ಬೆಂಗಳೂರು, ಡಿ.12- ಬ್ರಾಂಡ್ ಬೆಂಗಳೂರು ಮಾಡಲು ಸರ್ಕಾರ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳು ತ್ತಿದೆ. ಆದರೆ ಕಳಪೆ ಕಾಮಗಾರಿಗಳು ಇದಕ್ಕೆ ಕಪ್ಪು ಚುಕ್ಕೆ ಇಡುತ್ತಿವೆ. ನಗರದಲ್ಲಿ ವೈಟ್ ಟಾಪಿಂಗ್ ರಸ್ತೆ ಕುಸಿತ ವಾಗಿದ್ದು, ಭಾರೀ ಹೊಂಡ ಸೃಷ್ಟಿಯಾಗಿ ಅನಾಹುತ ತಪ್ಪಿದೆ.
ಹಲಸೂರು ಕೆರೆ ಬಳಿಯ ಡಿ.ಭಾಸ್ಕರನ್ ರಸ್ತೆಯಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆಯಷ್ಟೆ ನಿರ್ಮಾಣ ಮಾಡಲಾಗಿದ್ದ ವೈಟ್ ಟಾಪಿಂಗ್ ರಸ್ತೆ ಏಕಾಏಕಿ ರಾತ್ರಿ ಕುಸಿದಿದ್ದು, ಬೃಹತ್ ಕಂದಕ ನಿರ್ಮಾಣವಾಗಿದೆ. ರಾತ್ರಿ ವೇಳೆ ರಸ್ತೆ ಕುಸಿದಿದ್ದು, ಒಂದು ವೇಳೆ ವಾಹನ ಸವಾರರು ವೇಗವಾಗಿ ಬಂದು ಗುಂಡಿಯೊಳಗೆ ಬಿದ್ದಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು.
ಇನ್ಷ್ಯೂರೆನ್ಸ್ ಕಂಪೆನಿ ಹೆಸರಲ್ಲಿ ಯಾಮಾರಿಸ್ತಾರೆ ಹುಷಾರ್..!
ಕಳಪೆ ಕಾಮಗಾರಿಯೇ ರಸ್ತೆ ಕುಸಿತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು, ವಾಹನ ಸವಾರರು ದೂರಿದ್ದಾರೆ. ಬ್ರಾಂಡ್ ಬೆಂಗಳೂರು ಮಾಡಲು ಸರ್ಕಾರ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಆದರೆ, ಕಳಪೆ ಕಾಮಗಾರಿಗಳು ಇದಕ್ಕೆ ತೊಡಕಾಗಿವೆ ಎಂದು ಸ್ಥಳೀಯರು ದೂರಿದ್ದಾರೆ.
ರಸ್ತೆಯ ಗುಣಮಟ್ಟ ಬಟಾ ಬಯ ಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ರಸ್ತೆಗುಂಡಿ ದೃಶ್ಯ ಭಾರೀ ವೈರಲ್ ಆಗಿದೆ. ರಸ್ತೆ ರಸ್ತೆ ಹೊಂಡದ ಸುತ್ತ ಬ್ಯಾರಿಕೇಡ್ ಹಾಕಿದ್ದು, ಸಂಚಾರಿ ಪೊಲೀಸರು ವಾಹನ ಸವಾರರಿಗೆ ಸೂಚನೆ ನೀಡುತ್ತಿದ್ದಾರೆ.