Wednesday, September 17, 2025
Homeಜಿಲ್ಲಾ ಸುದ್ದಿಗಳು | District Newsಭದ್ರಾವತಿ : ಬಿಜೆಪಿ ಮುಖಂಡನ ಮೇಲೆ ದುಷ್ಖರ್ಮಿಗಳ ಹಲ್ಲೆ

ಭದ್ರಾವತಿ : ಬಿಜೆಪಿ ಮುಖಂಡನ ಮೇಲೆ ದುಷ್ಖರ್ಮಿಗಳ ಹಲ್ಲೆ

ಭದ್ರಾವತಿ,ಡಿ.11-ಹೊಟೇಲಿಗೆ ಬಂದು ಊಟ ಪಾರ್ಸಲ್ ತೆಗೆದುಕೊಳ್ಳುತ್ತಿದ್ದ ಬಿಜೆಪಿ ಮುಖಂಡನ ಮೇಲೆ ದುಷ್ಖರ್ಮಿಗಳ ಗುಂಪೊಂದು ಏಕಾಏಕಿ ನುಗ್ಗಿ ಹಲ್ಲೆ ನಡೆಸಿದ ಘಟನೆ ಭದ್ರಾವತಿ ಪಟ್ಟಣದಲ್ಲಿ ಕಳೆದ ರಾತ್ರಿ ನಡೆದಿದೆ. ಗೋಕುಲ್ ಕೃಷ್ಣನ್ ಹಲ್ಲೆಗೊಳಗಾದ ಬಿಜೆಪಿ ಮುಖಂಡ.

ಊಟ ಪಾರ್ಸಲ್ ತೆಗೆದುಕೊಳ್ಳಲು ಗೋಕುಲ್ ಅವರು ಬಿ.ಹೆಚ್.ರಸ್ತೆಯ ಕಾಂಚನ್ ಹೋಟೆಲïಗೆ ಹೋಗಿದ್ದರು. ಈ ವೇಳೆ 7 ಮಂದಿ ದುಷ್ಕರ್ಮಿಗಳ ಗುಂಪು ಹೊಟೇಲಿಗೆ ನುಗ್ಗಿ ದೊಣ್ಣೆಯಿಂದ ಮೇಲೆ ಹಲ್ಲೆ ನಡೆಸಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-12-2023)

ಹಣೆ ಮತ್ತು ಕಿವಿಗೆ ಬಲವಾಗಿ ಹೊಡೆತ ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಕೆಸುದುಬಿದ್ದ ಗೋಕುಲ್ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕಳೆದ ಡಿ.9 ರಂದು ಮಧ್ಯಾಹ್ನ ಗೋಕುಲ್ ಅವರ ಹೊಸ ಕಾರು ದುಷ್ಕರ್ಮಿಗಳು ಜಖಂಗೊಳಿಸಿದ್ದರು.ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು ಈಗ ಅವರ ಮೇಲೆ ಹಲ್ಲೆ ನಡೆದಿದೆ.

ಗೋಕುಲ್ ಅವರು ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ್ ವಿರುದ್ಧ ಫೇಸ್ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಪೊೀಸ್ಟ್ ಮಾಡಿದ ಬಳಿಕ ನಿನ್ನೆ ಕಾರು ಜಖಂಗೊಳಿಸಿದ್ದ ದುಷ್ಕರ್ಮಿಗಳ ರಾತ್ರಿ ವೇಳೆ ಬಿಜೆಪಿ ಮುಖಂಡ ಗೋಕುಲ್ ಗೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯನ್ನು ಶಿವಮೊಗ್ಗ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಖಂಡಿಸಿದ್ದಾರೆ.

RELATED ARTICLES

Latest News