ಬೆಂಗಳೂರು,ಡಿ.22- ಕುಂಬಳಗೋಡು ಸ್ಟೇಷನ್‌ನಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ನಾಳೆ ನಗರದ ಕೆಲವು ಕಡೆ ವಿದ್ಯುತ್ ವ್ಯತ್ಯಯ (Power outage) ಉಂಟಾಗಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ.
ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕುಂಬಳಗೋಡು ಸ್ಟೇಷನ್‌ನಲ್ಲಿ ( 66/11ಕೆ.ವಿ ) ಕೆಲಸ ನಿರ್ವಹಣೆ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಬೆಸ್ಕಾಂ ಹೇಳಿದೆ.
ಭೀಮನಕುಪ್ಪೆ ವಿಲೇಜ್, ವಿನಾಯಕ ನಗರ, ಫಿಶ್ ಫ್ಯಾಕ್ಟರಿ ಗೇರುಪಾಳ್ಯ ಒಂದನೇ ಮೈಲುಕಲ್ಲು, ಡೆಕ್ಕನ್ ಹೆರಾಲ್‌್ಡ, ಅಂಚೆಪಾಳ್ಯ, ಪ್ರಾವಿಡೆಂಟ್, ಹೊಸಪಾಳ್ಯ, ಕಣ್‌ಮಿಣಿಕೆ, ಕುಂಬಳಗೋಡು ಇಂಡಸ್ಟ್ರೀಯಲ್ ಏರಿಯಾ, ಕಂಬಿಪುರ, ಕಾರುಬೆಲೆ, ತಗಚಗುಪ್ಪೆ, ಪಿಂಟೋಬಾರೆ ಗುಡಿಮಾವು, ದೇವಗೆರೆ, ಗಂಗಸಂದ್ರ, ಆನೆಪಾಳ್ಯ, ದೊಡ್ಡಿಪಾಳ್ಯ, ಗೋಣಿಪುರ, ಗೊಲ್ಲಹಳ್ಳಿ, ತಿಟ್ಟೂರು, ಚಿನ್ನಕುರ್ಚಿ, ಅಂಚೆಪಾಳ್ಯ, ಬಾಬಸಾಬ್‌ಪಾಳ್ಯ, ದೊಡ್ಡಬೆಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಆಡಚಣೆಯಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
Read this : ಬೆಂಗಳೂರಿನಲ್ಲೇ ನಡೆಯಲಿವೆ ಐಪಿಎಲ್ ಪಂದ್ಯಾವಳಿಗಳು : ಡಿ.ಕೆ.ಶಿವಕುಮಾರ್ ಭರವಸೆ
