ಬೆಂಗಳೂರು, ಏ.25- ಸಹೋದರಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿ ಆಘಾತಕ್ಕೊಳಗಾದ ಸಹೋದರನೂ ಸಾವಿಗೆ ಶರಣಾಗಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಶ್ರೀನಿವಾಸಪುರದ ನಿವಾಸಿ ರಮ್ಯಾ (27) ಹಾಗೂ ಪುನೀತ್ (22) ಆತ್ಮಹತ್ಯೆ ಶರಣಾದ ಸಾಕು ಮಗ, ರಮ್ಯಾ ಅವರು ವಕೀಲ ವೃತ್ತಿ ಮಾಡುತ್ತಿದ್ದರು,ಪುನೀತ್ಚಿಕ್ಕನಿಂದಲೂ ಇವರ ಮನೆಯಲ್ಲೇ ಬೆಳೆದಿದ್ದು ಸ್ವಂತ ಮಗನಂತೆ ಇದ್ದನು.
ಕೆಂಪಲಿಂಗನ ಹಳ್ಳಿಯ ತೋಟದ ಮನೆಯಲ್ಲಿ ಪುನೀತ್ ಇರುತ್ತಿದ್ದನು. ನಿನ್ನೆ ರಾತ್ರಿ ರಮ್ಯಾ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಅವರ ಮನಗೆ ಹೋಗಿ ನೋಡಿ ಆಘಾತಗೊಂಡಿದ್ದಾನೆ.
ಈ ವಿಷಯವನ್ನು ರಮ್ಯಾ ಅವರ ಸಂಬಂಧಿಕರಿಗೆ ಮೆಸೇಜ್ ಮಾಡಿ ನಂತರ ತೋಟದ ಮನೆಗೆ ಹೋಗಿ ಪುನೀತ್ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ರಮ್ಯಾ ಆತ್ಮಹತ್ಯೆಗೆ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ.
ಸುದ್ದಿ ತಿಳಿದು ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಇಬ್ಬರ ಮೃತದೇಹಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.