ಬೆಂಗಳೂರು, ಜ.1- ಯಾರ್ದೋ ದುಡ್ಡು ಯಲ್ಲಮನ ಜಾತ್ರೆ ಎನ್ನುವಂತೆ ಯಾರೋ ಕುಣಿದು ಕುಪ್ಪಳಿಸಿ ಮೋಜು ಮಸ್ತಿ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಲಕ್ಷ ಲಕ್ಷ ಖರ್ಚು ಮಾಡಿದೆ.
ಜಿಬಿಎಯ ಕೆಲ ಕಚೇರಿಗಳಲ್ಲಿ ಕಾಫಿ, ಟೀ ಕುಡಿಯಲು ಹಣ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲೇ ಜಿಬಿಎ ಅಧಿಕಾರಿಗಳು ಹೊಸ ವರ್ಷ ಸಂಭ್ರಮಾಚರಣೆಗೆ ಲಕ್ಷ ಲಕ್ಷ ಹಣ ಖರ್ಚು ಮಾಡಿ ನಾಗರೀಕರ ಕೆಂಗಣ್ಣಿಗೆ ಗುರಿಯಾಗಿದೆ.
ಸಾರ್ವಜನಿಕರು ಕಟ್ಟುವ ತೆರಿಗೆ ಹಣವನ್ನು ರಸ್ತೆಯಲ್ಲಿ ಪಾರ್ಟಿ ಮಾಡೋದಕ್ಕೆ ಖರ್ಚು ಜಿಬಿಎ ಖರ್ಚು ಮಾಡಿದೆ. ನಗರಪಾಲಿಕೆಯಿಂದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಲೈಟ್ ಮತ್ತು ಬ್ಯಾರಿಕೇಡ್ ಹಾಕಲು ಲಕ್ಷ ಲಕ್ಷ ಹಣ ಖರ್ಚು ಮಾಡಲಾಗಿದೆ.
ಹೊಸ ವರ್ಷದ ಆಚರಣೆ ನಡೆಯುವ ಸ್ಥಳಗಳಲ್ಲಿ ಭದ್ರತಾ ಕಾರ್ಯ ಕೈಗೊಳ್ಳಲು ಸಹಕಾರಿಯಾಗುವಂತೆ ಹೈ ಮಾಸ್ಟ್ ಲೈಟ್ ಅಳವಡಿಕೆ ಮಾಡುವಂತೆ ನಗರ ಪೊಲೀಸರು ಮಾಡಿಕೊಂಡ ಮನವಿ ಮೇರೆಗೆ ಜಿಬಿಎ ಅಧಿಕಾರಿಗಳು ಬರೊಬ್ಬರಿ 25 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದಾರಂತೆ.
ಪೊಲೀಸ್ ಇಲಾಖೆ ಮನವಿ ಮೇರೆಗೆ ಕೇವಲ ಒಂದು ದಿನಕ್ಕಾಗಿ ಹೈ ಮಾಸ್ಟ್ ಲೈಟ್ ಹಾಗೂ ಬ್ಯಾರಿಕೇಡ್‌ಗಳನ್ನು ಅಳವಡಿಸಲು ಜಿಬಿಎ ಸಾರ್ವಜನಿಕರ ತೆರಿಗೆ ಹಣ ಬಳಕೆ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಜ್ಞಾವಂತ ನಾಗರೀಕರು ಪ್ರಶ್ನಿಸಿದ್ದಾರೆ.
