ಬೆಂಗಳೂರು, ಅ.24– ಸಿಲಿಕಾನ್ ಸಿಟಿಯಲ್ಲಿ ವಾಸಿಸುತ್ತಿರುವ ಬುದ್ದಿವಂತ ಜನರ ಬೇಜವಬ್ದಾರಿ ಮಾತ್ರ ದೂರ ಆಗಿಲ್ಲ.ಮತದಾನಕ್ಕೂ ಮುಂದೆ ಬಾರದ, ಕಸ ಎಲ್ಲೆಂದರಲ್ಲಿ ಎಸೆಯುವ ಈ ಜನರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೂ ಕ್ಯಾರೆ ಎನ್ನುತ್ತಿಲ್ಲ.
ಇದುವರೆಗೂ ಜಿಬಿಎ ವ್ಯಾಪ್ತಿಯಲ್ಲಿ ಆಗಿರುವುದು ಕೇವಲ ಶೇ.40 ರಷ್ಟು ಸಮೀಕ್ಷೆ ಮಾತ್ರ ಎಂದರೆ ನೀವೇ ಊಹಿಸಿಕೊಳ್ಳಿ ಈ ಜನರ ಬೇಜವಾಬ್ದರಿತನವನ್ನು. ಜಾತಿ ಗಣತಿಗೆ ಸಿಲಿಕಾನ್ ಸಿಟಿ ಜನ ಹಿಂದೇಟು ಹಾಕುತ್ತಿರುವುದು ಕಂಡು ಬಂದಿದ್ದು, ಲಕ್ಷಾಂತರ ಮಂದಿ ನಮಗೆ ಸಮೀಕ್ಷೆ ಬೇಡವೇ ಬೇಡ ಎನ್ನುತ್ತಿದ್ದಾರಂತೆ.
ಇನ್ನು ಮಳೆ ಗಾಳಿ ಎನ್ನದೆ ಸಮೀಕ್ಷೆಗೆ ತೆರಳುವ ಗಣತಿದಾರರಿಗೆ ಸರಿಯಾದ ರೆಸ್ಪಾನ್‌್ಸ ಸಿಕ್ತಿಲ್ಲ. ನಗರದಲ್ಲಿ ಸುಮಾರು 1.40 ಕೋಟಿ ಜನ ಸಂಖ್ಯೆ ಇದ್ದು, ಸುಮಾರು 45 ಲಕ್ಷ ಮನೆಗಳಿವೆ ಎಂದು ಅಂದಾಜಿಸಲಾಗಿದೆ.
ಕೋಟಿ ಕೋಟಿ ಮಂದಿಯಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಮೀಕ್ಷೆ ಗೆ ಸ್ವಂದಿಸುತ್ತಿದ್ದಾರೆ. ಅರ್ಧದಷ್ಟು ಮಂದಿ ಸಮೀಕ್ಷೆಗೆ ಡೊಂಟ್ ಕೇರ್ ಅನ್ನುತ್ತಿದ್ದಾರೆ.ಮನೆ ಬಾಗಿಲಿಗೆ ಹೊಗುವ ಗಣತಿದಾರರಿಗೆ ಸಮೀಕ್ಷೆ ಬೇಡ ಅಂತ ಹೇಳಿ ಕಳುಹಿಸುತ್ತಿರುವವ ಸಂಖ್ಯೆ ಹೆಚ್ಚಳವಾಗುತ್ತಿದೆ.
ಮುಖ್ಯಮಂತ್ರಿಗಳು ಸೆ.30 ರೊಳಗೆ ಸಮೀಕ್ಷೆ ಪೂರ್ಣಗೊಳಿಸುವಂತೆ ಡೆಡ್‌ಲೈನ್ ನೀಡಿದ್ದಾರೆ. ಆದರೆ, ಸಿಟಿ ಮಂದಿ ಮಾತ್ರ ಗಣತಿಗೆ ಡೋಂಟ್‌ಕೇರ್ ಎನ್ನುತ್ತಿದ್ದಾರೆ ಏನು ಮಾಡುವುದು ಎಂದು ತಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್‌ರಾವ್ ಅವರು.
