Friday, January 10, 2025
Homeಬೆಂಗಳೂರುಬೆಂಗಳೂರು : ಆರು ಜನ ಖತರ್ನಾಕ್ ಸೈಬರ್ ವಂಚಕರ ಬಂಧನ

ಬೆಂಗಳೂರು : ಆರು ಜನ ಖತರ್ನಾಕ್ ಸೈಬರ್ ವಂಚಕರ ಬಂಧನ

Bengaluru: Six dangerous cyber fraudsters arrested

ಬೆಂಗಳೂರು,ಡಿ.24- ಕಂಪನಿಯೊಂದರ ಲೋಗೋ ಹಾಗೂ ಎಂ.ಡಿ ಫೋಟೋವನ್ನು ವಾಟ್ಸಾಪ್ ನಲ್ಲಿ ಹಾಕಿ, ನಂಬಿಸಿ ಹಣವನ್ನು ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ ಹೊರ ರಾಜ್ಯದ ಆರು ಮಂದಿ ಸೈಬರ್ ವಂಚಕರನ್ನು ಸಿ.ಇ.ಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿ.ಟಿ.ಎಂ ಲೇಔಟ್ನ 2ನೇ ಹಂತದ ನಿವಾಸಿಯೊಬ್ಬರು ಸಾಫ್ಟ್ ವೇರ್ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಕಂಪನಿಯ ಲೋಗೊ ಹಾಗೂ ಎಂ.ಡಿ ಪೋಟೊವನ್ನು ವಾಟ್ಸಾಪ್ ಡಿಪಿಯಲ್ಲಿ ಹಾಕಿಕೊಂಡಿರುವ ವಾಟ್ಸಾಪ್ ನಂಬರ್ನಿಂದ ಕಂಪನಿಯ ಪ್ರೋಜೆಕ್ಟ್ ಆಡ್ವಾನ್ಸ್ ಸೆಕ್ಯೂರಿಟಿ ಡೆಪಾಜಿಟ್ಗಾಗಿ 56,00, 100ರೂ. ಹಣವನ್ನು
ವರ್ಗಾವಣೆ ಮಾಡಬೇಕಾಗುತ್ತದೆ ಎಂದು ವಾಟ್ಸಾಪ್ ಮೇಸೆಜ್ ಮೂಲಕ ಸಂದೇಶ ಬಂದಿದೆ.

ಇದನ್ನು ನಂಬಿದ ಅಕೌಂಟೆಂಟ್ ಹಣವನ್ನು ಕಂಪನಿಯ ಕರೆಂಟ್ ಅಕೌಂಟ್ನಿಂದ ವ್ಯಾಟ್‌್ಸಆಫ್ ಮೇಸೆಜ್ನಲ್ಲಿ ಸೂಚಿಸಿರುವ ಖಾತೆಗೆ ಹಣವನ್ನು ಜಮೆ ಮಾಡಿರುತ್ತಾರೆ. ತದನಂತರ ವಂಚನೆಗೊಳಗಾಗಿರುವ ಬಗ್ಗೆ ತಿಳಿದು, ತಕ್ಷಣ ಅವರು ಆಗ್ನೇಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು , ಸೈಬರ್ ವಂಚಕರ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಕಲೆ ಹಾಕಿದಾಗ ಹೈದರಬಾದ್ ಮೂಲದ ಆರೋಪಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ತಕ್ಷಣ ಹೈದರಾಬಾದ್ಗೆ ತೆರಳಿದ ಪೊಲೀಸರು ಹಯಾತ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಹೇಳಿದ್ದಾನೆ. ಅಲ್ಲದೇ ಇತರೆ ಐವರು ಸಹಚರರಿಗೆ ಹಣವನ್ನು ವರ್ಗಾಯಿಸಿರುವ ಬಗ್ಗೆ ತಿಳಿಸಿದ್ದು, ವರ್ಗಾವಣೆ ಮಾಡಿದ ಹಣವನ್ನು ವಿತ್ ಡ್ರಾ ಮಾಡಿಕೊಟ್ಟರೆ ಕಮಿಷನ್ ನೀಡುವುದಾಗಿ ತಿಳಿಸಿರುತ್ತಾನೆ.

ಆರೋಪಿ ನೀಡಿದ ಮಾಹಿತಿಯ ಮೇರೆಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನುಳಿದ 5 ಆರೋಪಿಗಳನ್ನು ಹೈದರಬಾದ್ನ ನಾರ್ಸಿಂಗೀ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಬಿನಾನ್ಸ್ ಎಂಬ ಅಪ್ಲಿಕೇಷನ್ನಲ್ಲಿ ಪರಿಚಯರಾದ ಅಪರಿಚಿತ ವ್ಯಕ್ತಿಯು, ನಾವು ನೀಡಿದ ಬ್ಯಾಂಕ್ ಖಾತೆಗಳಿಗೆ ಆರೋಪಿಗಳು ಹಣವನ್ನು ಹಾಕಿರುತ್ತಾರೆ. ಹಣವನ್ನು ವಿತ್ ಡ್ರಾ ಮಾಡಿ, ಯು.ಎಸ್.ಡಿ.ಟಿ ಅನ್ನು ಖರೀದಿ ಮಾಡಿ, ಅಧಿಕ ಬೆಲೆಗೆ ಅದೇ ಅಪರಿಚಿತ ವ್ಯಕ್ತಿಗೆ ಖಿಟಞಛಿಉಗಿ ಅಪ್ಲಿಕೇಷನ್ ಮೂಲಕ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.

ಈ ಪೈಕಿ ವಶಕ್ಕೆ ಪಡೆದ ಮೂವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿ ಕೃತ್ಯಕ್ಕೆ ಉಪಯೋಗಿಸಿದ 1-ಮೊಬೈಲ್ ಫೋನ್ ಹಾಗೂ ವಂಚಿಸಿದ್ದ ಹಣದಿಂದ ಖರೀದಿ ಮಾಡಿದ್ದ ಕಾರು ಮತ್ತು 58,600ರೂ. ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಲೀನ್ ಮಾಡಿ, ಅದರಲ್ಲಿದ್ದದ 5 ಲಕ್ಷ ಹಣವನ್ನು ಕಂಪನಿಯ ಖಾತೆಗೆ ಹಿಂದಿರುಗಿಸಲಾಗಿದೆ. ಸಿ.ಇ.ಎನ್ ಪೊಲೀಸ್ ಠಾಣೆಯ ಇನ್‌್ಸಪಕ್ಟರ್ ಈಶ್ವರಿ ಮತ್ತು ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News