ಬೆಂಗಳೂರು,ಜು. 30,: ವಿದ್ಯುತ್ ಬಿಲ್ ಪಾವತಿಗೆ ಬೆಸ್ಕಾಂ ಕಚೇರಿಗಳಲ್ಲಿರುವ ಎಟಿಪಿ (ಎನಿ ಟೈಮ್ ಪೇಮೆಂಟ್) ಪಾವತಿ ಯಂತ್ರದ ಸೇವೆಯನ್ನು ಆಗಸ್ಟ್ 1 ರಿಂದ ಸ್ಥಗಿತಗೊಳಿಸಲಾಗುವುದು.
ಬೆಸ್ಕಾಂ ಉಪ ವಿಭಾಗ ಕಚೇರಿಗಳಲ್ಲಿರುವ ನಗದು ಪಾವತಿ ಕೇಂದ್ರಗಳು, ಬೆಂಗಳೂರು ಒನ್, ಬೆಸ್ಕಾಂ ವ್ಯಾಪ್ತಿಯಲ್ಲಿರುವ ಕರ್ನಾಟಕ ಒನ್, ಆನ್ ಲೈನ್ ಪಾವತಿ ವಿಧಾನಗಳಾದ ಬೆಸ್ಕಾಂ ವೆಬ್ ಸೈಟ್, ಬೆಸ್ಕಾಂ ಮಿತ್ರ ಆ್ಯಪ್ ಮೂಲಕ ಗ್ರಾಹಕರು ವಿದ್ಯುತ್ ಬಿಲ್ ಪಾವತಿಸಬಹುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ವಿದ್ಯುತ್ ಬಿಲ್ ನೀಡುವ ಸ್ಪಾಟ್ ಬಿಲ್ಲಿಂಗ್ ಡಿವೈಸ್, ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ (ಬಿಬಿಪಿಎಸ್), ನೆಫ್ಟ್, ಇಸಿಎಸ್ ಹಾಗೂ ಇತರೆ ಮೂಲಕ ಕೂಡ ಬಿಲ್ ಪಾವತಿಸಲು ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದೆ.
ಅಲ್ಲದೇ, ಯುಪಿಐ ಪಾವತಿ (ಗೂಗಲ್ ಪೇ, ಫೋನ್ ಪೇ, ಪೇಟಿಎಂ,ಭೀಮ್ ಮುಂತಾದ ಆ್ಯಪ್) ಮೂಲಕವೂ ವಿದ್ಯುತ್ ಬಿಲ್‌ಗಳನ್ನು ಪಾವತಿಸಬಹುದಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
- ಚಿಕ್ಕಮಗಳೂರು : ಇಬ್ಬರ ಮೇಲೆ ಚಿರತೆ ದಾಳಿ
- ತಾಯಿಯನ್ನು ಕೊಲೆ ಮಾಡಿ ಪಕ್ಕದಲ್ಲೇ ಮಲಗಿದ್ದ ಪಾಪಿ ಮಗ
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-07-2025)
- ಡಿ.ಕೆ. ಸುರೇಶ ಕೆಎಂಎಫ್ ಅಧ್ಯಕ್ಷಗಾದಿ ಕನಸಿಗೆ ನಾನಾ ವಿಘ್ನ
- “ದಿ ರಾಮೇಶ್ವರಂ ಕೆಫೆ” ವತಿಯಿಂದ ಉತ್ತರ ಭಾರತದ ಶೈಲಿಯ “ತೀರ್ಥ” ಕೆಫೆ ಆರಂಭ