ಬೆಂಗಳೂರು,ಫೆ.17- ಸಂಚಾರಿ ನಿಯಮಗಳನ್ನು ಪದೇ ಪದೇ ಉಲ್ಲಂಘನೆ ಮಾಡಿ ದಂಡ ಪಾವತಿಸದೇ 50 ಸಾವಿರಕ್ಕಿಂತ ಹೆಚ್ಚಿನ ಬಾಕಿ ಉಳಿಸಿಕೊಂಡಿದ್ದ ವಾಹನಗಳ ಪತ್ತೆ ಮಾಡು ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ದಕ್ಷಿಣ ವಿಭಾಗದ ಪೊಲೀಸರು 84 ದ್ವಿಚಕ್ರ ವಾಹನ ಹಾಗೂ ಒಂದು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ವಾಹನಗಳ ಮೇಲೆ ಒಟ್ಟು ಸುಮಾರು 10, 210 ವಿವಿಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಈ ವಾಹನಗಳ ಮೇಲೆ ಒಟ್ಟು ಸುಮಾರು 1.74 ಕೋಟಿ ರೂ. ದಂಡದ ಮೊತ್ತ ಬಾಕಿ ಇದ್ದು, ಪೊಲೀಸರು ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲಿದ್ದಾರೆ. ಹಿರಿಯ ಅಧಿಕಾರಿಗಳ ಸೂಚನೆಯಂತೆ ಸಂಚಾರ ನಿಯಮಗಳನ್ನು ಪದೇ ಪದೇ ಉಲ್ಲಂಘನೆ ಮಾಡಿ 50 ಸಾವಿರಕ್ಕಿಂತ ಹೆಚ್ಚಿನ ದಂಡದ ಮೊತ್ತ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದ ವಾಹನಗಳನ್ನು ಪತ್ತೆ ಮಾಡಲು ಸಂಚಾರ ದಕ್ಷಿಣ ವಿಭಾಗದ ಎಲ್ಲಾ ಸಹಾಯಕ ಪೊಲೀಸ್ ಆಯುಕ್ತರು ಮತ್ತು ಇನ್‍ಸ್ಪೆಕ್ಟರಿಗೆ ಸೂಚಿಸಲಾಗಿತ್ತು. ಅದರಂತೆ ವಿಶೇಷ ಕಾರ್ಯಾಚರಣೆ
ನಡೆಸಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಕರಾವಳಿ ಜನ ಬದಲಾವಣೆ ಮಾಡಲಿದ್ದಾರೆ : ಡಿಸಿಎಂ
ದಕ್ಷಿಣ ಉಪವಿಭಾಗ: 48 ವಾಹನ
ಜಯನಗರ -26 ವಾಹನ, ಬನಶಂಕರಿ 9, ಕೆ.ಎಸ್.ಲೇಔಟ್-5, ಬಸವನಗುಡಿ-4, ವಿವಿಪುರಂ -4 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಗ್ನೇಯ ಉಪವಿಭಾಗ -29 ವಾಹನ.
ಹುಳಿಮಾವು -11 ವಾಹನ, ಆಡುಗೋಡಿ -11, ಮೈಕೋಲೇಔಟ್-6, ಮಡಿವಾಳ-1 ವಾಹನ ಜಪ್ತಿ ಮಾಡಲಾಗಿದೆ.
ಎಚ್‍ಎಸ್‍ಆರ್ ಲೇಔಟ್ ಉಪವಲಯ- 8 ವಾಹನ.
ಎಚ್‍ಎಸ್‍ಆರ್ ಲೇಔಟ್- 3 ವಾಹನ, ಎಲೆಕ್ಟ್ರಾನಿಕ್ ಸಿಟಿ -3 ವಾಹನ, ಬೆಳ್ಳಂದೂರು – 2 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.