Thursday, November 21, 2024
Homeಬೆಂಗಳೂರುಸಣ್ಣ ಮಳೆಗೂ ಬುಡಮೇಲಾಗುತ್ತಿರುವುದು ವಿದೇಶಿ ಮರಗಳಂತೆ

ಸಣ್ಣ ಮಳೆಗೂ ಬುಡಮೇಲಾಗುತ್ತಿರುವುದು ವಿದೇಶಿ ಮರಗಳಂತೆ

ಬೆಂಗಳೂರು,ಆ.30 – ನಗರದಲ್ಲಿ ಮಳೆ ಬಿದ್ದಾಗ ಧರೆಗುರುಳಿ ಬಿದ್ದು ಜನರ ಪ್ರಾಣಕ್ಕೆ ಕಂಟಕವಾಗುತ್ತಿರುವುದು ವಿದೇಶಿ ಅಲಂಕಾರಿಕ ಮರಗಳು ಎನ್ನುವುದು ಇದೀಗ ಪತ್ತೆಯಾಗಿದೆ. ಮೂವತ್ತು ವರ್ಷದ ಹಿಂದೆ ನಗರದ ರಸ್ತೆ ಬದಿಗಳಲ್ಲಿ ನೆಟ್ಟಿದ್ದ ವಿದೇಶಿ ಅಲಂಕಾರಿಕ ಮರಗಳಿಂದಲೇ ಹೆಚ್ಚು ಅನಾಹುತ ಆಗುತ್ತಿರುವುದು ಎನ್ನುವುದು ಬೆಳಕಿಗೆ ಬಂದಿದೆ.

ವಿದೇಶಿ ತಳಿಯ ಫ್ಯಾನ್ಸಿ ಟ್ರೀಸ್‌‍ಗಳು ಸಣ್ಣ ಗಾಳಿ , ಮಳೆಗೂ ಧರೆಗುರುಳಿ ಬೀಳುತ್ತಿವೆ. ಈ ಮರಗಳು ಭೂಮಿಯಲ್ಲಿ ಹೆಚ್ಚು ಬೇರೂರದೆ ಇರೋದ್ರಿಂದ ಸಣ್ಣ ಮಳೆಗಾಳಿಗೆ ಬೀಳುತ್ತಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ನಗರದಲ್ಲಿ ಅದರಲ್ಲೂ ದಕ್ಷಿಣ ವಿಭಾಗದಲ್ಲಿ ರಸ್ತೆಗಳಲ್ಲಿ ಅತಿ ಹೆಚ್ಚು ನೆಟ್ಟಿರುವ ವಿದೇಶಿ ಅಲಂಕಾರಿಕ ಮರಗಳೇ ಇದೀಗ ಜನರಿಗೆ ಮಾರಕವಾಗಿ ಪರಿಣಮಿಸಿದೆ. ಮಳೆ ಬಂದಾಗ ಜನ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ. ಮಾತ್ರವಲ್ಲ ಮರ ಬೀಳೋದರಿಂದ ವಾಹನಗಳು ಜಖಂ ಆಗೋದು, ವಿದ್ಯುತ್‌‍ ತಂತಿಗಳು ಕೆಳಗೆ ಬೀಳೊದು ,ರಸ್ತೆ ಬಂದ್‌‍ ಆಗೋದು ಹಲವು ಅಪಾಯಕಾರಿ ಪರಿಸ್ಥಿತಿ ಗಳಿಂದ ಜನ ಹೈರಾಣಗಿದ್ದಾರೆ.

ಉದ್ಯಾನ ನಗರಿಯ ಸೌಂದರ್ಯ ಹೆಚ್ಚುಸುವ ಕಾರಣಕ್ಕೆ ನಗರದ ಶೇಕಡ 50ಕ್ಕಿಂತ ಹೆಚ್ಚು ಕಡೆಗಳಲ್ಲಿ 40-50 ವರ್ಷಗಳ ಹಿಂದೆಯೇ ವಿದೇಶಿ ಫ್ಯಾನ್ಸಿ ಗಿಡಗಳನ್ನು ನೆಡಲಾಗಿತ್ತು. ಇಂತಹ ಗಿಡಗಳನ್ನು ನೆಡುವ ಬದಲು ಪಾಲಿಕೆಯಿಂದ ಅಶ್ವತ್ಥ, ಅರಳಿ, ಹೊಂಗೆ, ಹುಣಸೆ, ಮಾವು, ಬೇವು, ಹಲಸು, ಆಕಾಶಗಂಗೆ ಅಂತಹ ದೇಶಿ ತಳಿಯ ಮರಗಳನ್ನು ನೆಡುವಂತೆ ಪರಿಸರ ತಜ್ಞರು ಸಲಹೆ ನೀಡಿದ್ದಾರೆ.
ಈ ಮರಗಳ ಬೇರು ಭೂಮಿಯ ಆಳಕ್ಕೆ ಇಳಿಯುತ್ತವೆ. ಎಂತಹ ಗಾಳಿ, ಮಳೆಗೂ ಉರುಳದೆ ನೂರಾರು ವರ್ಷ ಗಟ್ಟಿಯಾಗಿ ನಿಲ್ಲುತ್ತವೆ ಎಂಬುದು ಪರಿಸರವಾದಿಗಳ ಅಭಿಪ್ರಾಯ.

4 ತಿಂಗಳಲ್ಲಿ 1271 ಮರಗಳು ಬುಡಮೇಲು
ಕಳೆದ ನಾಲ್ಕು ತಿಂಗಳಿನಲ್ಲಿ ನಗರದಲ್ಲಿ 1271 ಮರಗಳು ಬುಡಮೇಲಾಗಿವೆ. ಅದರಲ್ಲೂ ಬಿಬಿಎಂಪಿ ದಕ್ಷಿಣ ವಲಯದಲ್ಲಿ ಅತೀ ಹೆಚ್ಚು ಮರಗಳು ನೆಲಕ್ಕುರುಳಿರುವುದು ಪತ್ತೆಯಾಗಿದೆ.
ದಕ್ಷಿಣ ವಲಯ -383
ಪಶ್ಚಿಮ ವಲಯ- 239
ಆರ್‌‍.ಆರ್‌‍. ನಗರ -189
ಪೂರ್ವ ವಲಯ-129
ಯಲಹಂಕ ವಲಯ-99
ಬೊಮನಹಳ್ಳಿ ವಲಯ-87
ಮಹದೇವಪುರ ವಲಯ-76
ದಾಸರಹರಳ್ಳಿ ವಲಯ-69
ಒಟ್ಟು- 1271

RELATED ARTICLES

Latest News