Monday, January 20, 2025
Homeಮನರಂಜನೆವಿಷ್ಣು, ರಜನಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ವಿಜಯ್‌ ರಂಗರಾಜು ವಿಧಿವಶ

ವಿಷ್ಣು, ರಜನಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ವಿಜಯ್‌ ರಂಗರಾಜು ವಿಧಿವಶ

Bhairava Dweepam fame Vijaya Rangaraju passed away in Chennai

ಚೆನ್ನೈ, ಜ.20- ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಕ್ಷಿಣ ಭಾರತದ ಖ್ಯಾತ ಪೋಷಕ ನಟ, ಸಾಹಸ ನಿರ್ದೇಶಕ ವಿಜಯ್‌ ರಂಗರಾಜು ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಸಾಹಸಸಿಂಹ ವಿಷ್ಣುವರ್ಧನ್‌, ರಜನಿಕಾಂತ್‌ ಕುರಿತು ವಿವಾದಾತಕ ಹೇಳಿಕೆ ನೀಡಿದ್ದ ರಂಗರಾಜನ್‌ ಅವರು ನಂದಮೂರಿ ಬಾಲಕೃಷ್ಣ ನಟನೆಯ ಭೈರವ ದ್ವೀಪಂ ಸಿನಿಮಾದ ಮೂಲಕ ಬಣ್ಣದ ಲೋಕ ಪ್ರವೇಶಿಸಿದ್ದರು.

ಸೀತಾಕಲ್ಯಾಣಂ, ಉರಿ, ಯಜ್ಞಂ, ವಿಶಾಖ ಎಕ್‌್ಸ ಪ್ರೆಸ್‌‍ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ವಿಜಯ್‌ ರಂಗರಾಜನ್‌ ಅವರು ಕಳೆದ ವಾರ ಹೈದ್ರಾಬಾದ್‌ ನಲ್ಲಿ ಚಿತ್ರೀಕರಣದ ವೇಳೆ ಗಾಯಗೊಂಡಿದ್ದರು. ಇಬ್ಬರು ಹೆಣ್ಣು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿರುವ ಅವರಿಗೆ ತೆಲುಗು ಚಿತ್ರರಂಗದ ಹಲವು ಕಲಾವಿದರು ಹಾಗೂ ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.

RELATED ARTICLES

Latest News