ಬೆಂಗಳೂರು,ಡಿ.9- ನಗರದಲ್ಲಿ ಒಂದೇ ಕುಟುಂಬದ ಮೂವರ ಸಾವು ಹೇಗಾಗಿದೆ ಎಂಬುವುದು ಇನ್ನೂ ನಿಗೂಢವಾಗಿದೆ. ಎಸ್‌ಜಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಕೋರಮಂಗಲ ಸಮೀಪದ ತಾವರೆಕೆರೆಯ ನಿವಾಸಿಗಳಾದ ಸುಧಾ (35), ಇವರ ಮಗ ಮೌನೀಶ್ (14) ಹಾಗೂ ಅಜ್ಜಿ ಮಾದಮ (60) ಅವರು ಏನನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದು ಸದ್ಯಕ್ಕೆ ತಿಳಿದು ಬಂದಿಲ್ಲ.
ಮೇಲ್ನೋಟಕ್ಕೆ ವಿಷ ಸೇವಿಸಿ ಆತಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಆದರೆ ಮನೆಯಲ್ಲಿ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ.ಪತಿಯಿಂದ ದೂರವಾಗಿದ್ದ ಸುಧಾ ಅವರು ಮಗ ಹಾಗೂ ತಾಯಿ ಜೊತೆ ವಾಸಿಸುತ್ತಿದ್ದರು. ಜೀವನೋಪಾಯಕ್ಕಾಗಿ ಬಿರಿಯಾನಿ ಹೋಟೇಲ್ ನಡೆಸುತ್ತಿದ್ದ ಅವರು ವ್ಯಾಪಾರದಲ್ಲಿ ನಷ್ಟ ಉಂಟಾಗಿದ್ದರಿಂದ ಹೋಟೇಲ್ ಮುಚ್ಚಿ ನಂತರ ಹಾಲು ಹಾಗೂ ಚಿಪ್‌್ಸ ವ್ಯಾಪಾರ ಮಾಡುತ್ತಿದ್ದರು. ಜೊತೆಗೆ ಮನೆಗೆಲಸಕ್ಕೆ ಹೋಗುತ್ತಿದ್ದರು. ಆದರೆ ಆರ್ಥಿಕ ಸಮಸ್ಯೆ ಸುಧಾರಿಸದೇ ಸಾಲ ಮಾಡಿಕೊಂಡಿದ್ದಾರೆ. ಸಾಲ ತೀರಿಸಲು ಸಾಧ್ಯವಾಗದೆ ನೊಂದಿದ್ದ ಸುಧಾ ಅವರು ಈ ನಿರ್ಧಾರಕ್ಕೆ ಬಂದರೇ ಎಂಬ ಶಂಕೆ ವ್ಯಕ್ತವಾಗಿದೆ.
ಆತಹತ್ಯೆ ಹಿಂದಿನ ದಿನ ತಮಿಳುನಾಡಿನ ಧರ್ಮಪುರಿ ದೇವಸ್ಥಾನಕ್ಕೆ ಹೋಗಿದ್ದ ಈ ಮೂವರು ಭಾನುವಾರ ರಾತ್ರಿ ಮನೆಗೆ ಮರಳಿದ್ದರು.ದೇವಸ್ಥಾನದಿಂದ ತಂದಂತಹ ಪ್ರಸಾದದಲ್ಲಿ ಯಾವುದೋ ವಿಷಕಾರಿ ವಸ್ತು ಬೆರಸಿ ಮಗನಿಗೆ ಕೊಟ್ಟು ಆತ ಮೃತಪಟ್ಟ ನಂತರ ತಾಯಿ ಹಾಗೂ ಅಜ್ಜಿ ಅದನ್ನು ಸೇವಿಸಿ ಆತಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಏಕೆಂದರೆ ಮನೆಯಲ್ಲಿ ಅಡಿಗೆ ಮಾಡಿಲ್ಲ .ಸ್ಥಳದಲ್ಲಿ ಯಾವುದೇ ವಿಷದ ಬಾಟಲಿಗಳು ಪತ್ತೆಯಾಗಿಲ್ಲ. ಹಾಗಾಗಿ ಈ ಮೂವರ ಸಾವು ಹೇಗಾಗಿದೆ ಎಂಬುವುದು ನಿಗೂಢವಾಗಿಯೇ ಉಳಿದಿದೆ.ಮರಣೋತ್ತರ ಪರೀಕ್ಷೆ ಮಾಡಿರುವ ವೈದ್ಯರೂ ಸಹ ಸದ್ಯಕ್ಕೆ ಸಾವು ಹೇಗಾಗಿದೆ ಎಂಬುವುದು ಪ್ರಾಥಮಿಕವಾಗಿಯೂ ತಿಳಿಸಿಲ್ಲ.
ಈ ಮೂವರ ದೇಹದ ಕೆಲವು ಭಾಗಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಅದರ ವರದಿ ಬಂದ ನಂತರವಷ್ಟೇ ಇವರು ಏನನ್ನು ಸೇವಿಸಿ ಆತಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದು ಗೊತ್ತಾಗಲಿದೆ.ಈ ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
