ಬೆಂಗಳೂರು,ಡಿ.27– ತನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲೇ ಪತಿಯೂ ನೇಣಿಗೆ ಶರಣಾಗಿದ್ದಾನೆ. ಮಹಾರಾಷ್ಟ್ರದ ನಾಗಪುರದಲ್ಲಿ ಆತಹತ್ಯೆಗೆ ಶರಣಾದ ಪತಿಯನ್ನು ಸೂರಜ್ ಎಂದು ಗುರುತಿಸಲಾಗಿದೆ.
ವಿದ್ಯಾರಣ್ಯಪುರದ ಸೂರಜ್ ಎರಡು ತಿಂಗಳ ಹಿಂದೆ ರಾಮಮೂರ್ತಿ ನಗರದ ಗಾನವಿ ಎಂಬಾಕೆಯನ್ನು ವಿವಾಹವಾಗಿದ್ದರು.ವಿವಾಹದ ನಂತರ ಪತಿ-ಪತ್ನಿಯರ ನಡುವೆ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಪತಿಯನ್ನು ತೊರೆದು ತವರು ಮನೆ ಸೇರಿಕೊಂಡಿದ್ದ ಗಾನವಿ ತನ್ನ ತಾಯಿಯ ಬಳಿ ಪತಿಯ ಶಕ್ತಿಹೀನತೆ ಹಾಗೂ ಅವರ ಕುಟುಂಬದವರ ಕಿರುಕುಳದ ಬಗ್ಗೆ ಅಳಲು ತೋಡಿಕೊಂಡಿದ್ದರು.
ಮಾತ್ರವಲ್ಲದೇ ಇದರಿಂದ ಮನನೊಂದಿದ್ದ ಗಾನವಿ ಮೂರು ದಿನಗಳ ಹಿಂದೆ ಆತಹತ್ಯೆಗೆ ಶರಣಾಗಿದ್ದಾರೆ.ಮಗಳ ಸಾವಿನಿಂದ ನೊಂದ ಗಾನವಿ ಕುಟುಂಬದವರು ಸೂರಜ್ ಹಾಗೂ ಅವರ ಕುಟುಂಬದವರ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ವರದಕ್ಷಣೆ ಕಿರುಕುಳದ ದೂರು ನೀಡಿದ್ದರು.
ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಸೂರಜ್ ಕುಟುಂಬ ನಾಪತ್ತೆಯಾಗಿತ್ತು. ಸೂರಜ್ ತನ್ನ ತಾಯಿ ಜಯಂತಿ ಹಾಗೂ ಸಹೋದರ ಸಂಜಯ್‌ನೊಂದಿಗೆ ಮಹಾರಾಷ್ಟ್ರದ ನಾಗಪುರದ ಲಾಡ್ಜ್ ನಲ್ಲಿ ತಲೆ ಮರೆಸಿಕೊಂಡಿದ್ದರು.
ಪತ್ನಿ ಮನೆಯವರು ತಮ ವಿರುದ್ಧ ಮಾಡಿದ್ದ ಆರೋಪದಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ಸೂರಜ್ ಆತಹತ್ಯೆಗೆ ಯತ್ನಿಸಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಸೂರಜ್ ಅವರ ತಾಯಿ ಜಯಂತಿ ಸಹ ಆತಹತ್ಯೆಗೆ ಪ್ರಯತ್ನಿಸಿದ್ದಾರೆಂದು ಹೇಳಲಾಗುತ್ತಿದೆ.ಆದರೆ ಪೊಲೀಸರು ಇದನ್ನು ಖಚಿತಪಡಿಸಿಲ್ಲ.
