Saturday, December 6, 2025
Homeಬೆಂಗಳೂರುಬೆಂಗಳೂರು : 3 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಆತ್ಮಹತ್ಯೆ

ಬೆಂಗಳೂರು : 3 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಆತ್ಮಹತ್ಯೆ

Newlywed woman commits suicide after marrying for love

ಬೆಂಗಳೂರು,ಡಿ.4-ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಮೂರೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಂದ್ರಹಳ್ಳಿಯ ವಿದ್ಯಮಾನ್ಯ ನಗರದಲ್ಲಿ ನಡೆದಿದೆ
ಅಮೂಲ್ಯ (23) ಮೃತ ಮಹಿಳೆ.

ಅಮೂಲ್ಯ-ಅಭಿಷೇಕ್‌ ಪರಸ್ಪರ ಪ್ರೀತಿಸುತ್ತಿದ್ದರು ಆದರೆ ಇದಕ್ಕೆ ಇಬ್ಬರ ಮನೆಯವರ ವಿರೋಧವಿತ್ತು. ನಂತರದ ದಿನಗಳಲ್ಲಿ ಮಾತುಕತೆ ನಡೆಸಿ ಇಬ್ಬರ ಕುಟುಂಬದವರನ್ನ ಒಪ್ಪಿಸಿ ಮೂರು ತಿಂಗಳ ಹಿಂದಷ್ಟೇ ಮದುವೆ ಮಾಡಿಸಿದ್ದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟು ಮೂರು ತಿಂಗಳಲ್ಲಿ ಅಮೂಲ್ಯ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದು, ಅಮೂಲ್ಯ ಕುಟುಂಬಸ್ಥರು ಮಗಳ ಸಾವಿಗೆ ಪತಿ ಅಭಿಷೇಕ್‌ ಕಾರಣ ಎಂದು ಆರೋಪಿಸಿದ್ದಾರೆ.

ಮಗಳು ಯಾರ ಜೊತೆಗೂ ಮಾತಾಡೋಕೆ ಬಿಡ್ತಾ ಇರಲಿಲ್ಲ. ಅಡುಗೆ ಮಾಡೋಕೆ ಬರಲ್ಲ ಅಂತಾ ಕಿರುಕುಳ ಕೊಡ್ತಾ ಇದ್ರು. ಅವ್ರೇ ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬ್ಯಾಡರಹಳ್ಳಿ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಸ್ತುತ ಪತಿ ಅಭಿಷೇಕ್‌ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ .ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News