆಯಲ್ಲೂ ಆರೋಗ್ಯ ಇಲಾಖೆಯಿಂದಲೂ ಪ್ರತಿಯೊಬ್ಬರ ಆರೋಗ್ಯ ಪರೀಶೀಲನೆ ನಡೆಸಲಾಗುತ್ತಿದೆ. ರೋಗ ಲಕ್ಷಣಗಳು ಕಂಡು ಬಂದರೆ ಅಂತವರಿಗೆ ಸೂಕ್ತ ಚಿಕಿತ್ಸೆ ನೀಡಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
