Thursday, January 8, 2026
Homeಬೆಂಗಳೂರುಎಂಬಿಎ ಪದವೀಧರ ಸೇರಿ ಇಬ್ಬರ ಬಂಧನ : 3.5 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

ಎಂಬಿಎ ಪದವೀಧರ ಸೇರಿ ಇಬ್ಬರ ಬಂಧನ : 3.5 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

MBA graduate and two others arrested: Drugs worth 3.5 crore seized

ಬೆಂಗಳೂರು,ಜ.6- ಹೊಸವರ್ಷದ ಪಾರ್ಟಿಗೆಂದು ಮಾದಕ ವಸ್ತು ತಂದಿಟ್ಟಿದ್ದ ಎಂಬಿಎ ಪದವೀಧರ ಸೇರಿದಂತೆ ಇಬ್ಬರನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿ 3.5 ಕೋಟಿ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್‌ ವಶಪಡಿಸಿಕೊಂಡಿದ್ದಾರೆ. ಬಾಣಸವಾಡಿ ನಿವಾಸಿ, ಎಂಬಿಎ
ಪದವೀಧರ ಮೊಹಮದ್‌ ತಾರಿಖ್‌ (34) ಹಾಗೂ ಕಾಡುಗೋಡಿ ನಿವಾಸಿ, ಶೇಖ್‌ ಅಹಮದ್‌ ಅರಬತ್‌ ಖಾನ್‌ (29) ಬಂಧಿತ ಆರೋಪಿಗಳು.

ಮೊಹಮದ್‌ ತಾರಿಖ್‌ ಖಾಸಗಿ ಕಂಪನಿ ಯೊಂದರ ಉದ್ಯೋಗಿ. ಶೇಖ್‌ ಅಹಮದ್‌ ವೃತ್ತಿಯಲ್ಲಿ ಸೆಕೆಂಡ್‌ಹ್ಯಾಂಡ್‌ ಕಾರು ವ್ಯಾಪಾರಿ.ವಿದೇಶಿ ಪ್ರಜೆಯಿಂದ ಈ ಇಬ್ಬರು ಮಾದಕ ವಸ್ತು ಖರೀದಿಸಿ ಹೊಸವರ್ಷಾಚರಣೆಗೆ ತಂದಿದ್ದರು ಎಂಬುವುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.

ಹೊಸವರ್ಷಾಚರಣೆಯ ಸಮಯದಲ್ಲಿ ಯುವಕರಿಗೆ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್‌ಅನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಈ ಮಾಹಿತಿಯನ್ನಾಧರಿಸಿ ಎನ್‌ಡಿಪಿಎಸ್‌‍ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡು ನಂತರ ಕಾರ್ಯಾಚರಣೆ ಕೈಗೊಂಡು ಡಿ.31 ರಂದು ಹೊಸೂರು ರಸ್ತೆಯ ಹಿಂದೂ ಸಶಾನದ ಬಳಿ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ.

ಆತನನ್ನು ವಿಚಾರಣೆಗೊಳಪಡಿಸಿದಾಗ, ಮತ್ತೊಬ್ಬ ಸಹಚರನೊಂದಿಗೆ ಸೇರಿಕೊಂಡು ಅಪರಿಚಿತ ವ್ಯಕ್ತಿಯಿಂದ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್‌ನ್ನು ಕಡಿಮೆ ಬೆಲೆಗೆ ಖರೀದಿಸಿದ್ದು ಹೊಸ ವರ್ಷಾಚರಣೆಯ ಸಮಯದಲ್ಲಿ ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯವೆಸಗಿರುವುದಾಗಿ ಹೇಳಿದ್ದಾನೆ.ಎಂಬಿಎ ಪದವೀಧರನನ್ನು ಸುದೀರ್ಘ ವಿಚಾರಣೆ ನಡೆಸಿ, ಸಶಾನದಲ್ಲಿರುವ ಸಮಾಧಿಯೊಂದರ ಪಕ್ಕದಲ್ಲಿ ಅಡಗಿಸಿಟ್ಟಿದ್ದ 2 ಕೆ.ಜಿ 480 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ ಹಾಗೂ ಕೃತ್ಯಕ್ಕೆ ಬಳಸಿದ 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಈ ಆರೋಪಿಯು ನೀಡಿದ ಮಾಹಿತಿಯ ಮೇರೆಗೆ, ಆತನ ಸಹಚರನನ್ನು ಬೈಯಪ್ಪನಹಳ್ಳಿಯ ಮಲ್ಲೇಶ್‌ ಪಾಳ್ಯದಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ, ಕಾಡುಗೋಡಿಯ ಸೀಗೇಹಳ್ಳಿಯ ವಾಸದ ಮನೆಯಲ್ಲಿಟ್ಟಿದ್ದ 720 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ 3.50 ಕೋಟಿ ಮೌಲ್ಯದ 3 ಕೆ.ಜಿ 200 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ ಹಾಗೂ ಕೃತ್ಯಕ್ಕೆ ಬಳಸಿದ 1 ದ್ವಿಚಕ್ರ ವಾಹನ ಹಾಗೂ 1 ಮೊಬೈಲ್‌ನನ್ನು ವಶಪಡಿಸಿಕೊಳ್ಳುವಲ್ಲಿ ಇನ್ಸ್ ಪೆಕ್ಟರ್‌ ರವಿ ಮತ್ತು ಸಬ್‌ಇನ್‌್ಸಪೆಕ್ಟರ್‌ ಮಧು ಅವರನ್ನೊಳಗೊಂಡ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದು ಆತನ ಪತ್ತೆ ಕಾರ್ಯ ಮುಂದುವರೆದಿದೆ.

ಜಿಎಸ್‌‍ಟಿ ವಂಚನೆ ಜಾಲ ಭೇದಿಸಿದ ಪೊಲೀಸರು ಇಬ್ಬರ ಸೆರೆ
ಬರೇಲಿ,ಜ.6- ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಪೊಲೀಸರು ಸುಮಾರು 24 ಕೋಟಿ ರೂ. ಮೌಲ್ಯದ ಅಕ್ರಮ ಹಣಕಾಸು ವಹಿವಾಟುಗಳನ್ನು ಒಳಗೊಂಡ ಹವಾಲಾ ಮತ್ತು ಜಿಎಸ್‌‍ಟಿ ವಂಚನೆ ಜಾಲವನ್ನು ಬಯಲಿಗೆಳೆದು ಇಬ್ಬರನ್ನು ಬಂಧಿಸಿದ್ದಾರೆ.ನಕಲಿ ಸಂಸ್ಥೆಗಳು ಮತ್ತು ಮ್ಯೂಲ್‌ ಖಾತೆಗಳನ್ನು ಹಣ ವರ್ಗಾಯಿಸಲು ಬಳಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರನ್ನು ಶಾಹಿದ್‌ ಅಹದ್‌ (38) ಮತ್ತು ಅಮಿತ್‌ ಗುಪ್ತಾ (38) ಎಂದು ಗುರುತಿಸಲಾದೆ.

ಬರೇಲಿಯ ಭೂತಾ ಪ್ರದೇಶದಲ್ಲಿ ಇವರನ್ನು ಬಂಧಿಸಲಾಗಿದ್ದು, ಅವರ ಬಳಿ ಇದ್ದ ಹಲವಾರು ಮೊಬೈಲ್‌ ಫೋನ್‌ಗಳು ಮತ್ತು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕಸೂತಿ ಕುಶಲಕರ್ಮಿಯೊಬ್ಬನಿಗೆ ತನಗೆ ತಿಳಿದಿಲ್ಲದ ವಹಿವಾಟುಗಳಿಗಾಗಿ ಸುಮಾರು 1.5 ಕೋಟಿ ರೂ. ಆದಾಯ ತೆರಿಗೆ ನೋಟಿಸ್‌‍ ಬಂದ ನಂತರ ಈ ಜಾಲ ಬೆಳಕಿಗೆ ಬಂದಿದೆ ಎಂದು ಬರೇಲಿ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಅಂಶಿಕಾ ವರ್ಮಾ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿಗಳು ಸಣ್ಣ ವ್ಯಾಪಾರಿಗಳು ಮತ್ತು ದಿನಗೂಲಿ ಕಾರ್ಮಿಕರನ್ನು ಗುರಿಯಾಗಿಸಿಕೊಳ್ಳಲಾಗಿತ್ತು ಅವರಿಗೆ ತಮ ವ್ಯವಹಾರಗಳನ್ನು ವಿಸ್ತರಿಸಲು ಮತ್ತು ರಫ್ತು ಮಾರುಕಟ್ಟೆಗಳಿಗೆ ಪ್ರವೇಶಿಸಲು ಸಹಾಯ ಮಾಡುವುದಾಗಿ ತಿಳಿಸುತ್ತಿದ್ದರು.ಅವರ ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌ಗಳಂತಹ ಗುರುತಿನ ದಾಖಲೆಗಳನ್ನು ಪಡೆದು ಅವರ ಹೆಸರಿನಲ್ಲಿ ಬ್ಯಾಂಕ್‌ ಖಾತೆಗಳನ್ನು ತೆರೆದರು ಮತ್ತು ಶೆಲ್‌ ಕಂಪನಿಗಳನ್ನು ಪ್ರಾರಂಭಿಸಿ, ನಂತರ ಅವುಗಳನ್ನು ದೊಡ್ಡ ಪ್ರಮಾಣದ ಅನಧಿಕೃತ ವಹಿವಾಟುಗಳಿಗೆ ಬಳಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಯ ಸಮಯದಲ್ಲಿ ಕುಶಲಕರ್ಮಿಯ ಹೆಸರಿನಲ್ಲಿ ಸತ್ಯ ಸಹಾಬ್‌ ಟ್ರೇಡರ್ಸ್‌ ಎಂಬ ನಕಲಿ ಸಂಸ್ಥೆಯನ್ನು ಸೃಷ್ಟಿಸಿ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದೆ ಎಂದು ವರ್ಮಾ ಹೇಳಿದರು.ಒಂದು ವರ್ಷದೊಳಗೆ ಈ ಸಂಸ್ಥೆಯ ಮೂಲಕ ಸುಮಾರು 24 ಕೋಟಿ ರೂ ಅನುಮಾನಾಸ್ಪದ ವಹಿವಾಟುಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.

ಮಹಾವೀರ್‌ ಟ್ರೇಡಿಂಗ್‌ ಕಂಪನಿ, ಮಹಾಕಲ್‌ ಟ್ರೇಡರ್ಸ್‌ ಮತ್ತು ಸುಮಿತ್‌ ಟ್ರೇಡರ್ಸ್‌ ಸೇರಿದಂತೆ ಹಲವಾರು ಇತರ ಸಂಸ್ಥೆಗಳು ಕೇವಲ ಕಾಗದದ ಮೇಲೆ ಅಸ್ತಿತ್ವದಲ್ಲಿದ್ದು, ಜಿಎಸ್‌‍ಟಿಯಿಂದ ತಪ್ಪಿಸಿಕೊಳ್ಳಲು ನಕಲಿ ಬಿಲ್‌ಗಳು ಮತ್ತು ಇನ್‌ವಾಯ್ಸ್ ಗಳನ್ನು ರಚಿಸಲು ಬಳಸಲಾಗುತ್ತಿವೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.

ಮೊದಲ ನೋಟದಲ್ಲಿ ಇದು ಜಿಎಸ್‌‍ಟಿ ವಂಚನೆಯಂತೆ ಕಾಣುತ್ತದೆ, ಆದರೆ ಹಣದ ಚಲನೆಯು ಹವಾಲಾ ಜಾಲದ ಸಂಭಾವ್ಯ ಒಳಗೊಳ್ಳುವಿಕೆಯನ್ನು ಸೂಚಿಸುತ್ತದೆ ಎಂದು ಎಸ್‌‍ಪಿ ಹೇಳಿದರು, ನೆರೆಯ ಶಹಜಹಾನ್‌ಪುರ ಜಿಲ್ಲೆಯ ವ್ಯಕ್ತಿಯನ್ನು ಸಹ ತನಿಖೆಗೆ ಒಳಪಡಿಸಲಾಗಿದೆ. ಪ್ರಕರಣ ದಾಖಲಿಸಲಾಗಿದೆ ಮತ್ತು ಜಾಲದಲ್ಲಿನ ಹೆಚ್ಚುವರಿ ಫಲಾನುಭವಿಗಳು ಮತ್ತು ಲಿಂಕ್‌ಗಳನ್ನು ಗುರುತಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

RELATED ARTICLES

Latest News