Tuesday, January 13, 2026
Homeಬೆಂಗಳೂರುಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯ ರಶ್ಮಿ ವಿಸ್ಮಯಕ್ಕೆ ಕಾತುರರಾಗಿರುವ ಭಕ್ತರು

ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯ ರಶ್ಮಿ ವಿಸ್ಮಯಕ್ಕೆ ಕಾತುರರಾಗಿರುವ ಭಕ್ತರು

Makar Sankranti: Sunrays fall on Gavi Gangadhareshwara temple shivalinga in sanctum sanctorum

ಬೆಂಗಳೂರು,ಜ.6- ಸುಗ್ಗಿಹಬ್ಬ ಸಂಕ್ರಾಂತಿ ಸಡಗರ ರಾಜ್ಯದೆಲ್ಲೆಡೆ ಮನೆ ಮಾಡಿದ್ದರೆ ಇತಿಹಾಸ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಶಿವಮೂರ್ತಿಯನ್ನು ಸ್ಪರ್ಶಿಸುವ ಸೂರ್ಯ ರಶಿ ವಿಸಯವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತುರರಾಗಿದ್ದಾರೆ.

ವರ್ಷದ ಮೊದಲ ಹಬ್ಬ ಸಂಕ್ರಾಂತಿ ಗುರುವಾರದಂದು ಆಚರಿಸಲಾಗುತ್ತಿದ್ದು, ಪ್ರತಿ ವರ್ಷದಿಂದ ಈ ವರ್ಷವೂ ಕೂಡ ಗವಿಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ವಿಸಯಕ್ಕೆ ಸಾಕ್ಷಿಯಾಗಲಿದೆ.

ಮಕರ ಸಂಕ್ರಾಂತಿಯಂದು ಸೂರ್ಯೋ ದೇವ ದಕ್ಷಿಣ ಪಥದಿಂದ ಉತ್ತರ ಪಥಕ್ಕೆ ಸಂಚಲನ ಮಾಡುವ ಶುಭ ಘಳಿಗೆಯಲ್ಲಿ ನಗರದ ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ದೇಗುಲದ ಶಿವಮೂರ್ತಿಯನ್ನು ಸೂರ್ಯನ ಕಿರಣಗಳು ಸ್ಪರ್ಶಿಸಲಿವೆ. ಇದನ್ನು ಶಿವನಿಗೆ ಸೂರ್ಯದೇವನು ಸಲ್ಲಿಸುವ ವಿಶೇಷ ಪೂಜೆ ಎಂದು ಭಕ್ತರು ನಂಬಿದ್ದಾರೆ.

ಈ ಬಾರಿ ಗುರುವಾರ ಸಂಜೆ 5.02 ರಿಂದ 5.04 ರವರೆಗೆ ಅಂದರೆ 2 ನಿಮಿಷಗಳ ಕಾಲ ಸೂರ್ಯರಶಿಯ ವಿಸಯ ನಡೆಯಲಿದೆ.ಈ ಕೌತುಕವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತುರರಾಗಿದ್ದು, ದೇವಾಲಯದ ಹೊರಭಾಗದಲ್ಲಿ ಬೃಹತ್‌ ಎರಡು ಎಲ್‌ಇಡಿ , 5 ಟಿವಿಗಳಲ್ಲಿ ಪರದೆ ವ್ಯವಸ್ಥೆ ಮಾಡಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಸಂಕ್ರಾಂತಿಯಂತು ದೇವಾಲಯಕ್ಕೆ ಹೆಚ್ಚಿನ ಭಕ್ತರು ಆಗಮಿಸಲಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಗುರುವಾರ ರಾತ್ರಿ 11 ರವರೆಗೂ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

RELATED ARTICLES

Latest News