Monday, January 5, 2026
Homeಬೆಂಗಳೂರುಮನೆಯಲ್ಲಿ ಬೆಂಕಿ : ಉಸಿರುಗಟ್ಟಿ ಮಹಿಳಾ ಟೆಕ್ಕಿ ಸಾವು

ಮನೆಯಲ್ಲಿ ಬೆಂಕಿ : ಉಸಿರುಗಟ್ಟಿ ಮಹಿಳಾ ಟೆಕ್ಕಿ ಸಾವು

House fire: Female techie dies of suffocation

ಬೆಂಗಳೂರು,ಜ.4- ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮಹಿಳಾ ಸಾಫ್‌್ಟವೇರ್‌ ಇಂಜಿನಿಯರ್‌ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ರಾತ್ರಿ ರಾಮಮೂರ್ತಿನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಸುಬ್ರಹಣ್ಯ ಲೇಔಟ್‌ನ ವಸತಿ ಸಮುಚ್ಚಯದಲ್ಲಿ ನಡೆದಿದೆ.
ಮಂಗಳೂರು ಮೂಲದ ಶರ್ಮಿಳಾ(34) ಮೃತ ಟೆಕ್ಕಿ.

ಅಪಾರ್ಟ್‌ಮೆಂಟ್‌ನ 3ನೇ ಮಹಡಿಯಲ್ಲಿ ಸ್ನೇಹಿತೆಯೊಂದಿಗೆ ವಾಸವಾಗಿದ್ದ ಈಕೆ ಸ್ಥಳೀಯ ಸಾಫ್‌್ಟವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರಜೆ ಕಾರಣ ಈಕೆಯ ಸ್ನೇಹಿತೆ ಊರಿಗೆ ತೆರಳಿದ್ದ ಕಾರಣ ಒಬ್ಬರೇ ಇದ್ದರು. ಕಳೆದ ರಾತ್ರಿ ಫ್ಲಾಟ್‌ನ ತಮ ಮನೆಯ ಕೊಠಡಿಯಲ್ಲಿದ್ದಾಗ ಸ್ನೇಹಿತೆಯ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಲಾಗಿತ್ತು.

ಈ ವೇಳೆ ಶರ್ಮಿಳಾ ಅವರು ಬೆಂಕಿ ನಂದಿಸಲು ತನ್ನ ಕೋಣೆಯ ಬಾಗಿಲು ತೆರೆಯುತ್ತಿದ್ದಂತೆ ಏಕಾಏಕಿ ಬೆಂಕಿ ಹಾಗೂ ಹೊಗೆ ಅವರಿಗೆ ತಗುಲಿದೆ. ತಕ್ಷಣ ಅವರು ಅಲ್ಲಿಂದ ಪಾರಾಗಲು ಪ್ರಯತ್ನಿಸಿದರಾದರೂ ಕತ್ತಲೆಯಲ್ಲಿ ಏನೂ ಕಾಣದ ಕಾರಣ ಅತ್ತಿತ್ತ ಅಡ್ಡಾಡಿದ್ದಾರೆ.
ಮನೆ ತುಂಬೆಲ್ಲ ಹೊಗೆ ಆವರಿಸಿದ್ದರಿಂದ ನಿತ್ರಾಣಗೊಂಡು ಶರ್ಮಿಳಾ ಕುಸಿದುಬಿದ್ದಿದ್ದಾರೆ. ಅಕ್ಕಪಕ್ಕದವರು ಬಾಗಿಲು ಒಡೆದು ನೋಡಿದಾಗ ಅಷ್ಟೊತ್ತಿಗಾಗಲೇ ಶರ್ಮಿಳಾ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದರು.

ಸುದ್ದಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಮನೆಯ ಕೆಲವು ವಸ್ತುಗಳೆಲ್ಲ ಸುಟ್ಟು ಹೋಗಿದೆ. ಶವವನ್ನು ಆಸ್ಪತ್ರೆಗೆ ಸಾಗಿಸಿ ಪ್ರಕರಣ ದಾಖಲಿಸಿಕೊಂಡ ರಾಮಮೂರ್ತಿನಗರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮನೆಯಲ್ಲಿ ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂಬುದು ನಿಗೂಢವಾಗಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು, ಅಗ್ನಿಶಾಮಕ ದಳದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

RELATED ARTICLES

Latest News