Tuesday, July 2, 2024
Homeಬೆಂಗಳೂರುಫಾರ್ಮ್‌ ಹೌಸ್‌ನಲ್ಲಿ ರೇವ್ ಪಾರ್ಟಿ : ತೆಲುಗು ನಟಿ ಸೇರಿ 86 ಮಂದಿ ಡ್ರಗ್ಸ್ ಸೇವಿಸಿರುವುದು...

ಫಾರ್ಮ್‌ ಹೌಸ್‌ನಲ್ಲಿ ರೇವ್ ಪಾರ್ಟಿ : ತೆಲುಗು ನಟಿ ಸೇರಿ 86 ಮಂದಿ ಡ್ರಗ್ಸ್ ಸೇವಿಸಿರುವುದು ದೃಢ

ಬೆಂಗಳೂರು,ಮೇ 23-ನಗರದ ಹೊರವಲಯದ ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಫಾರ್ಮ್‌ ಹೌಸ್‌ನಲ್ಲಿ ನಡೆದಿದ್ದ ರೇವು ಪಾರ್ಟಿಯಲ್ಲಿ ಭಾಗವಹಿಸಿದ್ದ ಇಬ್ಬರು ತೆಲುಗು ನಟಿ ಸೇರಿದಂತೆ 86 ಮಂದಿ ಮಾದಕವಸ್ತು ಸೇವಿಸಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ.ರೇವು ಪಾರ್ಟಿಯಲ್ಲಿ 103 ಮಂದಿ ಪಾಲ್ಗೊಂಡಿದ್ದ 73 ಮಂದಿ ಪುರುಷರ ಪೈಕಿ 59 ಮಂದಿ ಹಾಗೂ 30 ಯುವತಿಯರ ಪೈಕಿ 27 ಮಂದಿ ಮಾದಕವಸ್ತು ಸೇವಿಸಿರುವುದು ಗೊತ್ತಾಗಿದೆ.

ಅಂದಿನ ಪಾರ್ಟಿಯಲ್ಲಿ ಇಬ್ಬರು ತೆಲುಗು ನಟಿಯರು, ಕಿರುತೆರೆ ನಟಿಯರು, ಸಾ್ಟ್‌ವೇರ್‌ ಎಂಜಿನಿಯರ್‌ಗಳು ಸೇರಿದಂತೆ 103 ಮಂದಿ ಯುವಕ-ಯುವತಿಯರು ಪಾಲ್ಗೊಂಡಿದ್ದು, ಅವರೆಲ್ಲರ ರಕ್ತದ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಅದರ ವರದಿಬಂದಿದ್ದು, 86 ಮಂದಿ ಮಾದಕವಸ್ತು ತೆಗೆದುಕೊಂಡಿರುವುದು ಸಾಬೀತಾಗಿದೆ.

ರೇವು ಪಾರ್ಟಿಯಲ್ಲಿ ದೊಡ್ಡ ಮಟ್ಟದ ಡ್ರಗ್ಸ್ ಬಳಕೆಯಾಗಿರುವುದು ತನಿಖೆಯಿಂದ ದೃಢಪಟ್ಟಿದ್ದು, ಸಿಸಿಬಿ ಪೊಲೀಸರು ಡ್ರಗ್‌ ಸೇವನೆ ಮಾಡಿರುವ 86 ಮಂದಿಗೂ ನೋಟಿಸ್‌ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಉದ್ಯಮಿಯೊಬ್ಬರ ಒಡೆತನದಲ್ಲಿರುವ ಜಿ.ಆರ್‌.ಫಾರ್ಮಹೌಸ್‌ನಲ್ಲಿ ಹೈದರಾಬಾದ್‌ ಮೂಲದ ವಾಸು ಎಂಬಾತ ತನ್ನ ಹುಟ್ಟುಹಬ್ಬದ ನಿಮಿತ್ತ ಭಾನುವಾರ ಸಂಜೆ 5 ಗಂಟೆಯಿಂದ ಅಂದರೆ ಸನ್‌ಸೆಟ್‌ ಟೂ ಸನ್‌ ರೈಸ್‌ ಪಾರ್ಟಿ ಆಯೋಜಿಸಿದ್ದರು.ಅವಽ ಮುಗಿದ ಬಳಿಕವೂ ಅಂದರೆ ಬೆಳಗಿನ ಜಾವ 2 ಗಂಟೆಯಾದರೂ ಪಾರ್ಟಿ ನಡೆಸುತ್ತಿದ್ದರು. ಈ ಬಗ್ಗೆ ಸಿಸಿಬಿ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಾರ್ಮ್‌ಹೌಸ್‌ ಮೇಲೆ ದಾಳಿ ಮಾಡಿದಾಗ ಮೂವರು ಡ್ರಗ್‌ ಪೆಡ್ಲರ್‌ಗಳು ಸಿಕ್ಕಿಬಿದ್ದಿದ್ದಾರೆ.

ಆ ಸಂದರ್ಭದಲ್ಲಿ 15.56 ಗ್ರಾಂ ಎಂಡಿಎಂಎ ಡ್ರಗ್ಸ್ , 6.2 ಗ್ರಾಂ ಕೊಕೇನ್‌, 6 ಗ್ರಾಂ ಹೈಡ್ರೋ ಗಾಂಜಾ, 5 ಮೊಬೈಲ್‌ ಪೋನ್‌ ಹಾಗೂ 2 ವಾಹನಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು ಒಟ್ಟು 5 ಮಂದಿಯನ್ನು ಬಂಽಸಿದ್ದಾರೆ.ಪಾರ್ಟಿಯಲ್ಲಿ ಡ್ರಗ್ಸ್ ಬಳಕೆಯಾಗಿರುವುದು ಕಂಡುಬಂದ ಹಿನ್ನಲೆಯಲ್ಲಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಎಲ್ಲರ ರಕ್ತದ ಮಾದರಿಯನ್ನು ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಅದರ ವರದಿ ಬಂದಿದ್ದು, 86 ಮಂದಿ ಮಾದಕವಸ್ತು ಸೇವಿಸಿರುವುದು ದೃಢಪಟ್ಟಿದೆ.

ಈ ರೇವು ಪಾರ್ಟಿ ಪ್ರಕರಣ ತನಿಖೆಯನ್ನು ಸಿಸಿಬಿ ಮಾದಕ ವಸ್ತು ನಿಗ್ರಹ ದಳದ ಅಽಕಾರಿ ಹಾಗೂ ಸಿಬ್ಬಂದಿ ನಡೆಸುತ್ತಿದ್ದಾರೆ.ಮೊದಲು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ನಂತರ ಫಾರ್ಮ್‌ಹೌಸ್‌ ಹೆಬ್ಬಗೋಡಿ ವ್ಯಾಪ್ತಿಗೆ ಬರುವುದರಿಂದ ಈ ಪ್ರಕರಣವನ್ನು ಹೆಬ್ಬಗೋಡಿ ಠಾಣೆಗೆ ವರ್ಗಾಯಿಸಲಾಗಿತ್ತು.ತದನಂತರ ಪೊಲೀಸ್‌ ಮಹಾನಿರ್ದೇಶಕರಾದ ಅಲೋಕ್‌ ಮೋಹನ್‌ ಅವರು ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದು, ತನಿಖೆ ಚುರುಕುಗೊಂಡಿದೆ.

RELATED ARTICLES

Latest News