Friday, November 22, 2024
Homeಅಂತಾರಾಷ್ಟ್ರೀಯ | Internationalಎಲೋನ್ ಮಸ್ಕ್ ಹಿಂದಿಕ್ಕಿ ವಿಶ್ವದ ಶ್ರೀಮಂತ ವ್ಯಕ್ತಿಯಾದ ಅರ್ನಾಲ್ಟ್

ಎಲೋನ್ ಮಸ್ಕ್ ಹಿಂದಿಕ್ಕಿ ವಿಶ್ವದ ಶ್ರೀಮಂತ ವ್ಯಕ್ತಿಯಾದ ಅರ್ನಾಲ್ಟ್

ನವದೆಹಲಿ,ಜ.29-ಮೊಯೆಟ್ ಹೆನ್ನೆಸ್ಸಿ ಲೂಯಿಸ್ ವಿಟಾನ್ (ಎಲ್‍ವಿಎಂಎಚ್) ನ ಅಧ್ಯಕ್ಷ ಮತ್ತು ಸಿಇಓ ಬರ್ನಾರ್ಡ್ ಅರ್ನಾಲ್ಟ್ ಅವರು ಎಲೋನ್ ಮಸ್ಕ್ ಅವರನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಫೋಬ್ಸರ್ ಪ್ರಕಾರ, ಫ್ರೆಂಚ್ ಬಿಲಿಯನೇರ್ ಮತ್ತು ಅವರ ಕುಟುಂಬದ ನಿವ್ವಳ ಮೌಲ್ಯವು 23.6 ಶತಕೋಟಿ ಹೆಚ್ಚಳದ ನಂತರ 207.6 ಶತಕೋಟಿಗೆ ಏರಿಕೆಯಾಗಿದೆಯಂತೆ.

ಅರ್ನಾಲ್ಟ್ ಅವರ ನಿವ್ವಳ ಮೌಲ್ಯವು ಟೆಸ್ಲಾ ಸಿಇಓ ಮಸ್ಕ್ ಅವರ 204.7 ಶತಕೋಟಿ ನಿವ್ವಳ ಮೌಲ್ಯವನ್ನು ದಾಟಿತು, ಇದು 13 ಪ್ರತಿಶತದಷ್ಟು ಕುಸಿಯಿತು ಮತ್ತು ಮಸ್ಕ್ 18 ಶತಕೋಟಿಗಿಂತ ಹೆಚ್ಚು ಕಳೆದುಕೊಂಡರು ಎಂದು ವರದಿ ಹೇಳಿದೆ.

ಅಮೆರಿಕಾದಲ್ಲಿ ನಿರಾಶ್ರಿತ ವ್ಯಕ್ತಿಯಿಂದ ಭಾರತೀಯ ವಿದ್ಯಾರ್ಥಿಯ ಕೊಲೆ

ಇಬ್ಬರು ಬಿಲಿಯನೇರ್‍ಗಳು 2022 ರಿಂದ ಸಂಪತ್ತಿನ ಟಗ್ -ಆಫ್-ವಾರ್‍ನಲ್ಲಿ ತೊಡಗಿಸಿಕೊಂಡಿದ್ದಾರೆ, ಅರ್ನಾಲ್ಟ ಈ ವರ್ಷದ ಕೊನೆಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಟೆಸ್ಲಾ ಅವರ 586.14 ಶತಕೋಟಿಗೆ ಹೋಲಿಸಿದರೆ, ಎಲ್‍ವಿಎಂಎಚ್ ನ ಮಾರುಕಟ್ಟೆ ಕ್ಯಾಪ್ -ಡಿಯೊರ್, ಬಲ್ಗರಿ ಮತ್ತು ಸೆಫೋರಾದಂತಹ ಐಷಾರಾಮಿ ಸರಕುಗಳ ಬ್ರಾಂಡ್‍ಗಳ ಹಿಂದಿನ ಘಟಕವು 388.8 ಶತಕೋಟಿಯನ್ನು ತಲುಪಿದೆ ಎಂದು ವರದಿಯು ಬಹಿರಂಗಪಡಿಸಿದೆ.

ಫೋಬ್ರ್ಸ್ ಸಂಸ್ಥೆ ಯ 10 ಶ್ರೀಮಂತ ವ್ಯಕ್ತಿಗಳು:

ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬ (207.6 ಬಿಲಿಯನ್), ಎಲೋನ್ ಮಸ್ಕ್ (204.7 ಬಿಲಿಯನ್) , ಜೆಫ್ ಬೆಜೋಸ್ (181.3 ಬಿಲಿಯನ್) , ಲ್ಯಾರಿ ಎಲಿಸನ್ (142.2 ಬಿಲಿಯನ್) , ಮಾರ್ಕ್ ಜುಕರ್‍ಬರ್ಗ್ (139.1 ಬಿಲಿಯನ್), ವಾರೆನ್ ಬಫೆಟ್ (127.2 ಬಿಲಿಯನ್), ಲ್ಯಾರಿ ಪೇಜ್ (127.1 ಬಿಲಿಯನ್), ಬಿಲ್ ಗೇಟ್ಸ್ (122.9 ಬಿಲಿಯನ್), ಸೆರ್ಗೆ ಬ್ರಿನ್ (121.7 ಬಿಲಿಯನ್), ಸ್ಟೀವ್ ಬಾಲ್ಮರ್ (118.8 ಬಿಲಿಯನ್ ).ಆಗಿದ್ದಾರೆ.

ಆದಾಗ್ಯೂ, ಬ್ಲೂಮ್‍ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ 199 ಬಿಲಿಯನ್ ಸಂಪತ್ತಿನ ನಿವ್ವಳ ಮೌಲ್ಯದೊಂದಿಗೆ ಮಸ್ಕ್ ಇನ್ನೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಹೇಳಿಕೊಂಡಿದೆ.

RELATED ARTICLES

Latest News