ಬೆಂಗಳೂರು,ಫೆ.6- ಒಂದೇ ರಸ್ತೆಯಲ್ಲಿನ ಮೂರು ಅಂಗಡಿಗಳಲ್ಲಿ ಕಳ್ಳರು ಕೈ ಚಳಕ ತೋರಿಸಿ ಹಣ ಕಳ್ಳತನ ಮಾಡಿರುವ ಘಟನೆ ಕೆಪಿ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚೋಳೂರು ಪಾಳ್ಯದ ಮುಖ್ಯ ರಸ್ತೆಯಲ್ಲಿರುವ ಮೆಡಿಕಲ್ ಸ್ಟೋರ್ನಲ್ಲಿ 1ಲಕ್ಷ ಹಣ, ಬೇಕರಿಯಲ್ಲಿ ಮೂರ್ನಾಲ್ಕು ಸಾವಿರ ಹಣ ಹಾಗೂ ನಂದಿನಿ ಪಾರ್ಲರ್ನಲ್ಲಿ 3 ರಿಂದ 4 ಸಾವಿರ ಹಣವನ್ನು ಕಳ್ಳರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಈ ಚಾಲಾಕಿ ಕಳ್ಳರು ರಾತ್ರಿ ಈ ಮೂರು ಅಂಗಡಿಗಳ ರೋಲಿಂಗ್ ಶೆಟರ್ಗಳನ್ನು ಮೀಟಿ ಒಳ ನುಗ್ಗಿ ಹಣವನ್ನು ಮಾತ್ರ ಕಳ್ಳತನ ಮಾಡಿದ್ದು ಬೇರೆ ವಸ್ತುಗಳನ್ನು ಮುಟ್ಟಿಲ್ಲ. ಇಂದು ಬೆಳಗ್ಗೆ ಸುದ್ದಿ ತಿಳಿದು ಕೆಪಿ ಅಗ್ರಹಾರ ಠಾಣೆ ಪೊಲೀಸರು, ಶ್ವಾನ ದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.
ಈ ಬಗ್ಗೆ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಕಳ್ಳರ ಪತ್ತೆಗೆ ಶೋಧ ಕೈಗೊಂಡಿದ್ದಾರೆ.