ಬೆಂಗಳೂರು, ಜನವರಿ 12, 2026: ವಿಕೇರ್ ಭಾರತದ ಮೊದಲ ಒಂದೇ ದಿನದ ಫೇಷಿಯಲ್ ಆರ್ಕಿಟೆಕ್ಚರ್ ಹೊಂದಿರುವ ಬೆಂಗಳೂರು ಸೆಂಟರ್ ಆಫ್ ಎಕ್ಸೆಲೆನ್ಸ್ ಪ್ರಾರಂಭಿಸಿದ್ದು ಇದು ಭಾರತದಲ್ಲಿ ಸುಧಾರಿತ ಚರ್ಮ ಮತ್ತು ಸೌಂದರ್ಯದ ಆರೈಕೆಯಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಈ ಹೊಸ ಕೇಂದ್ರವನ್ನು ಭಾರತಕ್ಕೆ ಅಂತಾರಾಷ್ಟ್ರೀಯ ಚರ್ಮದ ಚಿಕಿತ್ಸೆಗಳನ್ನು ತರಲು ವಿನ್ಯಾಸಗೊಳಿಸಿದ್ದು ಜಾಗತಿಕ ತಂತ್ರಜ್ಞಾನವನ್ನು ವೈಯಕ್ತಿಕಗೊಳಿಸಿದ ಚರ್ಮದ ಆರೈಕೆಯೊಂದಿಗೆ ಸಂಯೋಜಿಸುತ್ತದೆ.
ಹೈದರಾಬಾದ್ ಮತ್ತು ಬೆಂಗಳೂರುಗಳಲ್ಲಿ ದೃಢೀಕರಿಸಿದ ವಿಸ್ತರಣೆಯ ಯೋಜನೆಗಳನ್ನು ಹೊಂದಿರುವ ವಿಕೇರ್ ದಕ್ಷಿಣ ಭಾರತದಾದ್ಯಂತ ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ಉಪಸ್ಥಿತಿ ವಿಸ್ತರಿಸಲಿದ್ದು ಅಂತಾರಾಷ್ಟ್ರೀಯ ಶ್ರೇಷ್ಠತೆಯ ಮಾನದಂಡಗಳಿಗೆ ಅನುಗುಣವಾದ ಸುಧಾರಿತ ಸೌಂದರ್ಯ ಆರೈಕೆಯನ್ನು ನೀಡುತ್ತದೆ.
ಬೆಂಗಳೂರು ಕೇಂದ್ರವನ್ನು ಖ್ಯಾತ ನಟಿ ಮತ್ತು ರೂಪದರ್ಶಿ ಪ್ರಿಯಾ ಆನಂದ್ ಮುಖ್ಯ ಅತಿಥಿಯಾಗಿದ್ದು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮುಂಚೂಣಿಯ ವೈದ್ಯರು, ಆರೋಗ್ಯಸೇವಾ ವೃತ್ತಿಪರರು, ಉದ್ಯಮದ ಪರಿಣಿತರು ಮತ್ತು ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದು ಇದು ವೈದ್ಯಕೀಯ ಮಾರ್ಗದರ್ಶನದ, ನೈತಿಕ ಸೌಂದರ್ಯ ಪರಿಹಾರಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ತೋರುತ್ತದೆ.
ಬೆಂಗಳೂರಿನ ಸದಾಶಿವನಗರದ ಎಸ್ಟೀಮ್ ಪ್ಲಾಜಾದಲ್ಲಿರುವ ವಿಕೇರ್ ಸೆಂಟರ್ ಆಫ್ ಎಕ್ಸೆಲೆನ್ಸ್ ವಿಶ್ವಮಟ್ಟದ, ಕೊರಿಯಾದಿಂದ ಸ್ಫೂರ್ತಿ ಪಡೆದ ವೈಯಕ್ತಿಕ ಚರ್ಮದ ಗುರಿಗಳನ್ನು ಆಳವಾಗಿ ಅರ್ಥೈಸಿಕೊಂಡ ಸೌಂದರ್ಯ ಆರೈಕೆಯನ್ನು ನೀಡುತ್ತದೆ.
ಈ ಕೇಂದ್ರವು ಭಾರತದ ಮೊದಲ ಒಂದೇ ದಿನದ ಫೇಷಿಯಲ್ ಆರ್ಕಿಟೆಕ್ಚರ್ ಪರಿಚಯಿಸಿದ್ದು ಇದು ಒಂದು ದಿನದ, ಗ್ಲಾಸ್-ಸ್ಕಿನ್ ಕೇಂದ್ರಿತ ಚಿಕಿತ್ಸೆಯಾಗಿದ್ದು ಇದು ಮೂರು ಆಯಾಮಗಳ ವಿಧಾನದೊಂದಿಗೆ ಏಳು ಸುಧಾರಿತ ಲೇಸರ್ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದು 1ನೇ ದಿನದಿಂದಲೇ ಎದ್ದು ಕಾಣುವ ಫಲಿತಾಂಶಗಳನ್ನು ನೀಡುತ್ತವೆ ಮತ್ತು 90 ದಿನಗಳಲ್ಲಿ ಸುಧಾರಣೆ ಕಾಣುತ್ತದೆ.
ಈ ತತ್ವವನ್ನು ಭಾರತದ ಮೊದಲ ಮಹಿಳಾ ಟ್ರಿಕಾಲಜಿಸ್ಟ್, ದೂರದೃಷ್ಟಿಯ ಉದ್ಯಮಿ ಮತ್ತು ವೆಲ್ ನೆಸ್ ನಾಯಕಿ ವಿಕೇರ್ ಸಮೂಹದ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಇ.ಕರೋಲಿನ್ ಪ್ರಬಾ ಅವರ ತತ್ವದ ಅಡಿಯಲ್ಲಿ ನಿರ್ವಹಿಸಲಾಗುತ್ತಿದ್ದು ಅವರು ಭಾರತದಾದ್ಯಂತ 80+ ಕ್ಲಿನಿಕ್ ಗಳ ಜಾಲವನ್ನು ನಿರ್ಮಿಸಿ ನಿರ್ವಹಿಸುತ್ತಿದ್ದಾರೆ.
ಅವರೊಂದಿಗೆ ವಿಕೇರ್ ಗ್ರೂಪ್ ಸಿಇಒ ಮುಕುಂದನ್ ಸತ್ಯನಾರಾಯಣನ್ ಇದ್ದಾರೆ. ಟ್ರಿಕಾಲಜಿ, ಕಾಸ್ಮೆಟಿಕ್ ಸೈನ್ಸಸ್, ನ್ಯೂಟ್ರಾಸ್ಯುಟಿಕಲ್ಸ್ ಮತ್ತು ವೆಲ್ ನೆಸ್ ಉದ್ಯಮದಲ್ಲಿ 22 ವರ್ಷಗಳ ಗಮನಾರ್ಹ ನಾಯಕತ್ವ ಹೊಂದಿರುವ ಶ್ರೀ ಮುಕುಂದನ್ ಸತ್ಯನಾರಾಯಣನ್ ಅವರನ್ನು ಸಾಂಪ್ರದಾಯಿಕ ಚಿಕಿತ್ಸಾ ವಿಜ್ಞಾನಗಳನ್ನು ಸಂಶೋಧನೆ-ಪ್ರೇರಿತ ಆವಿಷ್ಕಾರದೊಂದಿಗೆ ಸಂಯೋಜಿಸಿದ್ದಕ್ಕೆ ಗುರುತಿಸಲಾಗುತ್ತದೆ.
ಈ ಪ್ರಾರಂಭ ಕುರಿತು ವಿಕೇರ್ ಸಿಇಒ, “ಜಾಗತಿಕ ಸೌಂದರ್ಯದ ಮಾನದಂಡಗಳು ವಿಕಾಸಗೊಳ್ಳುತ್ತಿವೆ ಹಾಗೆಯೇ ನಾವೂ ಕೂಡಾ. ಸೆಂಟರ್ ಆಫ್ ಎಕ್ಸೆಲೆನ್ಸ್ ಮೂಲಕ ನಮ್ಮ ಉದ್ದೇಶ ಮೇಲ್ಮೈ ಮಟ್ಟದ ಚಿಕಿತ್ಸೆಗಳಿಂದ ಆಚೆಗೆ ಮುನ್ನಡೆದು ರಚನಾತ್ಮಕ, ಬಹು ಪದರಗಳ ವಿಧಾನದ ಮೂಲಕ ನಿರ್ವಹಿಸುವುದಾಗಿದ್ದು ಆಳವಾದ ವೈಯಕ್ತಿಕತೆಯಲ್ಲಿ ಉಳಿದು ಜಾಗತಿಕ ಸೌಂದರ್ಯದ ಶ್ರೇಷ್ಠತೆಗೆ ಪೂರಕವಾಗಿರುವುದಾಗಿದೆ” ಎಂದರು.
ಈ ವಿಧಾನದ ಕುರಿತು ವಿಕೇರ್ ಸಮೂಹದ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಇ. ಕರೋಲಿನ್ ಪ್ರಬಾ, “ನಾವು ಪರಿಚಯಿಸುವ ಪ್ರತಿ ತಂತ್ರಜ್ಞಾನವನ್ನೂ ಜಾಗತಿಕ ಕ್ಲಿನಿಕಲ್ ಮೌಲ್ಯಮಾಪನ, ಎಫ್.ಡಿ.ಎ. ಅನುಮೋದನೆ ಮತ್ತು ಪೂರ್ವಸಾಧಿತ ಫಲಿತಾಂಶಗಳ ಮೂಲಕ ಎಚ್ಚರಿಕೆಯಿಂದ ಆಯ್ಕೆ ಮಾಡಲಾಗುತ್ತದೆ” ಎಂದರು.
ವಿಶ್ವಮಟ್ಟದ ಸೌಂದರ್ಯ ತಂತ್ರಜ್ಞಾನಗಳು
ವಿಕೇರ್ ಸೆಂಟರ್ ಆಫ್ ಎಕ್ಸೆಲೆನ್ಸ್ ವಿಶ್ವದ ಅತ್ಯಂತ ಸುಧಾರಿತ ಎಫ್.ಡಿ.ಎ. ಅನುಮೋದಿತ ಮತ್ತು ಸಿಇ-ಪ್ರಮಾಣೀಕೃತ ಸೌಂದರ್ಯ ಚಿಕಿತ್ಸೆಗಳನ್ನು ಹೊಂದಿದ್ದು ಅದರಲ್ಲಿ:
ಐಸೆಮೆಕೊ 3ಡಿ ಡಿ9 ಎಐ ಸ್ಕಿನ್ ಅನಲೈಸರ್ ಭಾರತದ ಮೊದಲ ಎಐ-ಪವರ್ಸ್ 3ಡಿ ಸ್ಕಿನ್ ಅನಾಲಿಸಿಸ್ ಪ್ಲಾಟ್ ಫಾರಂ ಆಗಿದ್ದು ಬಹು ಪದರಗಳ ಇಮೇಜಿಂಗ್, ಪ್ರಿಡಿಕ್ಟಿವ್ ಅನಾಲಿಸಿಸ್ ಮತ್ತು ಭವಿಷ್ಯದ ಚರ್ಮದ ಸಿಮುಲೇಷನ್ ನೀಡುತ್ತದೆ.
ಕೆ-ಎಕ್ಸೆಲೆನ್ಸ್ ಸ್ಕಿನ್ ಅನಲೈಸರ್ (ಕೊರಿಯಾ)
ಅತ್ಯಂತ ನಿಖರತೆಯಿಂದ ರಚನೆ, ರಂಧ್ರಗಳು, ಪಿಗ್ಮೆಂಟೇಷನ್ ಮತ್ತು ಬ್ಯಾರಿಯರ್ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ವಿನ್ಯಾಗೊಳಿಸಲಾಗಿದೆ.
ಡರ್ಮೊಸ್ಕಾನ್ ಡಿ.ಎಸ್.ಎಂ.-4 ಕಲರಿಮೀಟರ್ (ಜರ್ಮನಿ)
ನಾಸಾ ಗುಣಮಟ್ಟದ ಸ್ಪೆಕ್ಟ್ರೊಫೊಟೊಮೆಟ್ರಿಕ್ ಸಿಸ್ಟಂ ಆಗಿದ್ದು ಇದನ್ನು ಅಳೆಯಬಲ್ಲ, ಡೇಟಾ ಬೆಂಬಲಿತ ಸೌಂದರ್ಯದ ಫಲಿತಾಂಶಗಳಿಗೆ ಜಾಗತಿಕ ಕ್ಲಿನಿಕಲ್ ಟ್ರಯಲ್ ಗಳಲ್ಲಿ ಬಳಸಲಾಗಿದೆ.
ಇನ್ಮೋಡ್ ನಿಂದ ಟ್ರೈಟನ್ ಪ್ಲಾಟ್ ಫಾರಂ
ನಿಖರ, ನಿಯಂತ್ರಿಸಬಲ್ಲ ಶಕ್ತಿ ಆಧರಿತ ಪರಿಹಾರಗಳು ಸುಧಾರಿತ ಸಬ್ ಡರ್ಮಲ್ ರಿಮಾಡೆಲಿಂಗ್ ಮತ್ತು ಕಂಟ್ಯೂರಿಂಗ್ ಅನ್ನು ಅಸಾಧಾರಣ ಸುರಕ್ಷತೆಯೊಂದಿಗೆ ನಿರ್ವಹಿಸುತ್ತದೆ.
ಆಲ್ಮಾ ಹಾರ್ಮೊನಿ ಎಕ್ಸ್.ಎಲ್. ಪ್ರೊ
ಫ್ರಾಕ್ಷನಲ್ ರಿಸರ್ಫೇಸಿಂಗ್, ಮೊಡವೆ ಗುರುತು ನಿವಾರಣೆ, ರಂಧ್ರ ಸರಿಪಡಿಸುವಿಕೆ ಮತ್ತು ಒಟ್ಟಾರೆ ಚರ್ಮದ ರಚನೆ ಉತ್ತಮಪಡಿಸಲು ವೈವಿಧ್ಯಮಯ ಪ್ಲಾಟ್ ಫಾರಂ.
ಜೀಸಿಸ್ ನಿಂದ ಡೆನ್ಸಿಟಿ ಆರ್.ಎಫ್.
ಆಳವಾದ ಕೊಲಾಜೆನ್ ಪರಿಷ್ಕರಣೆಯನ್ನು ಉತ್ತೇಜಿಸುವ ರೇಡಿಯೋಫ್ರೀಕ್ವೆನ್ಸಿ ಸಿಸ್ಟಂ, ಕಾಣುವಂತೆ ಬಿಗಿ ಮತ್ತು ದೃಢಗೊಳಿಸುತ್ತದೆ.
ಹಾಲಿವುಡ್ ಸ್ಪೆಕ್ಟ್ರಾ ಬೈ ಲುಟ್ರೋನಿಕ್
ಪಿಗ್ಮೆಂಟೇಷನ್ ಸರಿಪಡಿಸಲು, ಚರ್ಮ ಹೊಳೆಯುವಂತೆ ಮಾಡಲು ಮತ್ತು ಟೋನ್ ಸಮಾನತೆ ತರಲು ಉನ್ನತ ಗುಣಮಟ್ಟದ ಕ್ಯೂ-ಸ್ವಿಚ್ಡ್ ಲೇಸರ್.
ಅಲ್ಟ್ರಾಸೆಲ್ ಕ್ಯೂ+ ಜೀಸಿಸ್
ಕೊರಿಯಾದಲ್ಲಿ ಅಭಿವೃದ್ಧಿಯಾದ ಎಚ್.ಐ.ಎಫ್.ಯು. ಸಿಸ್ಟಂ ಚರ್ಮದ ಪದರಗಳ ತಳಹದಿಯ ರಚನೆಯಲ್ಲಿ ಶಸ್ತ್ರಚಿಕಿತ್ಸೆಯಿಲ್ಲದೆ ಉತ್ತಮಪಡಿಸುವ ಮತ್ತು ಬಿಗಿಗೊಳಿಸುವ ವ್ಯವಸ್ಥೆಯಾಗಿದೆ.
ಎನರ್ಜೆಟ್ ಬೈ ಪರ್ಫ್ ಆಕ್ಷನ್
ಹೆಚ್ಚಿನ ಒತ್ತಡದ ಆಮ್ಲಜನಕ ಬಳಸಿ ಹೈಯಾಲ್ಯೂರೊನಿಕ್ ಆಮ್ಲ ಮತ್ತು ಕೊಲಾಜೆನ್ ಸ್ಟಿಮ್ಯುಲೇಟರ್ ಗಳನ್ನು ಬಳಸಿ ಬಯೋ-ಆಕ್ಟಿವ್ ಗಳನ್ನು ಸೇರಿಸುವ ಸೂಜಿ ಮುಕ್ತ ಟ್ರಾನ್ಸ್ ಡರ್ಮಲ್ ಡೆಲಿವರಿ ಸಿಸ್ಟಂ
ಸೆಂಟರ್ ಆಫ್ ಎಕ್ಸೆಲೆನ್ಸ್ ಪ್ರಾರಂಭದೊಂದಿಗೆ ವಿಕೇರ್ ಜಾಗತಿಕ ಸೌಂದರ್ಯ ಕ್ಷೇತ್ರದಲ್ಲಿ ಭಾರತದ ಉಪಸ್ಥಿತಿ ಸದೃಢಗೊಳಿಸಿದ್ದು ಜಾಣ್ಮೆಯ, ಕಸ್ಟಮೈಸ್ಡ್ ಮತ್ತು ಫಲಿತಾಂಶಗಳ –ಪ್ರೇರಿತ ಸ್ಕಿನ್ ಆರ್ಕಿಟೆಕ್ಚರ್ ನಲ್ಲಿ ಹೊಸ ಮಾನದಂಡ ನಿಗದಿಪಡಿಸಿದೆ.
ವಿಕೇರ್ ಸೆಂಟರ್ ಆಫ್ ಎಕ್ಸೆಲೆನ್ಸ್ ಆಧುನಿಕ ಸೌಂದರ್ಯದ ಭವಿಷ್ಯವನ್ನು ಪ್ರತಿನಿಧಿಸುತ್ತದೆ- ಇಂದಿನ ವವಿಶ್ವಕ್ಕೆ ಸೃಷ್ಟಿಸಲಾದ ಆಲೋಚನಾಯುಕ್ತವಾಗಿ ವಿನ್ಯಾಸಗೊಳಿಸಿದ ಪ್ರಯಾಣ.
ವಿಕೇರ್ ಕುರಿತು
ವಿಕೇರ್ ಭಾರತದ ಮುಂಚೂಣಿಯ ಸೌಂದರ್ಯ ಮತ್ತು ಟ್ರಿಕಾಲಜಿ ಬ್ರಾಂಡ್ ಆಗಿದ್ದು ವೈದ್ಯಕೀಯ ಪರಿಣಿತಿ, ಸುಧಾರಿತ ಅಂತಾರಾಷ್ಟ್ರೀಯ ತಂತ್ರಜ್ಞಾನಗಳು ಮತ್ತು ವೈಯಕ್ತಿಕಗೊಳಿಸಿದ ಆರೈಕೆಯನ್ನು ಚರ್ಮ, ಕೂದಲು ಮತ್ತು ಸೌಂದರ್ಯ ಚಿಕಿತ್ಸೆಗಳಿಗೆ ನೀಡುತ್ತದೆ.
