Wednesday, December 25, 2024
Homeರಾಜ್ಯಅತುಲ್‌ ಸುಭಾಷ್‌ ಆತ್ಮಹತ್ಯೆ ಪ್ರಕರಣ : ಪತ್ನಿ ನಿಕಿತಾ ಸೇರಿ ಮೂವರು ಅರೆಸ್ಟ್

ಅತುಲ್‌ ಸುಭಾಷ್‌ ಆತ್ಮಹತ್ಯೆ ಪ್ರಕರಣ : ಪತ್ನಿ ನಿಕಿತಾ ಸೇರಿ ಮೂವರು ಅರೆಸ್ಟ್

Bengaluru Techie Atul Subhash’s Wife Nikita Singhania, Her Mother and Brother Arrested

ಬೆಂಗಳೂರು/ಯುಪಿ, ಡಿ.15 – ಇತ್ತೀಚೆಗೆ ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ಟೆಕ್ಕೆ ಅತುಲ್‌ ಸುಭಾಷ್‌ ಅವರ ಪತ್ನಿ ಸೇರಿದಂತೆ ಮೂವರನ್ನು ಹರಿಯಾಣದ ಗುರುಗ್ರಾಮ್‌ನಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಘಟನೆ ನಂತರ ತಲೆಮರೆಸಿಕೊಂಡಿದ್ದ ನಿಕಿತಾ ಸಿಂಘಾನಿಯಾ ಆಕೆಯ ತಾಯಿ ನಿಶಾ ಸಿಂಘಾನಿಯಾ ಮತ್ತು ಸಹೋದರ ಅನುರಾಗ್‌ ಸಿಂಘಾನಿಯಾ ಅವರನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬಂಧಿಸಲಾಗಿದೆಎಂದು ಪೊಲೀಸರುತಿಳಿಸಿದ್ದಾರೆ.

ಗುಪ್ತ ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೊಲೀಸ್‌‍ ತಂಡ ಶನಿವಾರ ಬೆಳಗ್ಗೆ ಅವೆನ್ನು ಪತ್ತೆ ಹಚ್ಚಿ ಬೆಂಗಳೂರಿಗೆ ಕರೆತರಲಾಗಿದ್ದು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿನಂತರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಅವರು ಹೇಳಿದರು.

34 ವರ್ಷದ ಸುಭಾಷ್‌ ಡಿಸೆಂಬರ್‌ 9 ರಂದು ಆಗ್ನೇಯ ಬೆಂಗಳೂರಿನ ಮುನ್ನೆಕೊಳಲು ಎಂಬಲ್ಲಿನ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದಕ್ಕೂ ಮುನ್ನ ಅವರು ಸುದೀರ್ಘ ವೀಡಿಯೊದಲ್ಲಿ ಸುಳ್ಳು ಪ್ರಕರಣಗಳು ಮತ್ತು ನಿರಂತರ ಚಿತ್ರಹಿಂಸೆ ಮೂಲಕ ತನ್ನನ್ನು ಆತಹತ್ಯೆಗೆ ದೂಡಿದ್ದಾರೆ ಎಂದು ಪತ್ನಿ ಮತ್ತು ಅತ್ತೆಯವರನ್ನು ದೂಷಿಸಿ ಮಾಡಿ ಸಮಾಜಿಕ ತಾಣದಲ್ಲಿ ಪೋಸ್ಟ್‌ ಮಾಡಿದ್ದರು.

ಮಾರತ್ತಹಳ್ಳಿ ಪೊಲೀಸರು ಆತಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡಿದ್ದು ಸದ್ಯ ತಲೆಮರೆಸಿಕೊಂಡಿದ್ದ ನಿಕಿತಾ ಹಾಗೂ ಇತರ ಇಬ್ಬರನ್ನು ಬಂಧಿಸಿ ಕಾನೂನು ಪ್ರಕ್ರಿಯೆ ನಡೆಸಲಾಗುತ್ತಿದೆ.

RELATED ARTICLES

Latest News