Tuesday, July 15, 2025
Homeರಾಜ್ಯಬೆಂಗಳೂರು : ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಇಬ್ಬರು ಉಪನ್ಯಾಸಕರು ಸೇರಿ ಮೂವರ ಬಂಧನ

ಬೆಂಗಳೂರು : ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಇಬ್ಬರು ಉಪನ್ಯಾಸಕರು ಸೇರಿ ಮೂವರ ಬಂಧನ

Bengaluru: Three including two lecturers arrested for raping a student

ಬೆಂಗಳೂರು,ಜು.15- ವಿದ್ಯಾರ್ಥಿನಿ ಮೇಲೆ ನಿರಂತರವಾಗಿ ಅತ್ಯಾಚಾರ ವೆಸಗಿದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಕಾಲೇಜೊಂದರ ಇಬ್ಬರು ಉಪನ್ಯಾಸಕರು ಹಾಗೂ ಸ್ನೇಹಿತನನ್ನು ಮಾರತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ, ಜೀವಶಾಸ್ತ್ರ ಉಪನ್ಯಾಸಕ ಸಂದೀಪ್ ಹಾಗೂ ಅವರ ಸ್ನೇಹಿತ ಅನೂಪ್ ಬಂಧಿತರು.ನೋಟ್ಸ್ ಕೊಡುವ ನೆಪದಲ್ಲಿ ವಿದ್ಯಾರ್ಥಿನಿ ಜೊತೆ ನರೇಂದ್ರ ಹತ್ತಿರವಾಗಿದ್ದು, ತದ ನಂತರದಲ್ಲಿ ಸಲಹೆ ಬೆಳೆಸಿಕೊಂಡು ಹಂತ ಹಂತವಾಗಿ ಚಾಟ್ ಮಾಡುತ್ತಿದ್ದನು.

ವಿದ್ಯಾರ್ಥಿನಿ ಬೆಂಗಳೂರಿಗೆ ಬಂದ ನಂತರವೂ ಚಾಟ್ ಮಾಡುವುದು ನಿಲ್ಲಿಸಿರಲಿಲ್ಲ. ನೋಟ್ಸ್ ಕೊಡುವ ನೆಪದಲ್ಲಿ ಮಾರತಹಳ್ಳಿಯಲ್ಲಿರುವ ಸ್ನೇಹಿತನ ರೂಂ ಗೆ ವಿದ್ಯಾರ್ಥಿನಿಯನ್ನು ಕರೆಸಿಕೊಂಡು ಅತ್ಯಾಚಾರವೆಸಗಿದ್ದು, ಈ ವಿಚಾರ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಉಪನ್ಯಾಸಕ ಸಂದೀಪ್ ಸಹ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾಗ ಆಕೆ ವಿರೋಧ ವ್ಯಕ್ತಪಡಿಸಿದಾಗ ನರೇಂದ್ರನ ಜೊತೆ ನೀನು ಇರುವ ಫೋಟೋ, ವಿಡಿಯೋ ನನ್ನ ಬಳಿ ಇದೆ ಎಂದು ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರವೆಸಗಿದ್ದಾನೆ.

ಘಟನೆ ಬೆನ್ನಲ್ಲೇ ವಿದ್ಯಾರ್ಥಿನಿಯನ್ನು ಸಂಪರ್ಕಿಸಿದ ಅನೂಪ್, ನೀನು ನನ್ನ ರೂಂಗೆ ಬಂದಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಎಂದು ಬೆದರಿಕೆ ಹಾಕಿ ಅತ್ಯಾಚಾರವೆಸಗಿದ್ದಾನೆ.ತನಗಾದ ಅನ್ಯಾಯವನ್ನು ಎದುರಿಸಲು ಸಾಧ್ಯವಾಗದೇ ವಿದ್ಯಾರ್ಥಿನಿ ಸಮ್ಮನಾಗಿದ್ದಳು. ತದ ನಂತರದಲ್ಲಿ ಉಪನ್ಯಾಸಕರಿಂದಲೇ ಸಮಸ್ಯೆ ಹೆಚ್ಚಾದಾಗ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಪೋಷಕರು ಮಹಿಳಾ ಆಯೋಗಕ್ಕೆ ಮಗಳನ್ನು ಕರೆದೊಯ್ದು ನಂತರ ಪೊಲೀಸರಿಗೆ ದೂರು ಕೊಡಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಇದೀಗ ಮೂವರನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ. ಈ ಹಿಂದೆಯೂ ಸಹ ಈ ಇಬ್ಬರು ಉಪನ್ಯಾಸಕರು ಕೆಲವು ವಿದ್ಯಾರ್ಥಿಗಳ ಮೇಲೆ ಅತ್ಯಾಚಾರವೆಸಗಿ ಬೆದರಿಕೆ ಹಾಕಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ.

RELATED ARTICLES

Latest News