ಬೆಂಗಳೂರು,ನ.14- ಖಾಸಗಿ ಕಂಪನಿಯೊಂದರ ಅಕೌಂಟೆಂಟ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸರೋಡ್ ನಿವಾಸಿ ಕಾರ್ತಿಕೇಯನ್(30) ಆತಹತ್ಯೆಗೆ ಶರಣಾದ ಯುವಕ.
ಪೋಷಕರೊಂದಿಗೆ ವಾಸವಾಗಿದ್ದ ಕಾರ್ತಿಕೇಯನ್ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿದ್ದರು. ಅವಿವಾಹಿತನಾಗಿದ್ದ ಈತ ಜೀವನದಲ್ಲಿ ಜಿಗುಪ್ಸೆಗೊಂಡಿದ್ದು, ಕೆಲ ದಿನಗಳಿಂದ ಯಾರೊಂದಿಗೂ ಬೆರೆಯುತ್ತಿರಲಿಲ್ಲ.
ಈ ನಡುವೆ ರಾತ್ರಿ ಮನೆಯ ಕೊಠಡಿಯಲ್ಲಿ ಅವರು ಫ್ಯಾನಿಗೆ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದು, ಇದು ಪೋಷಕರ ಗಮನಕ್ಕೆ ಬಂದಿಲ್ಲ. ಕೆಲ ಸಮಯದ ಬಳಿಕ ರೂಮ್ ಬಳಿ ಹೋದಾಗ ಮಗ ಆತಹತ್ಯೆ ಮಾಡಿಕೊಂಡಿರುವುದು ಕಂಡು ಗೋಲಾಡಿದ್ದಾರೆ. ಸುದ್ದಿ ತಿಳಿದು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.