Friday, November 22, 2024
Homeಮನರಂಜನೆಜೆಟ್ ಲ್ಯಾಗ್ ಪಾರ್ಟಿ ಪ್ರಕರಣ : ನಟ ದರ್ಶನ್ ಸೇರಿ ಹಲವರಿಗೆ ನೋಟಿಸ್

ಜೆಟ್ ಲ್ಯಾಗ್ ಪಾರ್ಟಿ ಪ್ರಕರಣ : ನಟ ದರ್ಶನ್ ಸೇರಿ ಹಲವರಿಗೆ ನೋಟಿಸ್

ಬೆಂಗಳೂರು, ಜ.8- ಕಾಟೇರ ಚಿತ್ರದ ಯಶಸ್ಸಿನ ಸಂಭ್ರಮಾಚರಣೆ ವೇಳೆ ನಿಯಮ ಉಲ್ಲಂಘಿಸಿ ತಡರಾತ್ರಿಯವರೆಗೂ ಪಾರ್ಟಿ ಮಾಡಿದ್ದರೆಂದು ಹೇಳಲಾದ ಘಟನೆಗೆ ಸಂಬಂಧಪಟ್ಟಂತೆ ನಟ ದರ್ಶನ್ ಸೇರಿದಂತೆ ಇತರರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಕನ್ನಡದ ಕಾಟೇರ ಚಿತ್ರ 100 ಕೋಟಿ ಫ್ಯಾನ್‍ಕ್ಲಬ್‍ಗೆ ಸೇರಿದ ನಡುವೆ ಚಿತ್ರ ತಂಡ ಡಾ.ರಾಜ್‍ಕುಮಾರ್ ರಸ್ತೆಯಲ್ಲಿರುವ ಓರಿಯನ್ ಮಾಲ್ ಸಮೀಪದ ಜೆಟ್‍ಲಾಲ್ ಪಬ್‍ನಲ್ಲಿ ಪಾರ್ಟಿಯನ್ನು ಏರ್ಪಡಿಸಿದ್ದರು. ಮುಂಜಾನೆ 5.15 ವರೆಗೂ ಹಲವು ನಟ-ನಟಿಯರು, ಚಿತ್ರತಂಡದ ಸದಸ್ಯರು ಸೇರಿದಂತೆ ಹಲವಾರು ಗಣ್ಯರು ಪಬ್‍ನಲ್ಲಿದ್ದರು.

ಯಶ್ ಕಟೌಟ್‍ ದುರಂತದಲ್ಲಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಣೆ

1 ಗಂಟೆಯವರೆಗೂ ಪಬ್ ಕಾರ್ಯ ನಿರ್ವಹಿಸಲು ಅವಕಾಶವಿತ್ತು. ಆದರೆ ನಿಯಮ ಉಲ್ಲಂಘಿಸಿ ಬೆಳಗಿನ ಜಾವದವರೆಗೂ ಪಾರ್ಟಿ ಮಾಡಿದ್ದಾರೆಂಬ ಮಾಹಿತಿ ತಿಳಿಯುತ್ತಿದ್ದಂತೆ ಅಲರ್ಟ್ ಆದ ಸುಬ್ರಹ್ಮಣ್ಯ ನಗರ ಪೊಲೀಸರು ಪಬ್‍ಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥಾಪಕರು ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದರು.

ಪಾರ್ಟಿಯಲ್ಲಿ ತಡರಾತ್ರಿಯವರೆಗೂ ಹಾಜರಿದ್ದ ಸೆಲೆಬ್ರೆಟಿಗಳನ್ನು ಪ್ರಕರಣದಲ್ಲಿ ಮರೆಮಾಚಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ನಡುವೆ ಡಿಸಿಪಿ ಅವರು ಖುದ್ದಾಗಿ ತನಿಖೆ ನಡೆಸಿದ ಸಂದರ್ಭದಲ್ಲಿ ಪಾರ್ಟಿಯಲ್ಲಿ ಹಾಜರಿದ್ದ ನಟ ದರ್ಶನ್, ನಿರ್ಮಾಪಕರಾದ ರಾಕ್‍ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ಪ್ರಜ್ವಲ್ ದೇವರಾಜ್, ನಿರ್ದೇಶಕ ತರುಣ್ ಸುೀಧಿರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ಪ್ರಸ್ತುತ ಚಿತ್ರತಂಡ ದುಬೈನಲ್ಲಿರುವ ಕಾರಣ ಅವರ ನಿವಾಸಕ್ಕೆ ನೋಟಿಸ್ ಅನ್ನು ನೀಡಲಾಗಿದ್ದು, ಅವರು ಮರಳಿದ ನಂತರ ಅವರನ್ನು ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

RELATED ARTICLES

Latest News