Saturday, December 27, 2025
Homeಬೆಂಗಳೂರುಬೆಂಗಳೂರಲ್ಲಿ ಕಾಮುಕರ ಕಾಟ : ಕಿರುತೆರೆ ನಟಿಗೆ ಪುಂಡರಿಂದ ಕಿರುಕುಳ

ಬೆಂಗಳೂರಲ್ಲಿ ಕಾಮುಕರ ಕಾಟ : ಕಿರುತೆರೆ ನಟಿಗೆ ಪುಂಡರಿಂದ ಕಿರುಕುಳ

Sexual harassment in Bengaluru: Television actress harassed

ಬೆಂಗಳೂರು,ಡಿ.27- ನಗರದಲ್ಲಿ ಒಂಟಿಯಾಗಿ ಹೆಣ್ಣು ಮಕ್ಕಳು ಓಡಾಡುವುದೇ ಕಷ್ಟವಾಗಿದೆ. ತಡರಾತ್ರಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಕಿರುತೆರೆ ನಟಿಯನ್ನು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಹೋಗಿ ಕಿರುಕುಳ ನೀಡಿ ಪರಾರಿಯಾಗಿರುವ ಪುಂಡರಿಗಾಗಿ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಡಿ.24 ರಂದು ಕಿರುತೆರೆ ನಟಿಯೊಬ್ಬರು ಕೆಲಸ ಮುಗಿಸಿಕೊಂಡು ಮಧ್ಯರಾತ್ರಿ 12 ಗಂಟೆ ಸುಮಾರಿನಲ್ಲಿ ಮೈಕೋಲೇಔಟ್‌ನ ತನ್ನ ಮನೆಗೆ ಹೋಗುತ್ತಿದ್ದರು.ಮಾರ್ಗಮಧ್ಯೆ ಬಿಟಿಎಂ ಲೇಔಟ್‌ನಲ್ಲಿ ಮೂವರು ಪುಂಡರು ಹೆಲೆಟ್‌ ಧರಿಸದೆ ಒಂದೇ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಾ ಕಿರುತೆರೆ ನಟಿಯ ಸ್ಕೂಟಿಯನ್ನು ಹಿಂಬಾಲಿಸಿಕೊಂಡು ಹೋಗಿ ಕಿರುಕುಳ ನೀಡಿದ್ದಾರೆ.

ಸುಮಾರು 2ಕಿಮೀ ವರೆಗೂ ಮಾರ್ಗದುದ್ದಕ್ಕೂ ಆ ನಟಿಯನ್ನು ಹಿಂಬಾಲಿಸಿಕೊಂಡು ಹೋಗಿ ಕಿರುಕುಳ ನೀಡುತ್ತಿದ್ದ ಪುಂಡರ ವರ್ತನೆಯನ್ನು ಇವರ ಹಿಂದೆ ಕಾರು ಚಲಾಯಿಸಿಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬರು ಗಮನಿಸಿ ವಿಡಿಯೋ ಮಾಡಿಕೊಂಡು ಅದನ್ನು ಪೊಲೀಸರಿಗೆ ಎಕ್‌್ಸನಲ್ಲಿ ಟ್ಯಾಗ್‌ ಮಾಡಿದ್ದಾರೆ.

ಪೊಲೀಸರು ಆ ವಿಡಿಯೋ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಆ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಆಧರಿಸಿ ಪುಂಡರ ಬೈಕ್‌ ನಂಬರ್‌ ಪತ್ತೆ ಹಚ್ಚಿ ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.ಇಂತಹದೇ ಮತ್ತೊಂದು ಘಟನೆ ನಡೆದಿದ್ದು, ಮೆಟ್ರೋದಲ್ಲಿ ಯುವತಿಗೆ ಕಿರುಕುಳ ನೀಡಿದ ಯುವಕನಿಗೆ ಉಪ್ಪಾರಪೇಟೆ ಠಾಣೆ ಪೊಲೀಸರು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.

RELATED ARTICLES

Latest News