Sunday, December 14, 2025
Homeಬೆಂಗಳೂರುಮೆಟ್ರೋ ಕಾಮಗಾರಿ ಪರಿಶೀಲಿಸಿದ ಸಚಿವ ಕೃಷ್ಣಬೈರೇಗೌಡ, ಕಂಟ್ರಾಕ್ಟರ್‌ಗೆ ತರಾಟೆ

ಮೆಟ್ರೋ ಕಾಮಗಾರಿ ಪರಿಶೀಲಿಸಿದ ಸಚಿವ ಕೃಷ್ಣಬೈರೇಗೌಡ, ಕಂಟ್ರಾಕ್ಟರ್‌ಗೆ ತರಾಟೆ

Minister Krishna Byre Gowda inspects metro work

ಬೆಂಗಳೂರು, ಡಿ.14-ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಇಂದು ನಮ ಮೆಟ್ರೋದ ಹಂತ 2ಬಿ ನಾಗವಾರ ನಿಲ್ದಾಣದವರೆಗಿನ ಕಾಮಗಾರಿಯನ್ನು ಪರಿಶೀಲಿಸಿ ಗುತ್ತಿಗೆದಾರರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೆಲವು ಸೂಚನೆಗಳನ್ನು ನೀಡಿದರು.

ಮೆಟ್ರೋ ರೈಲು ಮಾರ್ಗದ ಒಂದು ಪಿಲ್ಲರ್‌ ನಿರ್ಮಿಸಲು ಎರಡು ವರ್ಷ ಬೇಕಾ? ಎರಡು ವರ್ಷದಿಂದ ಆಗದ ಕೆಲಸವನ್ನು ಎರಡು ತಿಂಗಳಲ್ಲಿ ಮಾಡಲು ಮ್ಯಾಜಿಕ್‌ ಮಾಡುತ್ತೀರಾ? ಎಂದು ಮೆಟ್ರೋ ರೈಲು ಮಾರ್ಗದ ಎನ್‌ಸಿಸಿ ಕಂಟ್ರಾಕ್ಟರ್‌ನನ್ನು ತರಾಟೆಗೆ ತೆಗೆದುಕೊಂಡರು.

ಪಾದಚಾರಿ ಮಾರ್ಗದಲ್ಲಿರುವ ಟ್ರಾನ್‌್ಸಫಾರ್ಮರ್‌ ತೆರವುಗೊಳಿಸಿ ಪಾದಚಾರಿಗಳಿಗೆ ಅನುಕೊಲ ಮಾಡಿಕೊಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಸರ್ವಿಸ್‌‍ ರಸ್ತೆಗಳನ್ನು ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸೂಚಿಸಿದರು.

ಬ್ಯಾಟರಾಯನಪುರ ವೃತ್ತದ ಬಳಿ ಪಾದಚಾರಿ ಮಾರ್ಗದ ಕೆಲಸ ಆರಂಭಿಸುವಂತೆ ನಿರ್ದೇಶನ ನೀಡಿದ ಸಚಿವರು, ಎಲ್ಲೋ ನಡೆಯುವ ಮೆಟ್ರೋ ಕಾಮಗಾರಿಗೆ ಮತ್ತೆ ಇನ್ನೆಲ್ಲೋ ಬ್ಲಾಕ್‌ ಮಾಡಿ ಜನರಿಗೆ ಏಕೆ ತೊಂದರೆ ಕೊಡುತ್ತೀರಾ ಎಂದು ಮೆಟ್ರೋ ಅಧಿಕಾರಿಗಳ ಚಳಿ ಬಿಡಿಸಿದರು. ಅಲ್ಲದೆ, ಕೊಡಿಗೇಹಳ್ಳಿ ಬಳಿಯ ಬ್ಲಾಕೇಜ್‌ ತೆರವು ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಮೆಟ್ರೋ ರೈಲು ನಿಗಮ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

RELATED ARTICLES

Latest News